Breaking News

ಅಗ್ನಿ ಅವಘಡ : ಖ್ಯಾತ ಉದ್ಯಮಿ ಸಾವು.

Cnewstv / 08.01.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅಗ್ನಿ ಅವಘಡ : ಖ್ಯಾತ ಉದ್ಯಮಿ ಸಾವು.

ಶಿವಮೊಗ್ಗ : ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡದಲ್ಲಿ ಶಿವಮೊಗ್ಗದ ಖ್ಯಾತ ಉದ್ಯಮಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಶಿವಮೊಗ್ಗದ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿರುವ ಭೂಪಾಳಂ ಕುಟುಂಬದ ಮನೆಯಲ್ಲಿ
ಬೆಳ್ಳಂ ಬೆಳಗ್ಗೆ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡ ಸಂಭವಿಸಿದ್ದು, ಖ್ಯಾತ ಉದ್ಯಮಿ, ಚೇಂಬರ್ ಆಫ್ ಕಾಮರ್ಸ್ ನ ನಿರ್ದೇಶಕರಾದ ಭೂಪಾಳಂ ಶರತ್ (39)ರವರು ಮೃತಪಟ್ಟಿದ್ದಾರೆ.

ಬೆಂಕಿ ಅವಘಡದಿಂದ ಮನೆಯ ತುಂಬಾ ದಟ್ಟ ಹೋಗಿ ಆವರಿಸಿದೆ, ತಕ್ಷಣವೇ ಮನೆಯ ಸದಸ್ಯರು ಮನೆಯಿಂದ ಹೊರ ಬಂದಿದ್ದಾರೆ ಆದರೆ ಈ ವೇಳೆ ಮತ್ತೆ ಮನೆ ಒಳಗೆ ತೆರಳಿದ ಶರತ್ ಅವರು ಹೊಗೆಯ ಮಧ್ಯೆ ಸಿಲುಕಿ ಪ್ರಜ್ಞೆ ತಪ್ಪು ಬಿದ್ದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಆಗಮಿಸಿ ಬೆಂಕಿ ನಂದಿಸಿ, ಅಸ್ವಸ್ಥರಾಗಿದ್ದ ಶರತ್ ನನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶರತ್ ರವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಶರತ್ ರವರ ಪುತ್ರಿಯೂ ಆಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*