Breaking News

ಬೆಳ್ಳಂ ಬೆಳಗ್ಗೆ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ ಪೊಲೀಸರು.

Cnewstv / 19.12.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಳ್ಳಂ ಬೆಳಗ್ಗೆ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ ಪೊಲೀಸರು.

ಶಿವಮೊಗ್ಗ : ಬೆಳ್ಳಂ ಬೆಳಗ್ಗೆ ರೌಡಿ ಶೀಟರ್ ಕಾಲಿಗೆ ಶಿವಮೊಗ್ಗ ಪೊಲೀಸರು ಗುಂಡು ಹಾರಿಸಿದ ಘಟನೆ ಇಂದು ಬೆಳಗ್ಗೆ ನಗರದ ಹೊರವಲಯದಲ್ಲಿ ನಡೆದಿದೆ.

ಪ್ರವೀಣ್ ಅಲಿಯಾಸ್ ಮೋಟು ಎಂಬಾತನ ಕಾಲಿಗೆ ಪೋಲಿಸರು ಗುಂಡು ಹಾರಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಾರಿಗೆ ಬೆಂಕಿ ಹಚ್ಚಿ ಬೆದರಿಸಿದ್ದ, ಕೊಲೆ ಯತ್ನ, ಜೀವ ಬೆದರಿಕೆ ಸೇರಿದಂತೆ ಪ್ರವೀಣ್ ಮೇಲೆ 15 ಕ್ರಿಮಿನಲ್ ಪ್ರಕರಣಗಳಿವೆ.

ಇಂದು ಗ್ರಾಮಾಂತರ ಪೊಲೀಸರು ಕುಂಸಿ ಬಳಿಯ ಗ್ರಾಮ ಒಂದರಲ್ಲಿ ಪ್ರವೀಣ್ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆ ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಶಿವರಾಜು ಹಾಗೂ ಆರೋಪಿ ಪ್ರವೀಣ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಸುಟ್ಟಿದ್ದ ಪ್ರಕರಣದ ಹಿನ್ನೆಲೆ :

ಮೂರು ತಿಂಗಳ ಹಿಂದೆ ಜೈಲ್ ರಸ್ತೆಯ ವನಜಾಕ್ಷಿ ಎಂಬುವವರ ಮೇಲೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ ನನ್ನು ಬಂಧಿಸಲಾಗಿತ್ತು. ನಂತರ ಜಮೀನಿನ ಮೇಲೆ ಹೊರಬಂದ ಪ್ರವೀಣ್ ಡಿಸೆಂಬರ್ 17ರಂದು ವನಜಾಕ್ಷಿಯವರ ಮನೆಯ ಮುಂದೆ ನಿಲ್ಲಿಸಿದ್ದ i20 ಕಾರಿಗೆ ಬೆಂಕಿ ಹಚ್ಚಿ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದನು. ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು‌.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*