
Cnewstv / 10.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಾಗರ : ಅಂಗಡಿ ಮುಂಗಟ್ಟುಗಳು ಬಂದ್. ರಸ್ತೆಗಳು ಖಾಲಿ ಖಾಲಿ..
ಹಿಂದೂ ಕಾರ್ಯಕರ್ತ ಹತ್ಯೆಗೆ ಯತ್ನ, ಇಂದು ಸಾಗರ ಬಂದ್.
ಸಾಗರ : ಬಜರಂಗದಳ ಕಾರ್ಯಕರ್ತ ಹತ್ಯೆಗೆ ಯತ್ನ ನಡೆಸಲಾದ ಹಿನ್ನಲೆಯಲ್ಲಿ ಇಂದು ಸಾಗರ ಬಂದ್ ಮಾಡಲಾಗಿದೆ.
ಸಾಗರ ನಗರದ ಬಿಎಚ್ ರಸ್ತೆಯ ಬಸ್ ನಿಲ್ದಾಣದ ಸಮೀಪ ನೆನ್ನೆ ಬಜರಂಗದಳ ಕಾರ್ಯಕರ್ತ ಸುನಿಲ್ ಹತ್ಯೆಗೆ ಯತ್ನ ಮಾಡಲಾಯಿತು ಆದರೆ ಕೂದಲೇಲೆಯ ಅಂತರದಲ್ಲಿ ಮೆಚ್ಚಿನ ದಾಳಿಯಿಂದ ಸುನಿಲ್ ಪಾರಾಗಿದ್ದರು.
ದಾಳಿ ಖಂಡಿಸಿ, ಹಿಂದೂ ಪರ ಸಂಘಟನೆಗಳು ಹಾಗೂ ವಿ ಎಚ್ ಪಿ ಸಾಗರ ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ವಾಹನ ಸಂಚಾರವೂ ಕೂಡ ವಿರಳವಾಗಿದೆ.

11 ಗಂಟೆಗೆ ಸಾಗರದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಸಾಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv