Breaking News

“ನಾ ನಾಯಕಿ” ರಾಜ್ಯದಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ ಮಾಡಿದ ಕಾಂಗ್ರೆಸ್.‌ ಸಮಾವೇಶದ ಹೈಲೈಟ್ಸ್..

Cnewstv / 17.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

“ನಾ ನಾಯಕಿ” ರಾಜ್ಯದಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ ಮಾಡಿದ ಕಾಂಗ್ರೆಸ್.‌ ಸಮಾವೇಶದ ಹೈಲೈಟ್ಸ್..

ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಶಕ್ತಿ ಪ್ರದರ್ಶನವನ್ನು ಮಾಡಿದೆ.

ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದು, ನಾ ನಾಯಕಿ ಸಮಾವೇಶದ ಮೂಲಕ ಮಹಿಳಾ ಶಕ್ತಿ ಪ್ರದರ್ಶನವನ್ನು ಮಾಡಿದೆ ಇನ್ನು ಈ ಕಾರ್ಯಕ್ರಮಕ್ಕೆ ಪ್ರಿಯಾಂಕ ವಾದ್ರಾ ಆಗಮಿಸಿದ್ದು ಮತ್ತಷ್ಟು ಬಲ ನೀಡಿದೆ. ಅರಮನೆ ಮೈದಾನ ಕಾಂಗ್ರೆಸ್ ಮಯವಾಗಿತ್ತು.

ಇದನ್ನು ಒದಿ : https://cnewstv.in/?p=11888

ನಾ ನಾಯಕಿ ಸಮಾವೇಶಕ್ಕೆ ಭಾಗವಹಿಸಲು ದೆಹಲಿಯಿಂದ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರ ರವರನ್ನು ಅದ್ದೂರಿಯಾಗಿ ಬೆಂಗಳೂರಿನ ಅಂತರಾಷ್ಟ್ರ ವಿಮಾನ ನಿಲ್ದಾಣದಿಂದ ಅರಮನೆ ಮೈದಾನದವರೆಗೂ ಪ್ರಿಯಾಂಕರವರ ದೊಡ್ಡ ದೊಡ್ಡ ಫ್ಲ್ಯಾಕ್ಸ್ ಬೃಹತ್ ಕಟೌಟ್ ಗಳನ್ನ ನಿಲ್ಲಿಸಲಾಗಿತ್ತು. ಇನ್ನು ಅರಮನೆ ಮೈದಾನ ಮಹಿಳಾ ಕಾರ್ಯಕರ್ತರಿಂದ ತುಂಬಿ ಹೋಗಿತ್ತು. ಎಲ್ಲಿ ನೋಡಿದರೂ ಮಹಿಳಾ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಧ್ವಜವೇ ಕಾಣಿಸುತ್ತಿತ್ತು.

ನಾ ನಾಯಕಿ ಸಮಾವೇಶದ ಹೈಲೈಟ್ಸ್.

18 ವರ್ಷ ಮೇಲ್ಪಟ್ಟ ಯುವತಿಯರಿಗೆ ಮಾಸಿಕ 2,000 ಭತ್ಯೆ ನೀಡುವುದಾಗಿ ಯೋಜನೆ ಘೋಷಿಸಲಾಯಿತು.
ಮಹಿಳೆಯರಿಗಾಗಿ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಯಿತು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಯಾವೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಏನೆಲ್ಲಾ ಮಾಡಲಿದೆ ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆಲವು ಪ್ರಮುಖ ಪುರುಷ ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿದರೆ ಉಳಿದಂತೆ ವೇದಿಕೆಯ ತುಂಬಾ ಮಹಿಳಾ ಕಾರ್ಯಕರ್ತರೇ ತುಂಬಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*