Breaking News

ಫೆಬ್ರವರಿ 19 ರಂದು ರಾಜ್ಯ ಮಟ್ಟದ ಶ್ವಾನ ಪ್ರದರ್ಶನ..

Cnewstv / 16.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಫೆಬ್ರವರಿ 19 ರಂದು ರಾಜ್ಯ ಮಟ್ಟದ ಶ್ವಾನ ಪ್ರದರ್ಶನ..

ಶಿವಮೊಗ್ಗ : ಶಿವಮೊಗ್ಗ ಕೆನಲ್ ಕ್ಲಬ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ 19-02-2023ರ ಭಾನುವಾರ ಬೆಳಿಗ್ಗೆ 9-00 ರಿಂದ ಸಂಜೆ 5-00 ರವರೆಗೆ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ನಗರದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ
ಏರ್ಪಡಿಸಲಾಗಿದೆ. ವಿವಿಧ ತಳಿಯ ಸುಮಾರು 200 ನಾಯಿಗಳು ರಾಜ್ಯದಾದ್ಯಂತ ಆಗಮಿಸುತ್ತವೆ.  

ಈ ಬಾರಿ ಶ್ವಾನ ಪ್ರದರ್ಶನದ ವಿಶೇಷತೆಗಳು..

* ವಿಜೇತ ಶ್ವಾನಗಳಿಗೆ ಒಟ್ಟು ರೂ. 50,000/- (ಐವತ್ತು ಸಾವಿರ) ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು.

* ಮೊದಲನೆ ಬಹುಮಾನ : 15,000/-, ದ್ವಿತೀಯ : 8000/-, ತೃತೀಯ : 5000/ ಮತ್ತು ನಾಲ್ಕರಿಂದ ಎಂಟನೇ ಸ್ಥಾನದವರೆಗೂ ತಲಾ 2000/- ರೂ.

* ಒಂದು ವರ್ಷದ ಒಳಗಿನ ನಾಯಿಮರಿಗೆ, ಪ್ರಥಮ : 5000/-, ದ್ವಿತೀಯ : 3000/ ತೃತೀಯ : 2000/- ನಗದು ಬಹುಮಾನ.

* ಕರ್ನಾಟಕದ ಹೆಮ್ಮೆಯ ಮುದೋಳ್ ತಳಿಯ ಶ್ವಾನಗಳಿಗೆ ಉಚಿತ ಪ್ರವೇಶ ಹಾಗೂ ಅತ್ಯುತ್ತಮ ಭಾರತೀಯ ತಳಿಯ ಶ್ವಾನಕ್ಕೆ ರೂ. 2000/- ನಗದು ಬಹುಮಾನ.

* ಅತ್ಯುತ್ತಮವಾಗಿ ಶ್ವಾನಗಳನ್ನು ಪ್ರದರ್ಶಿಸಿದ ಇಬ್ಬರಿಗೆ 2000 ನಗದು ಹಾಗೂ ಬೆಸ್ಟ್ ಹ್ಯಾಂಡ್ಲರ್‌ ಪ್ರಶಸ್ತಿ.

* 15 ವರ್ಷದೊಳಗಿನ ಮಕ್ಕಳಿಗೆ ಜ್ಯೂನಿಯರ್‌ ಹ್ಯಾಂಡ್ಲಿಗ್ ಸ್ಪರ್ಧೆ

* ಮಹಾನಗರ ಪಾಲಿಕೆಯ ವತಿಯಿಂದ ಬೀದಿ ನಾಯಿಗಳಿಗೆ ಆಂಟರೇಬಿಸ್ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುವುದು.

* ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ಶ್ವಾನಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

* ಸ್ಪರ್ಧೆಯಲ್ಲಿ ಭಾಗವಹಿಸುವ ಶ್ವಾನಗಳಿಗೆ ಪ್ರವೇಶ ಧನ 300/- ರೂ. ಹಾಗೂ ನೋಂದಾಯಿಸಲು ಕಡೆಯ ದಿನಾಂಕ 18-2-2023.‌

*ಕಾರ್ಯಕ್ರಮವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*