

ಕೊಡಗಿನ ಬೆಡಗಿ ರಶ್ಮಿಕಾಗೆ ಈಗ ಟಾಲಿವುಡ್ನಲ್ಲಿ ಎಲ್ಲಿಲ್ಲದ ಬೇಡಿಕೆ.. ಮೊದಲ ಸಿನಿಮಾ ಕಿರಿಕ್ ಪಾಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಎರಡನೇ ಸಿನಿಮಾ ಮಾಡಿದ ಕೂಡಲೇ ತೆಲುಗಿನಲಿ ನಟಿಸಲು ಅವಕಾಶ ಸಿಕ್ಕಿತು. ಹೀಗಿರುವಾಗಲೇ ‘ಗೀತ ಗೋವಿಂದಂ’ ಸಿನಿಮಾ ತೆರೆ ಕಂಡು ನೂರು ಕೋಟಿಯ ಗಡಿ ದಾಟಿತು ನೋಡಿ, ಅಲ್ಲಿಗೆ ರಶ್ಮಿಕಾ ಲಕ್ ಸಂಪೂರ್ಣ ಬದಲಾಗಿತ್ತು. ಇದರಿಂದಾಗಿ ಈ ಬೆಡಗಿಗೆ ತೆಲುಗಿನಲ್ಲಿ ಅವಕಾಶಗಳ ಸುರಿಮಳೆಯೇ ಆಗ ತೊಡಗಿತ್ತು. ಆದರೆ ಇತ್ತೀಚೆಗೆ ತೆರೆಕಂಡ ‘ದೇವ್ದಾಸ್’ ಸಿನಿಮಾದ ನಟನೆಯನ್ನು ಜನ ಮೆಚ್ಚಲಿಲ್ಲ. ಆದರೂ ಅವರ ಇತ್ತೀಚೆಗಿನ ಹಾಟ್ ಫೋಟೋ ಶೂಟ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗುತ್ತಿದೆ.
C News TV Kannada News Online in cnewstv