Breaking News

ಯುಡಿಐಡಿ ಕಾರ್ಡ್ ಪಡೆಯಲು ವಿಕಲಚೇತನರಿಂದ ಆನ್‍ಲೈನ್ ಅರ್ಜಿ ಆಹ್ವಾನ.

Cnewstv.in / 09.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಯುಡಿಐಡಿ ಕಾರ್ಡ್ ಪಡೆಯಲು ವಿಕಲಚೇತನರಿಂದ ಆನ್‍ಲೈನ್ ಅರ್ಜಿ ಆಹ್ವಾನ.

ಶಿವಮೊಗ್ಗ : ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಈಗಾಗಲೇ ಗುರುತಿನ ಚೀಟಿ (ಯುಡಿಐಡಿ ಸ್ಮಾರ್ಟ್ ಕಾರ್ಡ್) ಪಡೆದಿರುವ ಹಾಗೂ ಹೊಸದಾಗಿ ಗುರುತಿನ ಚೀಟಿ ಪಡೆಯಲು ಎಲ್ಲಾ ವಿಕಲಚೇತನರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿಶಿಷ್ಟ ಅಂಗವಿಕಲ ಗುರುತಿನ ಚೀಟಿಯನ್ನು (ಯುಡಿಐಡಿ ಸ್ಮಾರ್ಟ್‍ಕಾರ್ಡ್) ಹೊಂದದೇ ಇರುವ ಅಂಗವಿಕಲರು ಕೇಂದ್ರ, ರಾಜ್ಯ ಸರ್ಕಾರದಿಂದ ಪಡೆಯಲಾಗುತ್ತಿರುವ ಯೋಜನೆಗಳನ್ನು ಶೀಘ್ರದಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲ ವಿಕಲಚೇತನರು www.swavalambacard.gov.in ವೆಬ್‍ಸೈಟ್ ಮೂಲಕ ದಿ: 27/07/2022ರೊಳಗಾಗಿ ನೋಂದಾಯಿಸಿಕೊಂಡು ವೈದ್ಯಕೀಯ ಪ್ರಾಧಿಕಾರಗಳಿಂದ ತಪಾಸಣೆಯನ್ನು ಮಾಡಿಕೊಳ್ಳುವ ಮೂಲಕ ಯುಡಿಐಡಿ ಕಾರ್ಡ್ ಪಡೆಯುವುದು.

ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ ಹಾಗೂ ಆಯಾ ತಾಲ್ಲೂಕುಗಳ ತಾಲ್ಲೂಕು ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯುಗಳಿಗೆ ದೂರವಾಣಿ ಕರೆ ಮಾಡುವುದು. ಶಿವಮೊಗ್ಗ – ಮಲ್ಲಿಕಾರ್ಜುನ ಮೊ.ಸಂ:9980150110, ಭದ್ರಾವತಿ -ದಿನೇಶ್ 7899137243, ಶಿಕಾರಿಪುರ -ಹುಚ್ಚರಾಯಪ್ಪ 9741161346, ತೀರ್ಥಹಳ್ಳಿ – ದಿವಾಕರ 9480767638, ಸಾಗರ – ಶ್ಯಾಮ್‍ಸುಂದರ್ 9535247757/9480068244, ಸೊರಬ- ಭರತ್‍ಕುಮಾರ್ 9110493122, ಹೊಸನಗರ -ರವಿಕುಮಾರ್ 9731922693 ಗಳನ್ನು ಹಾಗೂ ಆಯಾ ತಾಲೂಕು ಅಸ್ಪತ್ರೆಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ಎಂ ದೊಡ್ಡಮನಿ ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=10436

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*