Cnewstv / 18.02.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತೆಲುಗಿನ ಖ್ಯಾತ ನಟ ತಾರಕರತ್ನ ಇನ್ನಿಲ್ಲ.
ಬೆಂಗಳೂರು : ತೆಲುಗಿನ ಖ್ಯಾತ ನಟ ತಾರಕರತ್ನ (39)ಇಂದು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ನಟ ತಾರಕರತ್ನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನು ಒದಿ : https://cnewstv.in/?p=12130
ಇಂದು ಟಾಲಿವುಡ್ ಗೆ ದುಃಖದ ದಿನ. ತೆಲುಗಿನ ಖ್ಯಾತ ಸಿನಿಮಾಟೋಗ್ರಾಫರ್ ನಂದಮೂರಿ ಮೋಹನ್ ಕೃಷ್ಣರವರ ಪುತ್ರ ತಾರಕರತ್ನ ಮೃತಪಟ್ಟಿದ್ದಾರೆ. ಇವರು ತೆಲುಗಿನ ನಟ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಅವರ ಮೊಮ್ಮಗ. ಇತ್ತೀಚೆಗೆ ಯುವಗಳಂ ಪಾದಯಾತ್ರೆಯ ವೇಳೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ನಂದಮೂರಿ ತಾರಕರತ್ನ ರವರು ನಿಧನರಾದ ಸುದ್ದಿ ಕೇಳುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಸ್ಪತ್ರೆ ಮುಂಭಾಗ ಜಮಯಿಸುತ್ತಿದ್ದಾರೆ. ಮುನ್ನೆಚ್ಚರಿಕೆಯಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv