ಶೈಕ್ಷಣಿಕ ಸಾಲ ವನ್ನು ಮನ್ನಾ ಮಾಡ ಬೇಕೆಂದು ವಿಧಾನಪರಿಷತ್ ಸದಸ್ಯ ಆಯ ನೂರು ಮಂಜುನಾಥ್ ಒತ್ತಾ ಯಿಸಿದರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವುದಕ್ಕಾಗಿ ಬ್ಯಾಂಕುಗಳಲ್ಲಿ ತಮ್ಮ ಪೋಷಕರ ಸಣ್ಣಪುಟ್ಟ ಆಸ್ತಿಯನ್ನು ಅಡವಿಟ್ಟು ಸಾಲವನ್ನು ತೆಗೆದುಕೊಂಡಿರುತ್ತಾರೆ. ಈ ಸಾಲ ವನ್ನು ಕಟ್ಟುವಂತೆ ಬ್ಯಾಂಕ್ ಒತ್ತಡ ಹೇರುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ಶೈಕ್ಷಣಿಕ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಶೈಕ್ಷಣಿಕ ಸಾಲವನ್ನು ಶ್ರೀಮಂ ತರು ಯಾರೂ ತೆಗೆದುಕೊಳ್ಳು ವುದಿಲ್ಲ. ಗ್ರಾಮೀಣ ಭಾಗದ ಕೃಷಿ ಕುಟುಂಬದ ಮಕ್ಕಳು ಶೈಕ್ಷಣಿಕ ಸಾಲವನ್ನು ಉನ್ನತ ಶಿಕ್ಷಣ ಪಡೆ ಯುವುದಕ್ಕಾಗಿ ತೆಗೆದುಕೊಂಡಿ ರುತ್ತಾರೆ. ಉನ್ನತ ಶಿಕ್ಷಣವನ್ನು ಪಡೆದುಕೊಂಡ ನಂತರ ಉದ್ಯೋ ಗವೂ ಸಹ ಸಿಗುತ್ತಿಲ್ಲ. ಇದರ ನಡುವೆ ಬ್ಯಾಂಕ್ ಅಧಿಕಾರಿಗಳು ಸಾಲ ತೀರಿಸುವಂತೆ ಒತ್ತಡ ಹೇರು ತ್ತಿದ್ದಾರೆ. ಇದು ವಿದ್ಯಾವಂತ ನಿರು ದ್ಯೋಗಿ ಯುವಕರಿಗೆ ಮಾನಸಿ ಕವಾಗಿ ಯಾತನೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಶೈಕ್ಷಣಿಕ ಸಾಲ ಮನ್ನಾ ವಿಚಾರದಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕೆಂದರು.
ವಿದ್ಯಾವಂತ ನಿರುದ್ಯೋಗಿ ಯುವಕರು ಸಾಲ ಮರುಪಾವತಿ ಮಾಡಲಾಗದೇ ಇರುವುದರಿಂದ ಮಾನಸಿಕವಾಗಿ ತೀವ್ರ ನೊಂದಿ ದ್ದಾರೆ. ಇವರುಗಳು ಆತ್ಮಹತ್ಯೆ ಹಾದಿಯನ್ನು ಹಿಡಿದರೂ ಕೂಡಾ ಆಶ್ಚರ್ಯಪಡಬೇಕಿಲ್ಲ. ಇಂತಹ ಪರಿ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕೇವಲ ಎಸ್ಸಿ-ಎಸ್ಟಿ ಅಭ್ಯರ್ಥಿಗಳ ಸಾಲ ಮನ್ನಾ ಮಾಡಲು ಮುಂದಾ ಗಿದೆ. ಇದರ ಬದಲು ಎಲ್ಲಾ ಶೈಕ್ಷ ಣಿಕ ಸಾಲವನ್ನು ಮನ್ನಾ ಮಾಡ ಬೇಕೆಂದರು.
ಬೆಂಗಳೂರಿನಲ್ಲಿ ಅ.೧೧ರಂದು ಖಾಸಗಿ ಅನುದಾನಿತ ಶಾಲೆಗಳ ನೌಕರರು ವಿವಿಧ ಬೇಡಿಕೆಗಳ ಈಡೇ ರಿಕೆಗೆ ಪ್ರತಿಭಟನೆ ನಡೆಸುತ್ತಿದ್ದು, ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅನುದಾನಿತ ಖಾಸಗಿ ಶಾಲೆಗಳಿಗೆ ಸರ್ಕಾರವೇ ವೇತನ ಸೇರಿದಂತೆ ಎಲ್ಲಾ ಭತ್ಯೆಗಳನ್ನು ನೀಡುತ್ತಿದೆ. ಆದರೆ ಅವರುಗಳಿಗೆ ಪಿಂಚಣಿ ಇರುವುದಿಲ್ಲ. ಪಿಂಚಣಿಗೆ ಒತ್ತಾಯಿಸಿ ಮತ್ತು ಬಸವರಾಜ್ ಹೊರಟ್ಟಿಯವರು ನೀಡಿರುವ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಅತಿಥಿ ಉಪನ್ಯಾಸಕರ ಬೇಡಿಕೆ ವಿಚಾರದಲ್ಲಿ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಸರ್ಕಾರಿ ವ್ಯವಸ್ಥೆಯಲ್ಲಿಯೇ ಒಂದು ರೀತಿ ಗುಲಾಮಗಿರಿಯ ಸಂಸ್ಕೃತಿಯಾಗಿದೆ. ಅತಿಥಿ ಉಪನ್ಯಾಸಕರಿಗೆ ರಜೆಯೂ ಇಲ್ಲ. ಕಾಲಕ್ಕೆ ಸರಿಯಾಗಿ ವೇತನವೂ ಬರುತ್ತಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಡಿ.ಎಸ್.ಅರುಣ್, ಮಧುಸೂದನ್, ಹೆಚ್.ಸಿ.ಬಸವರಾಜಪ್ಪ, ಹಿರಣ್ಣಯ್ಯ ಮೊದಲಾದವರಿದ್ದರು.
Recent Comments