Cnewstv.in / 08.09.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬ್ರಿಟನ್ ರಾಣಿ ಎಲಿಜಬೆತ್ II ವಿಧಿವಶ ಲಂಡನ್ : ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್ (96) ಸ್ಕಾಟ್ಲೆಂಡ್ ನ ಅರಮನೆಯಲ್ಲಿ ನಿಧನರಾಗಿದ್ದಾರೆಂದು ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಅಧಿಕೃತವಾಗಿ ಪ್ರಕಟಿಸಿದೆ. ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ II ಅವರಿಗೆ ಸ್ಕಾಟ್ಲೆಂಡ್ ನ ಬಲ್ ಮೊರಲ್ ಕ್ಯಾಸಲ್ ನಿವಾಸದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಿಸದೆ ಅವರು ನಿಧನರಾದರು 1953 ರಿಂದ ಬ್ರಿಟನ್ ನ ರಾಣಿಯಾಗಿ ಸುದೀರ್ಘ ...
Read More »Monthly Archives: September 2022
ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರಿಗೆ ಮಂಗೋಲಿಯಾ ಅಧ್ಯಕ್ಷರಿಂದ ಕುದುರೆ ಗಿಫ್ಟ್
Cnewstv.in / 07.09.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರಿಗೆ ಮಂಗೋಲಿಯಾ ಅಧ್ಯಕ್ಷರಿಂದ ಕುದುರೆ ಗಿಫ್ಟ್. ನವದೆಹಲಿ : ಪೂರ್ವ ಏಷ್ಯಾ ರಾಷ್ಟ್ರವಾಗಿರುವ ಮಂಗೋಲಿಯಾಕ್ಕೆ ಭೇಟಿ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿಶೇಷ ತಳಿಯ ಕುದುರೆಯನ್ನು ಅಲ್ಲಿನ ಅಧ್ಯಕ್ಷ ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ರಕ್ಷಣಾ ಸಚಿವರು ತೇಜಸ್ ಎಂದು ನಾಮಕರಣ ಮಾಡಿದ್ದಾರೆ. ಏಳು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗಲೂ ಇದೇ ರೀತಿಯ ಉಡುಗೊರೆ ನೀಡಲಾಗಿತ್ತು. ...
Read More »ಹೆಂಡತಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಪತಿರಾಯ.
Cnewstv.in / 07.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹೆಂಡತಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಪತಿರಾಯ. ಶಿವಮೊಗ್ಗ : ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ ಆದರೆ ಇಲ್ಲಿ ಗಂಡ ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಿಯಾಂಕಾ ಲೇಜೌಟ್ ನಲ್ಲಿ ದಿನೇಶ ಮತ್ತು ಮಂಜುಳಾ ನಡುವೆ ಗಲಾಟೆಯಾಗಿದ್ದು, ಈ ಗಲಾಟೆಯೇ ಕೊಲೆಗೆ ಕಾರಣ ಎಂದು ದಿನೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಮೆಸ್ಕಾಂ ಉದ್ಯೋಗಿಯಾಗಿರು ದಿನೇಶ್ ತನ್ನ ...
Read More »ಭಾರತ್ ಜೋಡೋ ಯಾತ್ರೆಗೆ ಇಂದು ಚಾಲನೆ.
Cnewstv.in / 07.09.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಭಾರತ್ ಜೋಡೋ ಯಾತ್ರೆಗೆ ಇಂದು ಚಾಲನೆ. ನವದೆಹಲಿ : ಇಂದು ಭಾರತ್ ಜೋಡೋ ಯಾತ್ರೆಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಲ್ಲಿ ಚಾಲನೆ ನೀಡಲಿದ್ದಾರೆ. ಒಟ್ಟು 119ಮಂದಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. 12 ರಾಜ್ಯಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಐದು ತಿಂಗಳ ಬಳಿಕ ಸಮಾರೋಪಗೊಳ್ಳಲಿದೆ. ಏಕರೂಪತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಎಲ್ಲರೂ ಬಿಳಿ ಬಣ್ಣದ ವಸ್ತ್ರ ಧರಿಸಬೇಕು ಎಂದು ಸೂಚಿಸಲಾಗಿದೆ. ದಿನಕ್ಕೆ 22 ರಿಂದ 25 ಕಿಲೋಮೀಟರ್ ಪಾದಯಾತ್ರೆ ...
Read More »ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ..
Cnewstv.in / 06.09.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ.. ಬೆಂಗಳೂರು : ಹೃದಯಾಘಾತದಿಂದ ಅರಣ್ಯ, ಆಹಾರ ಮತ್ತು ನಾಗರಿಕ ಇಲಾಖೆ ಸಚಿವರಾದ ಉಮೇಶ್ ಕತ್ತಿ ವಿಧಿವಶರಾಗಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದಾಗ ರಾತ್ರಿ 10 ಗಂಟೆಗೆ ಬಾತ್ ರೂಮಿಗೆ ಹೋಗಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದು ಹತ್ತು ನಿಮಿಷವಾದರೂ ಹೊರಗೆ ಬಾರದೇ ಇದ್ದುದರಿಂದ ಆತಂಕಗೊಂಡು ಕುಟುಂಬಸ್ತರು ಬಾಗಿಲು ಬಡಿದು ನೋಡಿದಾಗ ಪ್ರಜ್ಞೆ ಹೀನ ಸ್ಥಿತಿಯಲ್ಲಿ ಇದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ರಾಮಯ್ಯ ಆಸ್ಪತ್ರೆಗೆ ...
