Cnewstv / 21.11.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತಂದೆಯನ್ನು 35 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ ಮಗ. ಕೊಲೆಗೆ ಕಾರಣವಾಯಿತ್ಯಾ 3 ಸಾವಿರ ರೂಪಾಯಿ ??
ನವದೆಹಲಿ : ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮಗನೇ ತಂದೆಯನ್ನು 35 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ್ದಾನೆ. ಶವದ ವಿಲೇವಾರಿ ಮಾಡಲು ಪತ್ನಿಯೇ ಮಗನಿಗೆ ಸಹಾಯ ಮಾಡಿದ್ದಾಳೆ.
ಈ ರೀತಿ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ಬುರಾಯಿಪುರದಲ್ಲಿ. ಈ ರೀತಿ ಮಗನಿಂದಲೇ ಹತ್ಯೆಯಾದ ತಂದೆಯನ್ನು ಉಜ್ವಲ ಚಕ್ರವರ್ತಿ (55) ಎಂದು ಗುರುತಿಸಲಾಗಿದ್ದು, ಈತ ನಿವೃತ್ತ ನೌಕಾಪಡೆಯ ಅಧಿಕಾರಿಯಾಗಿದ್ದ. ಮಗ ಜಾಯ್ (25) ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದು, ತಂದೆಯನ್ನು 35 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿ, ತನ್ನ ತಾಯಿ ಶ್ಯಾಮಲಿ (48) ಸಹಾಯದಿಂದ ಶವವನ್ನು ವಿಲೇವಾರಿ ಮಾಡಿದ್ದಾನೆ.
ಕೊಲೆಗೆ ಕಾರಣವಾದ ಘಟನೆ..
ಮಗ ಜಾಯ್ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆಗಾಗಿ ತಂದೆಯ ಬಳಿ 3000 ರೂಪಾಯಿ ಹಣ ಕೇಳಿದ್ದಾನೆ. ಅದಕ್ಕೆ ನಿರಾಕರಿಸಿದಂತಹ ಚಕ್ರವರ್ತಿ ಮಗನಿಗೆ ಬೈದು ಹೊಡೆದಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಚಕ್ರವರ್ತಿ ತನ್ನ ಮಗನಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಇದರಿಂದ ಕೊಪಗೊಂಡ ಮಗ ತಂದೆಯನ್ನು ಕೆಳಗೆ ತಳ್ಳಿದ್ದಾನೆ ನಂತರ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದೇ ಸಂದರ್ಭದಲ್ಲಿ ಹೊರಗೆ ಬಂದಂತಹ ತಾಯಿ ಮತ್ತು ಮಗ ಇಬ್ಬರು ಸೇರಿ ಶವವನ್ನು ವಿಲೇವಾರಿ ಮಾಡಲು ಯೋಚನೆ ಮಾಡಿದ್ದಾರೆ.
ಶವವನ್ನು ಸ್ನಾನದ ಮನೆಗೆ ತೆಗೆದುಕೊಂಡು ಹೋಗಿ ಗರಗಸದಿಂದ 35 ದುಂಡುಗಳಾಗಿ ಕತ್ತರಿಸಿದ್ದಾರೆ ನಂತರ ಅದನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಕೊಂಡು ಪೊದೆ, ಕೊಳ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಬಿಸಾಡಿದ್ದಾರೆ.
ನಂತರ ಚಕ್ರವರ್ತಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಮಾಜದ ಬೇಡಿಕೆಯ ಈಡೇರಿಕೆಗಾಗಿ 658 KM ಐತಿಹಾಸಿಕ ಪಾದಯಾತ್ರೆ – ಪ್ರಣವಾನಂದ ಶ್ರೀ.
C News TV Kannada News Online in cnewstv