GST ಪರಿಹಾರವನ್ನು ಇನ್ನು ಐದು ವರ್ಷ ಮುಂದುವರಿಸಿ, ಅಗತ್ಯ ವಸ್ತುಗಳ ಮೇಲೆ ಏರಿಕೆ ಮಾಡಿರುವ ತೆರಿಗೆಯನ್ನು ಕಡಿತಗೊಳಿಸಿ – ಜಿಲ್ಲಾ ಯುವ ಕಾಂಗ್ರೆಸ್.
Cnewstv.in / 02.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
GST ಪರಿಹಾರವನ್ನು ಇನ್ನು ಐದು ವರ್ಷ ಮುಂದುವರಿಸಿ, ಅಗತ್ಯ ವಸ್ತುಗಳ ಮೇಲೆ ಏರಿಕೆ ಮಾಡಿರುವ ತೆರಿಗೆಯನ್ನು ಕಡಿತಗೊಳಿಸಿ – ಜಿಲ್ಲಾ ಯುವ ಕಾಂಗ್ರೆಸ್.
ಶಿವಮೊಗ್ಗ : ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕೊಡುವುದನ್ನು ಇನ್ನೂ 5 ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಮುಂದುವರಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಕೇಂದ್ರ ಜಿಎಸ್‌ಟಿ ಪರಿಹಾರ ನಿಲ್ಲಿಸಿದರೆ ನಮ್ಮ ರಾಜ್ಯಕ್ಕೆ ವಾರ್ಷಿಕ 20 ಸಾವಿರ ಕೋಟಿ ರೂ. ನಷ್ಟವಾಗಲಿದೆ.
ಜುಲೈ, 2017 ರಿಂದ ಜಾರಿಯಾಗಿದ್ದ ಜಿಎಸ್ ಟಿ ಪರಿ ಹಾರ ವ್ಯವಸ್ಥೆ ಗುರುವಾರ (ಜೂ.30) ಕೊನೆಗೊಂಡಿದೆ.
ಚಂಡಿಗಢದಲ್ಲಿ ಮೂರು ದಿನಗಳ ಹಿಂದೆ ನಡೆದ 47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಬೇಡಿಕೆ ಬಗ್ಗೆ ರಾಜ್ಯದ ಸಿಎಂ
ಬೊಮ್ಮಾಯಿ ಸೇರಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರಕಾರಗಳ ಪ್ರತಿನಿಧಿಗಳು ತುಟಿಬಿಚ್ಚಿಲ್ಲ. ?ಸಿಎಂ ಬೊಮ್ಮಾಯಿ ಅವರು ಜಿಎಸ್‌ಟಿ ಸಭೆಯಲ್ಲಿ ಪಾಲ್ಗೊಂಡರೂ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ರಾಜ್ಯಗಳಿಂದ ಜಿಎಸ್‌ಟಿಯ ತೆರಿಗೆ ಹಣವನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ಬರಬೇಕಾದ ತೆರಿಗೆಯ ಪರಿಹಾರ ಧನವನ್ನು ಕೇಳಿದರೆ ರಾಜ್ಯ ಸರ್ಕಾರಗಳು ಜಿಎಸ್‌ಟಿ ಪರಿಹಾರವನ್ನು ನೆಚ್ಚಿಕೊಳ್ಳದೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಆರ್ಥಿಕ ಸಚಿವೆ ನಿರ್ಮಲ ಸೀತಾರಾಮ್ ರವರು ರಾಜ್ಯ ಸರ್ಕಾರಗಳಿಗೆ ಸಂದೇಶ ರವಾನಿಸುತ್ತಿರುವುದನ್ನು ನೋಡಿದರೆ ಕೇಂದ್ರ ಸರ್ಕಾರದ ದಿವಾಳಿತನ ಎದ್ದು ತರುತ್ತದೆ.
ಇದೇ ಸಭೆಯಲ್ಲಿ ತೆರಿಗೆ ಪ್ರಮಾಣಗಳನ್ನು ಕೆಲವು ವಸ್ತುಗಳ ಮೇಲೆ ಶೇ.12 ಇದ್ದ ತೆರಿಗೆಯನ್ನು ಶೇ.18ಕ್ಕೆ ಹೆಚ್ಚಿಸಲಾಗಿದೆ. ರೈತರು ಹೊಲ ಗದ್ದೆಗಳಲ್ಲಿ ಬಳಸುವ ಸಬ್ ಮೆರಿನ್ ಪಂಪ್ ಗಳ ಮೇಲೆ ಶೇ.12 ಯನ್ನು ಶೇ.15ಕ್ಕೆ ಹಾಲು ಕರೆಯುವ ಯಂತ್ರಗಳ ಮೇಲಿನ ತೆರಿಗೆಯನ್ನು, ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಿದ್ದಾರೆ. ಹಣ್ಣು, ತರಕಾರಿ ಮತ್ತು. ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್ ರೈತರು ಮತ್ತು ಜನಸಾಮಾನ್ಯರಿಗೆ
ತೊಂದರೆಯಾಗಲಿದೆ” ಈಗಾಗಲೇ ‘ಪೆಟ್ರೋಲ್, ಡೀಸೆಲ್, ಗ್ಯಾಸ್, ಸಿಮೆಂಟ್,ಕಬ್ಬಿಣ, ಅಡುಗೆ ಎಣ್ಣೆ ದುಬಾರಿಯಾಗಿರುವ ಈ ಸಮಯದಲ್ಲೇ ತೆರಿಗೆ ಏರಿಕೆ ಮಾಡಿರುವುದು ಸರಿಯಲ್ಲ.
ಬರೆಯುವ ಮತ್ತು ಮುದ್ರಿಸುವ ಇಂಕ್ ಗಳ ಮೇಲಿನ ತೆರಿಗೆಯನ್ನು ಶೇ.18ಕ್ಕೆ ಹೆಚ್ಚಿಸಲಾಗಿದ್ದು, ಪತ್ರಿಕೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಬ್ಯಾಂಕ್ ಚೆಕ್ ಬುಕ್ ಮೇಲೆ ಹೊಸದಾಗಿ ಶೇ.18 ತೆರಿಗೆ ಹಾಕಿರುವುದು ಸರಿಯಲ್ಲ, ಜಿಎಸ್‌ಟಿ ಕೌನ್ಸಿಲ್‌ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗಲಿದ್ದು, ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳು ಇರುವ ಕಾರಣ ಕೇಂದ್ರದ ಹಣಕಾಸು ಸಚಿವರು ತಮಗೆ ಬೇಕಾದಂತೆ ಮಾಡಿದ್ದಾರೆ.
ಕೂಡಲೇ ಅಗತ್ಯ ವಸ್ತುಗಳ ಮೇಲೆ ಏರಿಕೆ ಮಾಡಿರುವ ತೆರಿಗೆಯನ್ನು ಇಳಿಸಿ, ರಾಜ್ಯಗಳಿಗೆ ನೀಡುವ ಜಿಎಸ್‌ಟಿ
ಪರಿಹಾರವನ್ನು ಇನ್ನೂ ಐದು ವರ್ಷಗಳಿಗೆ ಮುಂದುವರಿಸಬೇಕೆಂದು ಅಗ್ರಹಿಸಿದರು.
ಇದನ್ನು ಒದಿ : https://cnewstv.in/?p=10335
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
GST ಪರಿಹಾರವನ್ನು ಇನ್ನು ಐದು ವರ್ಷ ಮುಂದುವರಿಸಿ ಅಗತ್ಯ ವಸ್ತುಗಳ ಮೇಲೆ ಏರಿಕೆ ಮಾಡಿರುವ ತೆರಿಗೆಯನ್ನು ಕಡಿತಗೊಳಿಸಿ - ಜಿಲ್ಲಾ ಯುವ ಕಾಂಗ್ರೆಸ್. 2022-07-02