Breaking News

ಸಂಘಟನೆಯ ಖಾತೆಗಳನ್ನು ಈಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವುದು ಖಂಡಿನಿಯಾ – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ

Cnewstv.in / 02.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಂಘಟನೆಯ ಖಾತೆಗಳನ್ನು ಈಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವುದು ಖಂಡಿನಿಯಾ – ಪಾಪ್ಯುಲರ್ ಫ್ರಂಟ್

ಶಿವಮೊಗ್ಗ : ಸಂಘಟನೆಯ ಖಾತೆಗಳನ್ನು ಈಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವುದು ಖಂಡಿನಿಯಾ.‌ ಇದು ಅಧಿಕಾರದ ದುರ್ಬಳಕೆ ಮತ್ತು ಪ್ರಜಾಸತ್ತಾತ್ಮಕ ಹಕ್ಕಿನ ನಿರಾಕರಣೆಯಾಗಿದೆ.‌ ಸಂಘಟನೆಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದನ್ನು ಪಾಪ್ಯುಲರ್ ಫ್ರೆಂಟ್ ಖಂಡಿಸುತ್ತದೆ.

ಈಡಿಯ ಈ ಇತ್ತೀಚಿನ ಕ್ರಮವು ಕಳೆದ ಕೆಲವು ವರ್ಷಗಳಿಂದ ಸಂಘಟನೆಯ ವಿರುದ್ಧ ನಡೆಯುತ್ತಿರುವ ದಮನಕಾರಿ ಕ್ರಮಗಳ ಮುಂದುವರಿದ ಭಾಗವಾಗಿದೆ. ಜನಪರ ಚಳವಳಿಗಳು, ಎನ್‌ಜಿಒಗಳು, ಮಾನವ ಹಕ್ಕುಗಳ ಸಂಘಟನೆಗಳು, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ಆಡಳಿತ ಪಕ್ಷವನ್ನು ಟೀಕಿಸುವ ದೇಶದ ಯಾವುದೇ ಪ್ರಜಾಸತ್ತಾತ್ಮಕ ಧ್ವನಿಗಳನ್ನು ದಮನಿಸುವ ಮೂಲಕ ಏಜೆನ್ಸಿಯು ರಾಜಕೀಯ ನಾಯಕರ ದಾಳವಾಗಿ ವರ್ತಿಸುತ್ತಿದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ.

ಪಾಪ್ಯುಲರ್ ಫ್ರೆಂಟ್‌ನಂತಹ ರಾಷ್ಟ್ರಮಟ್ಟದ ಸಾಮಾಜಿಕ ಆಂದೋಲನದ ಕಾರ್ಯನಿರ್ವಹಣೆಗೆ 13 ವರ್ಷಗಳ ಅವಧಿಗೆ ಠೇವಣಿ ಇಡುವುದು ಸಾಮಾನ್ಯ ಸಂಗತಿ. ಈಡಿ ಉಲ್ಲೇಖಿಸಿದಂತೆ ಇದು ಅಸಮಾನ್ಯ ಸಂಗತಿಯೇನೂ ಅಲ್ಲ. ದೇಶವು ಎದುರಿಸುತ್ತಿದ್ದ ಪ್ರಮುಖ ಪಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಪಾಪ್ಯುಲರ್ ಫ್ರೆಂಟ್, ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ನಿರ್ವಹಣೆಗೆ ಸಾರ್ವಜನಿಕರಿಂದ ನಿಧಿ ಸಂಗ್ರಹಣಾ ಅಭಿಯಾನದ ವೇಳೆ ಸಂಗ್ರಹಿಸಿದ ಠೇವಣಿಗಳನ್ನು ಕೂಡ ಈ ಮೊತ್ತವು ಒಳಗೊಂಡಿದೆ ಎಂಬುದನ್ನು ಸಹ ಗಮನಿಸಬೇಕು.

ಈಡಿ ಅಧಿಕಾರಿಗಳು ಹೇಳಿರುವ ಅಂಕಿಅಂಶಗಳು ಆಶ್ಚರ್ಯಕರವಾಗಿಲ್ಲ ಮತ್ತು ಈಡಿಯಂತಹ ಏಜೆನ್ಸಿಯಿಂದ ಯಾವುದೇ ದೊಡ್ಡ ತನಿಖೆಯ ಅಗತ್ಯವಿಲ್ಲ, ಏಕೆಂದರೆ ನಾವು ಈಗಾಗಲೇ ಸಂಗ್ರಹಿಸಿದ ಪ್ರತಿ ಪೈಸೆಯ ಲೆಕ್ಕವನ್ನೂ ಆದಾಯ ತೆರಿಗೆಗೆ ಸಲ್ಲಿಸಿದ್ದೇವೆ. ಇದು ಅಂಕಿಅಂಶಗಳನ್ನು ವೈಭವೀಕರಿಸಿರುವುದರ ಹೊರತಾಗಿ ಮತ್ತೇನೂ ಅಲ್ಲ ಎಂದು ಸಾಬೀತುಪಡಿಸುತ್ತದೆ. ಗಮನಿಸಬೇಕಾದ ಮತ್ತೊಂದು ಪ್ರಮುಖ ಸಂಗತಿಯೆಂದರೆ, 2020ರಲ್ಲಿ ಅನೇಕ ಮಾಧ್ಯಮಗಳು ಪಾಪ್ಯುಲರ್ ಫ್ರೆಂಟ್, 120 ಕೋಟಿ ಸಂಗ್ರಹಿಸಿದೆ ಎಂದು ವರದಿ ಮಾಡಿದ್ದವು. ಪ್ರಸ್ತುತ 60 ಕೋಟಿಯ ಹೇಳಿಕೆಯು ಹಿಂದಿನ ಸುಳ್ಳು ಪ್ರತಿಪಾದನೆಯನ್ನು ನಿರಾಕರಿಸುತ್ತದೆ ಮತ್ತು ಈ ಏಜೆನ್ಸಿಗಳು ನಮ್ಮಂತಹ ಸಂಸ್ಥೆಗಳನ್ನು ಗುರಿಯಾಗಿಸಲು ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ನೀಡುತ್ತವೆ ಎಂಬುದನ್ನು ಕೂಡ ಇದು ಸಾಬೀತುಪಡಿಸುತ್ತದೆ.

ಅಮ್ಮೆಸ್ಟಿ ಇಂಟರ್ ನ್ಯಾಷನಲ್ ಮತ್ತು ಗ್ರೀನ್ ಪೀಸ್ ನಂತಹ ವಿಶ್ವವಿಖ್ಯಾತ ಎನ್‌ಜಿಒಗಳ ಬ್ಯಾಂಕ್ ಖಾತೆಗಳನ್ನು ಸಹ ಇದೇ ರೀತಿಯಲ್ಲಿ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಪಕ್ಷಗಳ ಭ್ರಷ್ಟ ರಾಜಕಾರಣಿಗಳು, ತನಿಖೆಯ ರೂಪದಲ್ಲಿ ನಡೆಯುವ ಈಡಿಯ ಪ್ರತೀಕಾರಕ್ಕೆ ಹೆದರಿ ತಮ್ಮ ಅಕ್ರಮ ಸಂಪತ್ತನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸೇರುತ್ತಿರುವ ಸಂಗತಿ ಈಗಾಗಲೇ
ದೇಶದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಬಿಜೆಪಿ ನಾಯಕರ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವ್ಯವಹಾರಗಳು ನೂರಾರು ಕೋಟಿ ರೂ.ಗಳಷ್ಟಿದ್ದರೂ ಈಡಿಗೆ ಇದೊಂದು ಕಾಳಜಿಯ ವಿಷಯವಲ್ಲ. ವಿರೋಧ ಪಕ್ಷದವರನ್ನು ಗುರಿಯಾಗಿಸಲು ಮತ್ತು ಮೌನಗೊಳಿಸಲು ಬಿಜೆಪಿ ಯಾವಾಗಲೂ ಈಡಿ ಮತ್ತು ಇತರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ರೀತಿಯನ್ನು ಗಮನಿಸಿದರೆ, ಪಾಪ್ಯುಲರ್ ಫ್ರೆಂಟ್ ವಿರುದ್ಧದ ಈ ಕ್ರಮವು ಅಚ್ಚರಿ ಮೂಡಿಸುತ್ತಿಲ್ಲ.

ಪಾಪ್ಯುಲರ್ ಫ್ರೆಂಟ್ ಪ್ರಜಾಸತ್ತಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ಅದು ತಳ ವರ್ಗದ ಜನಸಾಮಾನ್ಯರಿಂದ ರೂಪುಗೊಂಡಿದೆ. ಇದು ತಮ್ಮ ದೇಣಿಗೆಗಳ ಮೂಲಕ ಸಂಘಟನೆಗೆ ಸಹಾಯ ಮಾಡುವ ದೇಶಾದ್ಯಂತ ಲಕ್ಷಾಂತರ ಜನರ ವಿಶ್ವಾಸವನ್ನು ಗೆದ್ದಿದೆ. ಇದೇ ಕಾರಣದಿಂದಾಗಿ, ಯಾವುದೇ ಸಣ್ಣ ಮತ್ತು ದೊಡ್ಡಮಟ್ಟದ ಹಣಕಾಸು ವ್ಯವಹಾರಗಳನ್ನು ಪಾರದರ್ಶಕವಾಗಿ ಮಾಡಬೇಕೆಂಬುದು ಸಂಸ್ಥೆ ತನ್ನ ಪ್ರಾರಂಭದಿಂದಲೂ ಅನುಸರಿಸಿಕೊಂಡು ಬಂದ ನೀತಿಯಾಗಿದೆ.

ಸಂಘಪರಿವಾರದ ವಿಭಜನಕಾರಿ ರಾಜಕಾರಣದ ವಿರುದ್ಧ ಪಾಪ್ಯುಲರ್ ಫ್ರೆಂಟ್ ತಾಳಿದ ರಾಜಿರಹಿತ ನಿಲುವೇ ಸಂಘಟನೆಯು ಏಜೆನ್ಸಿಯ ರಾಜಕೀಯಪ್ರೇರಿತ ಪ್ರಕರಣಗಳಲ್ಲಿ ಗುರಿಯಾಗಲು ಏಕೈಕ ಕಾರಣ ಎಂದು ಜನರಿಗೆ ಚೆನ್ನಾಗಿ ತಿಳಿದಿದೆ. ಸಂಘಟನೆಯು ತನ್ನ ದೃಢವಾದ ನಿಲುವಿನೊಂದಿಗೆ ಮುಂದುವರಿಯಲಿದೆ ಮತ್ತು ಆರೆಸ್ಸೆಸ್ ನ ದುಷ್ಟ ಯೋಜನೆಗಳನ್ನು‌ ವಿರೋಧಿಸಲಿದೆ. ಈ ಕ್ರಮಗಳು ನಮ್ಮನ್ನು ಬೆದರಿಸಲಾರವು ಮತ್ತು ಈ ಅಡೆತಡೆಗಳನ್ನು ಎದುರಿಸಲು ನಾವು ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಆಯ್ಕೆಗಳನ್ನು ಅನುಸರಿಸಲಿದ್ದೇವೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಈ ಅಪ್ರಜಾಸತ್ತಾತ್ಮಕ ನಡೆ ಮತ್ತು ಅಧಿಕಾರದ ದುರ್ಬಳಕೆಯನ್ನು ಖಂಡಿಸಲು
ಮುಂದಾಗಬೇಕೆಂದು ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧರಾಗಿರುವ ದೇಶದ ಜನತೆಗೆ ಪಾಪ್ಯುಲರ್ ಫ್ರೆಂಟ್ ಕರೆ ನೀಡುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ, ಅನೀಸ್ ಅಹ್ಮದ್.‌ ಕಾರ್ಯದರ್ಶಿ ಮುಹಮ್ಮದ್ ಸಾಕಿಫ್ ಎ.ಕೆ.ಅಶ್ರಫ್ ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=10037

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS K S Eshwarappa madhu bangarappa MP election M P Election News NSUI police Sagara Shikaripura Shimoga shimoga district Shivammoga Shivamoga Shivamogga SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments