Breaking News

ದರ್ಶನ್‌ ವಿವಾದ : ಅಭಿಮಾನಿಗೆ ಕಿಚ್ಚನಿಂದ ಖಡಕ್ ಉತ್ತರ

Cnewstv / 21.12.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ದರ್ಶನ್‌ ವಿವಾದ : ಅಭಿಮಾನಿಗೆ ಕಿಚ್ಚನಿಂದ ಖಡಕ್ ಉತ್ತರ

ಬೆಂಗಳೂರು : ಇತ್ತೀಚೆಗೆ ನಟ ದರ್ಶನ್‌ ಅವರ ಮೇಲಾದ ಘಟನೆಗೆ ಕಿಚ್ಚ ಸುದೀಪ್‌ ಅವರು ಟ್ವಿಟರ್‌ ನಲ್ಲಿ ಪ್ರತಿಕ್ರಿಯಿಸಿ, ಆಕ್ರೋಶ ಎಲ್ಲದಕ್ಕೂ ಉತ್ತರವಲ್ಲ. ಈ ರೀತಿ ಯಾರೊಂದಿಗೂ ಆಗಬಾರದು. ಅಪ್ಪು – ದರ್ಶನ್ ಇಬ್ಬರೂ ನನಗೆ ಆತ್ಮೀಯರು ಎಂದು ಹೇಳಿ ಅಭಿಮಾನಿಗಳ ಬಗ್ಗೆಯೂ ಹೇಳಿದ್ದರು.

ಇದು ನಿಜಕ್ಕೂ ನನಗೆ ನೋವುಂಟು ಮಾಡಿದೆ ಎಂದು ಸುಮಾರು 3 ಪುಟಗಳಷ್ಟು ಸುದೀರ್ಘ ಪತ್ರದಲ್ಲಿ ಸುದೀಪ್‌ ಬೇಸರ ತೋಡಿಕೊಂಡಿದ್ದಾರೆ. ಸುದೀಪ್‌ ಈ ಟ್ವೀಟ್‌ಗೆ ಅಂತರ್ಜಾಲ ಜಗತ್ತಿನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

https://cnewstv.in/?p=11712

ಕಿಚ್ಚ ಒಬ್ಬ ಕಲಾವಿದನಾಗಿ ಇನ್ನಬ್ಬ ಕಲಾವಿದನ ಜೊತೆ ನಿಂತು, ಎರಡೂ ಕಲಾವಿದರ ಅಭಿಮಾನಿಗಳ ಬಗ್ಗೆ ಮಾತಾನಾಡಿದ ವಿಚಾರಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಈ ನಡುವೆ ಟ್ವಿಟರ್‌ ನಲ್ಲಿ ಕಿಚ್ಚನ ಅಭಿಮಾನಿಯೊಬ್ಬ ಟ್ವೀಟ್‌ ಮಾಡಿದ್ದಕ್ಕೆ ಸುದೀಪ್‌ ಅವರು ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರ ಕಿಚ್ಚ ಸುದೀಪ್‌ ಎನ್ನುವ ಫ್ಯಾನ್ಸ್‌ ಪೇಜ್‌ ವೊಂದು ನಿನ್ನೆ ಸುದೀಪ್‌ ಅವರು ಮಾಡಿದ ಟ್ವೀಟ್‌ ಗೆ ಸಂಬಂಧಿಸಿ “ ನಾಯಿ ಬಾಲ ಎಂದಿಗೂ ನೇರವಾಗಲ್ಲ. ನಾನು ಬಾಸ್‌ ಎಂದು ಹೇಳುವಷ್ಟು ಅರ್ಹತೆ ನನಗಿಲ್ಲ. ಒಂದು ಚಪ್ಪಾಳೆಗೆ ಎರಡೂ ಕೈಗಳು ಬೇಕು, ಎರಡೂ ಕೈಗಳಿಲ್ಲದೆ ಚಪ್ಪಾಳೆ ಸಾಧ್ಯವಾಗಲ್ಲ. ದಯವಿಟ್ಟು ನೀವು ನಿಮ್ಮಷ್ಟಕ್ಕೆ ಇದ್ದು, ಅಭಿಮಾನಿಗಳ ಬಗ್ಗೆ ಯೋಚಿಸಿ. ಕೆಎಫ್‌ ಐ ನಲ್ಲಿ ಯಾರೂ ನಿಮ್ಮ ಜೊತೆ ಇರಲ್ಲ. ಅಭಿಮಾನಿಗಳನ್ನು ಬಿಟ್ಟು. ಒಳ್ಳೆಯತನ ಗೆಲ್ಲುತ್ತದೆ ಕಿಚ್ಚ ಸುದೀಪ್‌ ಎಂದು ಟ್ವೀಟ್‌ ಮಾಡಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*