ಕಡಿಮೆ ದರ ತಾಜಾ-ತಾಜಾ ತರಕಾರಿ, ಹಣ್ಣು, ಹೂಗಳನ್ನು ಖರೀದಿಸಲು ಜನರು ನೇರವಾಗಿ ಶಿವಮೊಗ್ಗದ ಎ.ಪಿ.ಎಂ.ಸಿ ತರಕಾರಿ ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಬರುತ್ತಾರೆ. ಬೆಳಿಗ್ಗೆ 4 ಗಂಟೆಯಿಂದಲೇ ಇಲ್ಲಿ ವ್ಯಾಪಾರ ಆರಂಭವಾಗಿ ಜನಜಂಗುಳಿಯಿಂದ ಚಿಲ್ಲರೆ ವ್ಯಾಪಾರಿಗಳು ಹಾಗೂ ಬಡಾವಣೆಯ ಜನರು ಬೆಳಿಗ್ಗೆ ವಾಕಿಂಗ್ ಮುಗಿಸಿ ತಾಜಾ ತರಕಾರಿಗಳನ್ನು ಕೊಳ್ಳುತ್ತಿರುವ ದೃಶ್ಯ ಸರ್ವೇಸಾಮಾನ್ಯ.
ಆದರೆ ಇತ್ತೀಚೆಗೆ ಜನರು ತರಕಾರಿಗಳನ್ನು ಕೊಳ್ಳುವಾಗ ಒಂದು ಕ್ಷಣ ಯೋಚನೆ ಮಾಡುವ ಪರಿಸ್ದಿತಿ ಉಂಟಾಗಿದೆ. ಅರೋಗ್ಯಕರವಾದ ತರಕಾರಿಗಳನ್ನು ಅನಾರೋಗ್ಯಕರವಾದ ಸ್ದಳದಲ್ಲಿ ಖರೀದಿ ಮಾಡಿದ ಹಾಗಾಗಿದೆ. ಅಲ್ಲೆಲ್ಲಾ ಬೇಕಾ ಬಿಟ್ಟಿ ಬಿಸಾಕಿದ, ಕೊಳೆತ ತರಕಾರಿಗಳು, ಕಸದ ರಾಶಿಗಳು. ಅಲ್ಲದೆ ಕಳೆದ 2 ದಿನಗಳಿಂದ ಸುರಿದ ಮಳೆಯಿಂದ ಈ ಭಾಗದ ಪರಿಸ್ದಿತಿ ಹೇಳತೀರಾದಾಗಿದೆ.
ಇದರ ಸುತ್ತಮುತ್ತ ಸೊಳ್ಳೆ, ಹಂದಿಗಳ ಹಾಗೂ ಕೀಟಗಳ ಹಾವಳಿ ಹೆಚ್ಚಾಗಿದ್ದು, ಎಸೆದ ತರಕಾರಿಗಳನ್ನು ತಿನ್ನಲು ಬರುವ ಜಾನುವಾರು ಗಳು. ಮಾರುಕಟ್ಟೆಯಲ್ಲಿ ಹೂವಿನ ಪರಿಮಳಗಿಂತ ಈ ಕೊಳೆತ ಕಸದ ರಾಶಿಯ ದುರ್ವಾಸನೆಯೇ ಹೆಚ್ಚು. ಈ ಭಾಗದಲ್ಲಿ ಅಸ್ವಚ್ಛತೆ ದಿನೇ ದಿನೇ ಹೆಚ್ಚುತ್ತಿದ್ದು, ಡೆಂಗ್ಯೂ ಪ್ರಕರಣಗಳು ಸಹ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಮಾರುಕಟ್ಟೆಯು ೬೦ ಅಡಿ ರಸ್ತೆಗೆ ಹೊಂದಿಕೊಂಡಿದ್ದು, ವಾಹನಗಳ ಪಾರ್ಕಿಂಗ್ ವ್ಯವಸ್ದೆ ಕೂಡ ಅವ್ಯವಸ್ದಿತವಾಗಿ ಇರುವುದಿಲ್ಲ. ಕಾರಣ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಪ್ರತಿದಿನ ಈ ಭಾಗದಲ್ಲಿ ಶಾಲಾ – ಕಾಲೇಜುಗಳ ವಾಹನಗಳು ಸಂಚರಿಸುತ್ತವೆ. ಇಲ್ಲಿನ ದಟ್ಟಣೆಯಿಂದಾಗಿ ಅಪಘಾತಗಳು ಹೆಚ್ಚಳವಾಗುವ ಸಾಧ್ಯತೆ ಇದೆ.
ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಏನು ಪ್ರಯೋಜನವಿಲ್ಲ. ಏಕೆಂದರೆ ಇನ್ನು ಜನಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿಲ್ಲ. ಮೇಯರ್- ಉಪವೇಯರ್ ಚುನಾವಣೆಗಳು ಆದಷ್ಟು ಬೇಗ ನಡೆದು ಅಧಿಕಾರ ನೀಡಬೇಕು. ಇಲ್ಲವಾದಲ್ಲಿ ಜನರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳುವುದು? ಅದಕ್ಕೆ ಪರಿಹಾರ ಸಿಗುವುದು ಯಾವಾಗ? ಎಂಬ ಮಾತು ಜನ ಸಾಮಾನ್ಯರದ್ದು . ಜನಪ್ರತಿನಿಧಿಗಳು ಆಯ್ಕೆಯಾದರು ಏನು ಪ್ರಯೋಜನವಿಲ್ಲದ್ದಂತೆ ಇದೆ.
ಅನೇಕ ಸಂಘ-ಸಂಸ್ದೆಗಳು ಪಾರ್ಕ್, ರಸ್ತೆಗಳನ್ನು ಸ್ದಚಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಎ.ಪಿ.ಎಂ.ಸಿ ಮಾರುಕಟ್ಟೆ ಕಡೆ ಗಮನಹರಿಸಲಿ ಎಂಬುದು CNEWSTV.in ಆಶಯವಾಗಿದೆ.

Recent Comments