Breaking News

ಶಿವಮೊಗ್ಗ ನಗರದ ಪುರಾಣ ಪ್ರಸಿದ್ಧ ಕೋಟೆ ಆಂಜನೇಯ ದೇವಸ್ಥಾನದ ವಿದ್ಯುತ್ ಬಿಲ್ ಪಾವತಿಸಿ, ಕಗ್ಗತಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಬೆಳಕು ಕೊಡಿ : ಸರ್ಕಾರಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹ.

Cnewstv / 19.11.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ನಗರದ ಪುರಾಣ ಪ್ರಸಿದ್ಧ ಕೋಟೆ ಆಂಜನೇಯ ದೇವಸ್ಥಾನದ ವಿದ್ಯುತ್ ಬಿಲ್ ಪಾವತಿಸಿ, ಕಗ್ಗತಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಬೆಳಕು ಕೊಡಿ : ಸರ್ಕಾರಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹ.

ಶಿವಮೊಗ್ಗ : ಶಿವಮೊಗ್ಗ ನಗರದ ಪುರಾಣ ಪ್ರಸಿದ್ಧ ಕೋಟೆ ಆಂಜನೇಯ ದೇವಸ್ಥಾನದ ವಿದ್ಯುತ್ ಬಿಲ್ ಪಾವತಿಸಿ, ಕಗ್ಗತಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಬೆಳಕು ಕೊಡಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀ ಆಂಜನೇಯ ಸ್ವಾಮಿಗೆ ದೇವಸ್ಥಾನದಲ್ಲಿ ಸಂಜೆಯಾಗುತ್ತಿದ್ದಂತೆ ಕತ್ತಲೆ ವಾಸದ ದುರಂತ ಸ್ಥಿತಿ ಒದಗಿಬಂದಿದೆ.ದೇವಾಲಯದಲ್ಲಿ ಕಳೆದ ನಾಲ್ಕಾರು ದಿನಗಳಿಂದ ವಿದ್ಯುತ್‌ ನಿಲುಗಡೆಯಾಗಿದೆ. ಪ್ರತಿನಿತ್ಯ ಬೆಳಕಿಗಾಗಿ ಜನರೇಟರ್‌ಗಳನ್ನು ಬಳಸಲಾಗುತ್ತಿದೆ. ಭಕ್ತರೇ ಪ್ರತಿನಿತ್ಯ ಡಿಸೇಲ್ ವೆಚ್ಚ ನಿರ್ವಹಿಸುತ್ತಿದ್ದಾರೆ. ವಿದ್ಯುತ್‌ ಕಡಿತಕ್ಕೆ ಕಾರಣ ಎಂದರೆ ಮುಜರಾಯಿ ಇಲಾಖೆ ಸಕಾಲಕ್ಕೆ ವಿದ್ಯುತ್‌ ಬಾಕಿ ಪಾವತಿ ಮಾಡದಿರುವುದರಿಂದ. ಮೆಸ್ಕಾಂ ಇಲಾಖೆ ಯುವರು ನಗರದ ಪುರಾಣ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವಿದ್ಯುತ್ ಕಡಿತ ಮಾಡಿದ್ದಾರೆ. ಹೀಗಾಗಿ ಬೆಳಕಿಗಾಗಿ ಜನರೇಟರ್‌ಗಳೇ ಗತಿಯಾಗಿದೆ. ಶಿವಮೊಗ್ಗೆಯ ಐತಿಹಾಸಿಕ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲೇ ಈ ಪರಿಸ್ಥಿತಿ ಅಂದರೆ ಆಡಳಿತ ನಡೆಸುತ್ತಿರುವ ಸರ್ಕಾರ ದಿವಾಳಿಯಾಗಿದೆ ಎಂಬುದನ್ನು ಭಕ್ತರ ಹಾಗೂ ಸಾರ್ವಜನಿಕರ ಪ್ರಶ್ನೆಯಾಗಿದೆ.‌

ಸಮಾಜದ ಬೇಡಿಕೆಯ ಈಡೇರಿಕೆಗಾಗಿ 658 KM ಐತಿಹಾಸಿಕ ಪಾದಯಾತ್ರೆ – ಪ್ರಣವಾನಂದ ಶ್ರೀ.

ಈ ದೇವಳಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಸಮಿತಿಯನ್ನು ರಾಜ್ಯ ಸರ್ಕಾರ ನೇಮಿಸಿದೆ. ಅಭಿವೃದ್ಧಿ ಸಮಿತಿಗೆ ವಿದ್ಯುತ್ ಕಡಿತ ಮಾಡಿರುವ ವಿಚಾರದ ಬಗ್ಗೆ ಅರಿವಿದ್ದರೂ ಸಮಿತಿಯವರು ಸಹ ಸಮಸ್ಯೆ ಬಗ್ಗೆ ಪರಿಹರಿಸುವ ಕಾಳಜಿ ತೋರುತ್ತಿಲ್ಲ. ಯಾವ ಚ೦ದಕ್ಕೆ ಅಭಿವೃದ್ಧಿ ಸಮಿತಿಯನ್ನು ಸರ್ಕಾರ ನೇಮಿಸಿದೆಯೋ ಗೊತ್ತಿಲ್ಲ. ಮುಜರಾಯಿ ಇಲಾಖೆ ಹಾಗೂ ಆಡಳಿತ ನಡೆಸುತ್ತಿರುವ ಸರ್ಕಾರ ಮತ್ತು ಶಿವಮೊಗ್ಗ ಕ್ಷೇತ್ರದ ಜನಪ್ರತಿನಿಧಿಗಳಿಗೆ ಧಾರ್ಮಿಕ ಕ್ಷೇತ್ರ ಕಗ್ಗದಲ್ಲಿರುವುದು ಅರಿವಿಲ್ಲವೇ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮೆಸ್ಕಾಂ ಇಲಾಖೆಗೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಿ ಕತ್ತಲಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಬೆಳಕು ನೀಡಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಈ ಮೂಲಕ ಎಚ್ಚರಿಸಲಾಯಿತು.‌

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಜಿಲ್ಲಾಧ್ಯಕ್ಷ ಹೆಚ್‍.ಪಿ. ಗಿರೀಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್ ಕುಮರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ರಾಹುಲ್ , ಪುಷ್ಪಕ್ ಕುಮಾರ್, ಎಂ ರಾಕೇಶ್ ,ವೆಂಕಟೇಶ್ ಕಲ್ಲೂರು, ಸುಹಾಸ್ ಗೌಡ, ಮಸ್ತಾನ್ ಇತರರು ಇದ್ದರು.‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*