Cnewstv.in / 06.09.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಿಚುವಾನ್ ನಲ್ಲಿ ಭಾರಿ ಭೂಕಂಪ. ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿಕೆ.
ನವದೆಹಲಿ : ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿರುವ ಚೀನಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ನೈಋತ್ಯ ಚೀನಾದಲ್ಲಿ ನೆನ್ನೆ ಪ್ರಬಲ ಭೂಕಂಪವಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 46 ಕ್ಕೆ ಏರಿದೆ, 50 ಕ್ಕೂ ಹೆಚ್ಚು ಜನರು ಕಾಣಿಸಿಕೊಂಡಿದ್ದಾರೆ.
ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:25ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿದೆ. ಸಿಚುವಾನ್ ರಾಜಧಾನಿ ಚೆಂಗ್ಡುವಿನಿಂದ 180 ಕಿಲೋ ಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಸಿಚುವಾನ್ ಸುಮಾರು 21 ಮಿಲಿಯನ್ ಜನರು ವಾಸವಾಗಿದ್ದಾರೆ.
ಘಟನಾ ಸ್ಥಳಗಳಲ್ಲಿ ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯದಲ್ಲಿ ಪ್ರಗತಿಯಲ್ಲಿದೆ. ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಭೂಕಂಪನದಿಂದಾಗಿ ಕೆಲವು ರಸ್ತೆಗಳು ಮತ್ತು ಮನೆಗಳು ಹಾನಿಗೊಂಡಿದ್ದು, ಕೆಲವು ಪ್ರದೇಶದಲ್ಲಿ ದೂರವಾಣಿ, ಮೊಬೈಲ್ ಸಂಪರ್ಕ ಕಡಿತಗೊಂಡಾಗ ವರದಿಯಾಗಿದೆ.
ಸಿಚುವಾನ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಮಡಿದವರಿಗೆ ಭಾರತೀಯ ರಾಯಭಾರ ಕಚೇರಿ ಸಂತಾಪ ಸೂಚಿಸಿದೆ ಜೊತೆಗೆ ಶೀಘ್ರವಾಗಿ ಚೇತರಿಸಿಕೊಳ್ಳಲು ಎಂದು ಟ್ವೀಟ್ ಮಾಡಿದ್ದಾರೆ
ಇದನ್ನು ಒದಿ : https://cnewstv.in/?p=11042
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
Recent Comments