Cnewstv.in / 06.09.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
51 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ದಾಖಲೆಯ ಮಳೆ
ಬೆಂಗಳೂರು : ಕಳೆದ ನಾಲ್ಕೈದು ದಿನಗಳಿಂದ ವರುಣನ ಆರ್ಭಟಕ್ಕೆ ಬೆಂಗಳೂರಿನ ಜನ ಅಕ್ಷರಸಹ ತತ್ತರಿಸಿ ಹೋಗಿದ್ದಾರೆ.
ಸೆಪ್ಟಂಬರ್ ಆರಂಭದ 5 ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿತ್ತು. ಈಗಾಗಲೇ 709 ಮಿ.ಮೀ. ಮಳೆಯಾಗಿದ್ದು ಇದು 51 ವರ್ಷಗಳ ಬಳಿಕ ಎರಡನೇ ದಾಖಲೆಯ ಮಳೆಯಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಸಾಮಾನ್ಯವಾಗಿ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ 300 ರಿಂದ 315 ಮಿ.ಮೀ ಮಳೆಯಾಗುತ್ತಿತ್ತು ಆದರೆ ಈ ಬಾರಿ 709 ಮಿ.ಮೀ. ಮಳೆಯಾಗಿದೆ. 1971ರ ಮಳೆಗಾಲದಲ್ಲಿ 725 ಮಿ.ಮೀ ಮಳೆಯಾಗಿತ್ತು ಅದನ್ನು ಹೊರತುಪಡಿಸಿದರೆ ಇದೇ ವರ್ಷ ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿದೆ.
ಇದನ್ನು ಒದಿ : https://cnewstv.in/?p=11052
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
C News TV Kannada News Online in cnewstv