Read More »51 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ದಾಖಲೆಯ ಮಳೆ
Cnewstv.in / 06.09.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. 51 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ದಾಖಲೆಯ ಮಳೆ ಬೆಂಗಳೂರು : ಕಳೆದ ನಾಲ್ಕೈದು ದಿನಗಳಿಂದ ವರುಣನ ಆರ್ಭಟಕ್ಕೆ ಬೆಂಗಳೂರಿನ ಜನ ಅಕ್ಷರಸಹ ತತ್ತರಿಸಿ ಹೋಗಿದ್ದಾರೆ. ಸೆಪ್ಟಂಬರ್ ಆರಂಭದ 5 ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿತ್ತು. ಈಗಾಗಲೇ 709 ಮಿ.ಮೀ. ಮಳೆಯಾಗಿದ್ದು ಇದು 51 ವರ್ಷಗಳ ಬಳಿಕ ಎರಡನೇ ದಾಖಲೆಯ ಮಳೆಯಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಸಾಮಾನ್ಯವಾಗಿ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ 300 ...
Read More »ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಮಾರ್ಗ ಬದಲಾವಣೆ.
Cnewstv.in / 06.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಮಾರ್ಗ ಬದಲಾವಣೆ. ಶಿವಮೊಗ್ಗ : ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆಪ್ಟೆಂಬರ್ 09 ರಂದು ಮೆರವಣಿಗೆ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಿದ್ದು ಸಾರ್ವಜನಿಕ ಹಿತದೃಷ್ಟಿ ಹಾಗೂ ವಾಹನಗಳ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೆಳಕಂಡಂತೆ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಆದೇಶಿಸಿದ್ದಾರೆ. ಮೆರವಣಿಗೆಯು ಅಂದು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್‍ಪಿಎಂ ಮುಖ್ಯ ...
Read More »ರಾಜಧಾನಿಯಲ್ಲಿ ಹೊಳೆಯಂತಾದ ರಸ್ತೆಗಳು, ಅಪಾರ್ಟ್ಮೆಂಟ್ ಪಾರ್ಕಿಂಗ್ ನಲ್ಲಿ ತೇಲುತ್ತಿರುವ ಐಷಾರಾಮಿ ಕಾರುಗಳು.
Cnewstv.in / 06.09.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಾಜಧಾನಿಯಲ್ಲಿ ಹೊಳೆಯಂಥ ರಸ್ತೆಗಳು, ಅಪಾರ್ಟ್ಮೆಂಟ್ ಪಾರ್ಕಿಂಗ್ ನಲ್ಲಿ ತೇಲುತ್ತಿರುವ ಐಷಾರಾಮಿ ಕಾರುಗಳು. ಬೆಂಗಳೂರು : ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ರಾಜಧಾನಿಯ ರಸ್ತೆಗಳೆಲ್ಲಾ ನೀರು ತುಂಬಿಕೊಂಡಿದ್ದು ಹೊಳೆಯಂತಾಗಿದೆ. ಎಲ್ಲಿ ನೋಡಿದರೂ ನೀರು, ಜನರು ಈಜಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಅಪಾರ್ಟ್ಮೆಂಟ್ ಗಳ ಕೆಳಮಹಡಿಯ ಮನೆಗಳಿಗೆ ನೀರು ನುಗ್ಗಿದೆ. ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾರತ್ ಹಳ್ಳಿ, ಕೋರಮಂಗಲ, ...
Read More »ಸಿಚುವಾನ್ ನಲ್ಲಿ ಭಾರಿ ಭೂಕಂಪ. ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿಕೆ.
Cnewstv.in / 06.09.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಿಚುವಾನ್ ನಲ್ಲಿ ಭಾರಿ ಭೂಕಂಪ. ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿಕೆ. ನವದೆಹಲಿ : ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿರುವ ಚೀನಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ನೈಋತ್ಯ ಚೀನಾದಲ್ಲಿ ನೆನ್ನೆ ಪ್ರಬಲ ಭೂಕಂಪವಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿದೆ, 50 ಕ್ಕೂ ಹೆಚ್ಚು ಜನರು ಕಾಣಿಸಿಕೊಂಡಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:25ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿದೆ. ಸಿಚುವಾನ್ ರಾಜಧಾನಿ ಚೆಂಗ್ಡುವಿನಿಂದ 180 ...
Read More »ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ಹೈಕೋರ್ಟ್ ನಿಂದ ತಡೆ..?!
Cnewstv.in / 06.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ಹೈಕೋರ್ಟ್ ನಿಂದ ತಡೆ..?! ಶಿವಮೊಗ್ಗ : ಮಹಾನಗರ ಪಾಲಿಕೆಯ ಮೇಯರ್ – ಉಪಮೇಯರ್ ಚುನಾವಣೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ. ಸೆ.13ರಂದು ನಿಗದಿಯಾಗಿದ್ದ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದ್ದ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಹಿಂಪಡೆಯಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿದೆ. ...
Read More »
Recent Comments