Cnewstv / 20.02.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ ನಿಧನ.
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಖ್ಯಾತ ನಿರ್ದೇಶಕ ಎಸ್ ಕೆ ಭಗವಾನ್ (90) ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ
ಅವರು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. 12 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ.

ಬಿ. ದೊರೈ ರಾಜ್ ಹಾಗೂ ಎಸ್.ಕೆ ಭಗವಾನ್ ಒಟ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈ ಜೋಡಿ ದೊರೈ ಭಗವಾನ್ ಎಂದೇ ಖ್ಯಾತಿ ಆಗಿತ್ತು. ಇವರು ಒಟ್ಟಾಗಿ 47 ಸಿನಿಮಾ ನಿರ್ದೇಶನ ಮಾಡಿದ್ದರು. 28ಕ್ಕೂ ಹೆಚ್ಚು ಸಿನಿಮಾಗಳು ಕಾದಂಬರಿ ಆಧರಿತ ಚಿತ್ರವಾಗಿದೆ. 1993 ರಲ್ಲಿ ತೆರೆ ಕಂಡ ‘ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೊತೆ ಸೇರಿ ನಿರ್ಮಿಸಿದ್ದ ಕೊನೆಯ ಸಿನಿಮಾ ಎನ್ನಲಾಗಿದೆ. ಭಗವಾನ್ ಡಾ.ರಾಜ್ಕುಮಾರ್ ಅವರ ಜೊತೆ ಕೆಲಸ ಮಾಡಿದ್ದು, 30ಕ್ಕೂ ಅಧಿಕ ಸಿನಿಮಾ ಮಾಡಿದ್ದರು.
ಇದನ್ನು ಒದಿ : https://cnewstv.in/?p=12142
ಚಂದನದ ಗೊಂಬೆ, ನಾನೊಬ್ಬ ಕಳ್ಳ, ವಸಂತ ಗೀತ, ಗಾಳಿಮಾತು, ಬೆಂಕಿಯ ಬಲೆ, ಸಂಧ್ಯಾರಾಗ, ಮಂತ್ರಾಲಯ ಮಹಿಮೆ, ರಾಜದುರ್ಗದ ರಹಸ್ಯ, ಗೋವಾದಲ್ಲಿ ಸಿಐಡಿ 999, ಪ್ರತಿಧ್ವನಿ, ಗಿರಿಕನ್ಯೆ, ಹೊಸ ಬೆಳಕು, ಸೇಡಿನ ಹಕ್ಕಿ, ಗಗನ, ಮಾಂಗಲ್ಯ ಬಂಧನ, ಒಡಹುಟ್ಟಿದವರು ಸೇರಿದಂತೆ ಅನೇಕ ಸಿನಿಮಾಗಳು ಇವರ ನಿರ್ದೇಶನದಲ್ಲಿ ಮೂಡಿ ಬಂದಿತ್ತು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv