ಜೋಗ ಜಲಪಾತದಿಂದ ಕೆಳಗೆ ಬೀಳುತ್ತಿರುವ ನೀರು ವಾಪಸ್ ಮೇಲಕ್ಕೆ – ವಿಡಿಯೋ ವೈರಲ್..
Cnewstv.in / 13.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜೋಗ ಜಲಪಾತದಿಂದ ಕೆಳಗೆ ಬೀಳುತ್ತಿರುವ ನೀರು ವಾಪಸ್ ಮೇಲಕ್ಕೆ – ವಿಡಿಯೋ ವೈರಲ್..
ಶಿವಮೊಗ್ಗ : ವಿಶ್ವವಿಖ್ಯಾತ ಜೋಗ ಜಲಪಾತ ಇಂದು ಕೌತುಕವನ್ನು ಸೃಷ್ಟಿ ಮಾಡಿತ್ತು. ಜೋಗ ಜಲಪಾತದಿಂದ ಕೆಳಗೆ ಬೀಳುತ್ತಿರುವ ನೀರು ವಾಪಸ್ ಮೇಲಕ್ಕೆ ಹೋಗುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..
ಇಂದು ಜೋಗ ಜಲಪಾತದಿಂದ ಕೆಳಗೆ ಬೀಳುತ್ತಿರುವ ನೀರು ಗಾಳಿಯ ರಭಸಕ್ಕೆ ವಾಪಸ್ ಹೋಗುತ್ತಿತ್ತು. ಈ ಹಿಂದೆ ರಾಜಾ ಜಲಪಾತದಿಂದ ಮಾತ್ರ ಈ ರೀತಿ ನೀರು ವಾಪಸ್ ಹೋಗುತ್ತಿತ್ತು ಆದರೆ ಇಂದು ರಾಜ, ರಾಣಿ, ರೋರರ್, ರಾಕೆಟ್ ಜಲಪಾತದಿಂದ ನೀರು ಗಾಳಿಯ ರಭಸಕ್ಕೆ ಮೇಲೆ ಹೋಗಿದೆ.
ಈ ದೃಶ್ಯ ಪ್ರವಾಸಿಗರಲ್ಲಿ ಅಚ್ಚರಿಯನ್ನು ಮೂಡಿಸಿದ್ದು, ಈ ಅಪರೂಪದ ದೃಶ್ಯವನ್ನು ಪ್ರವಾಸಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
Recent Comments