Cnewstv / 16.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅನಾಹುತಕ್ಕೆ ಕಾದು ಕುಳಿತಿರುವ ಸ್ಮಾರ್ಟ್ ಸಿಟಿ ಕೇಬಲ್ಗಳು.
ಕೂದಲೆಯ ಅಂತರದಲ್ಲಿ ಪಾಲಿಕೆ ಸದಸ್ಯರೇ ಬಚಾವ್.
ಶಿವಮೊಗ್ಗ : ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಜನರಿಗೆ ಒಂದಲ್ಲ ಒಂದು ರೀತಿಯ ತೊಂದರೆ ಉಂಟಾಗುತ್ತಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ಯುಜಿಡಿ ಹಾಗೂ ಯುಜಿ ಕೇಬಲ್ ಮತ್ತು ಪೈಪ್‌ಲೈನ್‌ಗಳ ಮ್ಯಾನ್‌ಹೋಲ್‌ಗಳ ಮುಚ್ಚಳ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅನಾಹುತಕ್ಕೆ ಬಾಯ್ದೆರೆದು ನಿಂತಿವೆ.
ಇತ್ತೀಚೆಗಷ್ಟೇ ರಸ್ತೆ ಕಾಮಗಾರಿಗಳು ಪ್ರಮುಖ ರಸ್ತೆಗಳಲ್ಲಿ ಪೂರ್ಣಗೊಂಡಿದ್ದರೂ ಸಹ ಸ್ಮಾರ್ಟ್ ಸಿಟಿ ಅಧಿಕಾರಿಗಳ ನಿರ್ಲಕ್ಷದಿಂದ ಅಪಾಯಕ್ಕೆ ಮುನ್ನುಡಿ ಬರೆದಿದೆ. ಯುಡಿಜಿ ಮ್ಯಾನ್‌ಹೋಲ್‌ಗಳು ರಸ್ತೆಗಿಂತ ಅರ್ಧ ಅಡಿ ಎತ್ತರದಲ್ಲಿದ್ದು, ಬೀದಿ ದೀಪಗಳು ಕೂಡ ಇಲ್ಲದೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಮ್ಯಾನ್‌ಹೋಲ್ ಮುಚ್ಚಳಗಳ ತಡೆಯಿಂದಾಗಿ ಬಿದ್ದು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಕೆಲವೆಡೆ ಮುಚ್ಚಳಗಳು ಅರ್ಧ ಅಡಿ ಆಳಕ್ಕಿಳಿದಿವೆ.
ಯುಜಿ ಕೇಬಲ್ ಅವಳಡಿಸಿದ ನಂತರ ಕೆಲವೆಡೆ ಕಂಬಗಳನ್ನು ಕಿತ್ತಿದ್ದು, ಕಿತ್ತ ಜಾಗದಲ್ಲಿ ಕೂಡ ಯಥಾಸ್ಥಿತಿ ಬಿಟ್ಟು ಹೋಗಿದ್ದು, ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿದ್ದಾರೆ. ರಸ್ತೆಯ ಮೂಲೆಗಳಲ್ಲಿ ಕೇಬಲ್‌ಗಳು ನೇತಾಡುತ್ತಿದೆ.
ಕೂದಲೆಯ ಅಂತರದಲ್ಲಿ ಪಾಲಿಕೆ ಸದಸ್ಯರೇ ಬಚಾವ್.
ಹೊಸಮನೆ ವಾರ್ಡಿನಲ್ಲಿ ಪಾಲಿಕೆ ಸದಸ್ಯರೇ ಸ್ಮಾರ್ಟ್ ಸಿಟಿ ಅವಾಂತರಕ್ಕೆ ಕೂದಲೆಯ ಅಂತರದಲ್ಲಿ ಪಾರಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ರಸ್ತೆ ಮಧ್ಯೆ ನಾಲಕ್ಕು ಅಡಿ ಎತ್ತರದಲ್ಲಿ 2-3 ಕೇಬಲ್ಗಳು ಜೋತಾಡುತ್ತಿದ್ದು, ಅದೇ ರಸ್ತೆಯಲ್ಲಿರುವವರ ಸ್ನೇಹಿತರು ಅವರನ್ನು ಎಚ್ಚರಿಸದಿದ್ದರೆ ಅವರು ಕೂಡ ಸ್ಮಾಟ್ ಸಿಟಿ ಅವಘಡಕ್ಕೆ ತುತ್ತಾಗಬೇಕಾಗಿತ್ತು. ಪಾಲಿಕೆ ಸದಸ್ಯರ ಪರಿಸ್ಥಿತಿಯೇ ಹೀಗಾದರೆ ಇನ್ನು ಸಾರ್ವಜನಿಕರ ಕಥೆ ಏನು??
ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ವೃದ್ಧರು ಓಡಾಡುವ ನಗರದ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Recent Comments