Breaking News

ಸಂಕ್ರಾಂತಿ ಹಿನ್ನಲೆ ಮಾರುಕಟ್ಟೆಯಲ್ಲಿ ಖರೀದಿಗೆ ಜನಜಂಗುಳಿ.

Cnewstv / 14.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಂಕ್ರಾಂತಿ ಹಿನ್ನಲೆ ಮಾರುಕಟ್ಟೆಯಲ್ಲಿ ಖರೀದಿಗೆ ಜನಜಂಗುಳಿ.

ಶಿವಮೊಗ್ಗ : ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಜನರು ಹಬ್ಬದ ಸಾಮಗ್ರಿಗಳನ್ನ ಖರೀದಿ ಮಾಡಲು ಮಾರುಕಟ್ಟೆಗೆ ಆಗಮಿಸಿದ್ದು ನಗರದ ಪ್ರಮುಖ ರಸ್ತೆಗಳು, ಜನರಿಂದ ತುಂಬಿ ಹೋಗಿದ್ದವು.

ಇದನ್ನು ಒದಿ : https://cnewstv.in/?p=11845

ನಗರದ ಗಾಂಧಿ ಬಜಾರ್, ಪೊಲೀಸ್ ಚೌಕಿ, ನೆಹರು ರಸ್ತೆ, ಬಿ ಹೆಚ್ ರಸ್ತೆ, ದುರ್ಗಿಗೂಡಿ, ಸರ್ಕಿಟ್ ಹೌಸ್ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳು ಜನರಿಂದ ಗೀಜಗುಡುತ್ತಿತ್ತು.

ಗಗನಕ್ಕೇರಿದ ಹೂವು, ಹಣ್ಣು, ತರಕಾರಿ ಬೆಲೆ.

ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ಬಾರಿಯಂತೆ ಹೂವು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಬ್ಬು 30 ರಿಂದ 50 ರೂಪಾಯಿ. ಸಕ್ಕರೆ ಅಚ್ಚು ಕೆಜಿಗೆ 200 ರಿಂದ 300. ಸೇವಂತಿಗೆ ಹೂವು ಮಾರಿಗೆ 80 ರಿಂದ 100 ರೂಪಾಯಿ, ಕಾಕಡ ಮಾರಿಗೆ 60 ರಿಂದ 70 ರೂಪಾಯಿ. ಸೇಬು ಕೆಜಿಗೆ 100 ರಿಂದ 150 ರೂಪಾಯಿ ದಾಳಿಂಬೆ 200 ರೂಪಾಯಿ. ಬಾಳೆಹಣ್ಣು 50 ರಿಂದ 70 ರೂಪಾಯಿ ಆಗಿದೆ. ‌

ಇದನ್ನು ಒದಿ : https://cnewstv.in/?p=11829

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*