Breaking News

ಕಾಂತಾರ ಚಿತ್ರ ತಂಡಕ್ಕೆ ಕಾನೂನು ಸಂಕಷ್ಟ : “ವರಾಹ ರೂಪಂ” ಟ್ಯೂನ್ ನಮ್ಮಿಂದ ಕದ್ದಿದ್ದು..

Cnewstv.in / 25.10.2022/ ಸಿನಿಮಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕಾಂತಾರ ಚಿತ್ರ ತಂಡಕ್ಕೆ ಕಾನೂನು ಸಂಕಷ್ಟ : “ವರಾಹ ರೂಪಂ” ಟ್ಯೂನ್ ನಮ್ಮಿಂದ ಕದ್ದಿದ್ದು..

ಬೆಂಗಳೂರು : ಕಾಂತಾರ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸಾಫೀಸ್ ನಲ್ಲಿ ಸಕ್ಕತ್ ಸದ್ದು ಮಾಡಿದೆ. ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾಗಳಲ್ಲಿ ಒಂದಾಗಿದೆ‌.

ಈ ಸಿನಿಮಾದ “ವರಾಹ ರೂಪಂ ದೈವ ವರಿಷ್ಠಂ” ಹಾಡಿನ ಮ್ಯೂಸಿಕ್ ಮಲಯಾಳಂ ಸಿನಿಮಾದ ನವರಸಂ ಹಾಡಿನ ಕಾಪಿ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಇದಕ್ಕೆ ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕೇಶ್ ಅವರು ಇದು ಬೇರೆ ಅದು ಬೇರೆ ಎಂದು ಆರೋಪವನ್ನ ತಳ್ಳಿಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ‘ತೈಕ್ಕುಡಂ ಬ್ರಿಡ್ಜ್’ ತಂಡವು ಕಾಪಿರೈಟ್ ಬಗ್ಗೆ ಉಲ್ಲೇಖ ಮಾಡಿದೆ. “ನಾವು ನಮ್ಮ ಕೇಳುಗರಿಗೆ ತಿಳಿಸುವುದೇನೆಂದರೆ, ತೈಕ್ಕುಡಂ ಬ್ರಿಡ್ಜ್ ತಂಡವು ‘ಕಾಂತಾರ’ ಸಿನಿಮಾದ ಜೊತೆಗೆ ಯಾವುದೇ ರೀತಿಯ ಸಹಕಾರವನ್ನು ಹೊಂದಿಲ್ಲ. ವರಾಹ ರೂಪ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ’ ಎಂದಿದೆ.

ಇನ್ನೂ ಈ ಸಿನಿಮಾ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಇದರ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆಯನ್ನು ನೋಡಬೇಕು.

ಇದನ್ನು ಓದಿ :

http://cnewstv.in/?p=11308

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*