Cnewstv / 19.11.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಮಾಜದ ಬೇಡಿಕೆಯ ಈಡೇರಿಕೆಗಾಗಿ 658 KM ಐತಿಹಾಸಿಕ ಪಾದಯಾತ್ರೆ – ಪ್ರಣವಾನಂದ ಶ್ರೀಗಳು.
ಶಿವಮೊಗ್ಗ : ಬಿಲ್ಲವ ಈಡಿಗ ನಾಮಧಾರಿ ಸೇರಿದಂತೆ ಸಮಾಜದ ಬೇಡಿಕೆಯ ಈಡೇರಿಕೆಗಾಗಿ ಬ್ರಹ್ಮಶ್ರೀ ನಾರಾಯಣ ಗುರು, ಶಕ್ತಿ ಪೀಠದ ಪ್ರವಣಾನಂದ ಶ್ರೀಗಳು ಐತಿಹಾಸಿಕ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
7 ನೇ ವೇತನ ಆಯೋಗ : ಮೂವರು ಸದಸ್ಯರ ನೇಮಕ.
ಜನವರಿ 6 ರಿಂದ ಫೆಬ್ರುವರಿ 14 ರ ವರೆಗೆ ಮಂಗಳೂರಿನಿಂದ ಬೆಂಗಳೂರಿನ ವರೆಗೆ 40 ದಿನಗಳ ಕಾಲ ಐತಿಹಾಸಿಕ ಪಾದಯಾತ್ರೆ ಅರಂಭವಾಗಲಿದೆ ಎಂದರು.
ಈಡಿಗರ ಸಮುದಾಯದಸಮಸ್ಯೆಯ ಕುರಿತು ಹಲವು ಹೋರಾಟ ನಡೆಸಲಾಗಿದೆ. ಸಮುದಾಯದ 4 ಜನ ಸ್ವಾಮೀಜಿಗಳೊಂದಿಗೆ ಮಾತನಾಡಿದ್ದೇನೆ ಎಲ್ಲರೂ ಪಾದಯಾತ್ರೆಗೆ ಬೆಂಬಲಿಸುತ್ತಾರೆ .ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಈಡಿಗ, ನಾಮಧಾರಿ ಬಿಲ್ಲವ ಸಮುದಾಯಕ್ಕೆ ಅನಾನುಕೂಲವಾಗುವಂತೆ ಮಾಡಿದ್ದಾರೆ ಎಂದರು 7 ಜನ ಬಿಲ್ಲವ ಸಮುದಾಯದ ಸಚಿವರರಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಬೇಡಿಕೆಗಳು.
1) ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂ ಮೀಸಲಿಬೇಕು.
2) ರಾಜ್ಯಾದ್ಯಂತ ಕುಲಕಸುಬು ಸೇಂದಿ ಇಳಿಸಿ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬೇಕು.
8) ಈಡಿಗ ಸಮುದಾಯದ ನೇತೃತ್ವದಲ್ಲಿ ನಡೆಯುವ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನ ಮೇಲೆ ಸರ್ಕಾರ
ನೀಡುವ ದೌರ್ಜನ್ಯ ನಿಲ್ಲಿಸಬೇಕು.
4) ಮಂಗಳೂರು, ಉಡುಪಿ, ಶಿವಮೊಗ್ಗ, ಕಾರವಾರ ಜಿಲ್ಲೆಗಳಲ್ಲಿ ಸಮಾಜಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು.
5) ರಾಜ್ಯದ ರಾಜಧನಿಯಲ್ಲಿ ಮಹಾನ್ ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿ ಸ್ಥಾಪನೆ.
6. 2A ವರ್ಗದಲ್ಲಿರುವ ನಮ್ಮ ಸಮುದಾಯಕ್ಕೆ ಯಾವುದೇ ಅನ್ಯಾಯವಾಗದಂತೆ ಹಾಗೂ ಮೀಸಲಾತಿ ಹೆಚ್ಚಿಸುವದು.
7. 12 ನೇ ಶತಮಾನದ ಅನುಭವ ಮಂಟಪದಲ್ಲಿ ಈಡಿಗ ಸಮುದಾಯದ ಶರಣರಾಗಿದ್ದ ಶ್ರೀ ಶರಣ ಧುರಣ
ಹೆಂಡದ ಮಾರಯ್ಯನ ಜಯಂತಿಯನ್ನ ಸರ್ಕಾರದ ವತಿಯಿಂದ ಆಚರಿಸಬೇಕು
8.ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಿಗಳಲ್ಲಿ ನಾರಾಯಣ ಗುರುಗಳ ಆಧಾಯನ ಪೀಠ ಮಾಡಬೇಕು.
9.ಸರಕಾರಿ ಗೋಮಾಳ ಹುಲ್ಲುಗಾವಲು ಜಮೀನಿನಲ್ಲಿ ಸರ್ಕಾರಿ ವೆಚ್ಚದಲ್ಲಿ ಈಜಲು ಮಠ, ತೆಂಗಿನ ಮರ,ತಾಳಿ ಮರಗಳನ್ನು ನೆಡಬೇಕು.
10. ಮೂತೆದಾರರಿಗೆ (ಸೇಂದಿ ಇಳಿಸುವವರಿಗೆ ) ಶೇ ಶೂನ್ಯ ಬಡ್ಡಿ ದರದಲ್ಕಿ ಸಾಲ ನೀಡಬೇಕು ಹಾಗೂ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಘೋಷಿಸಬೇಕು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399