Cnewstv / 16.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ನಗರದ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡಿ – ಎಎಪಿ
ಶಿವಮೊಗ್ಗ : ನಗರದ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ನೇತ್ರಾವತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ನಗರದಲ್ಲಿ 53 ಸ್ಲಂ ಪ್ರದೇಶಗಳಿದ್ದು, ಇಂದಿಗೂ
ಈ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡದೇ ಸತಾಯಿಸಲಾಗುತ್ತಿದೆ. ನಗರದಲ್ಲಿ ಸರ್ಕಾರಿ ಮಾಲೀಕತ್ವದ 25, ನಗರಸಭೆ (ಮಹಾನಗರ ಪಾಲಿಕೆ) ಮಾಲೀಕತ್ವದ 9, ಖಾಸಗಿ ಮಾಲೀಕತ್ವದ ಜಾಗದಲ್ಲಿ 17 ಹಾಗೂ ಕೊಳಚೆ ನಿರ್ಮೂಲನೆ ಮಂಡಳಿ ಮಾಲೀಕತ್ವದ 2 ಸ್ಲಂ ಪ್ರದೇಶಗಳು ಸೇರಿ 53 ಸ್ಲಂ ಪ್ರದೇಶಗಳಿದ್ದು, ಇಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಶಿವಮೊಗ್ಗ ನಗರ ಸ್ಮಾರ್ಟ್‌ಸಿಟಿ ಯೋಜನೆಗೆ ಒಳಪಟ್ಟಿದ್ದರೂ ಈ ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ.
ಸ್ಲಂ ನಿವಾಸಿಗಳಿಗೆ ಅವರು ವಾಸವಿರುವ ಮನೆಗಳಿಗೆ ಖಾಯಂ ಹಕ್ಕು ಪತ್ರ ನೀಡುವುದಾಗಿ ಹಲವಾರು ವರ್ಷಗಳಿಂದ ಸರ್ಕಾರ ಹೇಳುತ್ತಲೇ ಬಂದಿದ್ದರೂ ಈವರೆಗೂ ಯಾರಿಗೂ ಹಕ್ಕುಪತ್ರ ವಿತರಣೆ ಮಾಡಿಲ್ಲ. ಇದರಿಂದಾಗಿ 30-40 ವರ್ಷಗಳಿಂದ ಈ ಮನೆಗಳಲ್ಲಿಯೇ ವಾಸ ಮಾಡುತ್ತಿರುವ ನಿವಾಸಿಗಳು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ಹಕ್ಕುಪತ್ರ ಕೊಡುತ್ತೇವೆ ಎಂದು ಹೇಳುತ್ತಲೇ ಕೇವಲ ಪರಿಚಯ ಪತ್ರವನ್ನು ನೀಡಿ, ನಿವಾಸಿಗಳನ್ನು ಪದೇ ಪದೇ ಮೋಸಗೊಳಿಸಲಾಗುತ್ತಿದೆ. ಈ ಸ್ಲಂ ನಿವಾಸಿಗಳನ್ನು ಕೇವಲ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿರುವ ಸ್ಥಳೀಯ ಜನಪ್ರತಿನಿಧಿಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಹಕ್ಕುಪತ್ರ ನೀಡುತ್ತೇವೆಂದು ಹೇಳಿ ಪರಿಚಯ ಪತ್ರ ನೀಡುವ ಮೂಲಕ ಸ್ಲಂ ನಿವಾಸಿಗಳನ್ನು ವಂಚಿಸುತ್ತಿದ್ದಾರೆ ಎಂದು ಅರೋಪಿದರು.
ಈ ಸಂದರ್ಭದಲ್ಲಿ ರವಿಕುಮಾರ್, ಪುಷ್ಪಲತಾ, ಸುರೇಶ್ ಕೋಟೆಕಾರ್, ರೋಹಿತ್, ಮುಕ್ಬಾಲ್ ಅಹಮದ್, ಪ್ರದೀಪ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments