Breaking News

ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರದಲ್ಲಿ ಭರ್ಜರಿ ಹೋಳಿ ಸಂಭ್ರಮ.. 1 ಸಾವಿರ KG ಬಣ್ಣದ ವ್ಯವಸ್ಥೆ, ಯುವಕ ಯುವತಿಯರ ಭರ್ಜರಿ ಸ್ಟೆಪ್. ‌

Cnewstv / 08.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರದಲ್ಲಿ ಭರ್ಜರಿ ಹೋಳಿ ಸಂಭ್ರಮ.. 1 ಸಾವಿರ KG ಬಣ್ಣದ ವ್ಯವಸ್ಥೆ, ಯುವಕ ಯುವತಿಯರ ಭರ್ಜರಿ ಸ್ಟೆಪ್. ‌

ಶಿವಮೊಗ್ಗ : ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಇಂದು ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಹಿಂದೂ ಕೇಸರಿ ಸಮಿತಿಯಿಂದ 1 ಸಾವಿರ ಕೆ.ಜಿ. ಬಣ್ಣದ ವ್ಯವಸ್ಥೆಯನ್ನು ಮಾಡಲಾಗಿತ್ತು.‌ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಬ್ಯಾರಿಕೇಡ್ ವ್ಯವಸ್ಥೆಯನ್ನು ನಿರ್ಮಿಸಿ ವಾಟರ್‌ಫಾಲ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಂದ ಎಲ್ಲಾ ಆಸಕ್ತ ಯುವಕ-ಯುವತಿಯರಿಗೆ ಉಚಿತವಾಗಿ ಬಣ್ಣದ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಸಾವಿರಾರು ಯುವಕ-ಯುವತಿಯರು ಮತ್ತು ವಯಸ್ಕರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಹೋಳಿ ಹಬ್ಬವನ್ನು ಡಿ.ಜೆ. ಸೌಂಡ್‌ಗೆ ನೃತ್ಯದ ಮೂಲಕ ಸಂತೋಷದಿಂದ ಆಚರಿಸಿದರು.

ನಗರದ ಗೋಪಿವೃತ್ತ, ಕೆ.ಆರ್.ಪುರಂ ರಸ್ತೆ, ಕೋಟೆ ರಸ್ತೆ, ಗಾಂಧಿಬಜಾರ್, ದುರ್ಗಿಗುಡಿ ಸೇರಿದಂತೆ ಹಲವೆಡೆ ಯುವಕ-ಯುವತಿಯರು ಪರಸ್ಪರ ಬಣ್ಣ ಎರಚುತ್ತ ಡಿ.ಜೆ.ಶಬ್ಧಕ್ಕೆ ಲಯಬದ್ಧವಾಗಿ ಕುಣಿಯುತ್ತಾ ಪರಸ್ಪರ ಬಣ್ಣದ ನೀರನ್ನು ಎರಚುತ್ತಾ ಸಂಭ್ರಮ ಪಟ್ಟರು. ಯಾವುದೇ ಅಹಿತಕರ ಘಟನೆ ನಡೆಯದೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ದರವರೆಗೆ ಈ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*