Cnewstv / 21.11.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬೆಳ್ಳಂಬೆಳಗ್ಗೆ ತೀರ್ಥಹಳ್ಳಿಯ ಶಾರೀಕ್ ಮನೆಮೇಲೆ ಪೊಲೀಸರ ರೈಡ್.
ಶಿವಮೊಗ್ಗ : ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಶಾರೀಕ್ ಮನೆಮೇಲೆ ಪೊಲೀಸರು ರೈಡ್ ಮಾಡಿದ್ದಾರೆ.
ಇದನ್ನು ಒದಿ :
https://cnewstv.in/?p=11556
ಇಂದು ಬೆಳ್ಳಂಬೆಳಗ್ಗೆ ತೀರ್ಥಹಳ್ಳಿ ಪೊಲೀಸರಿಂದ ಕಾರ್ಯಚರಣೆ ನಡೆಸಿದ್ದಾರೆ. ಶಾರೀಕ್ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಸೊಪ್ಪು ಗುಡ್ಡೆಯ ಮೀನು ಮಾರುಕಟ್ಟೆಯ ಸಮೀಪ ಇರುವ ಶಾರೀಕ್ ಮನೆ ಮೇಲೆ ತೀರ್ಥಹಳ್ಳಿ, ಮಾಳೂರು ಹಾಗೂ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಳು ಮೂರು ತಂಡಗಳಾಗಿ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ಒಂದು ವರ್ಷದಿಂದ ಶಾರೀಕ್ ತೀರ್ಥಹಳ್ಳಿಗೆ ಬಂದಿರಲಿಲ್ಲ. ಶಾರೀಕ್ ಚಿಕ್ಕಮ್ಮ ಹಾಗೂ ಸಂಬಂಧಿಕರ ಮನೆ ಸೇರಿದಂತೆ ಒಟ್ಟು ನಾಲ್ಕು ಮನೆಗಳ ಮೇಲೆ ರೈಡ್ ಮಾಡಿದ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ನಲ್ಲೂ ಎ2 ಶಾರೀಕ್ ಆರೋಪಿಯಾದ್ದ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
https://cnewstv.in/?p=11559