ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿಗಳು ಹೆಚ್ಚಾಗಿದ್ದು, ಮೂರು ದಿನಗಳಲ್ಲಿ ಅವುಗಳನ್ನು ಖಾಲಿ ಮಾಡುವಂತೆ ಹಂದಿ ಮಾಲೀಕರಿಗೆ ಮಹಾನಗರ ಪಾಲಿಕೆ ಎಚ್ಚರಿಕೆಯ ಕರೆ ನೀಡಿದೆ. ಶಿವಮೊಗ್ಗ ನಗರದಲ್ಲಿ ಅನೈರ್ಮಲ್ಯತೆ, ಪರಿಸರ ಮಾಲಿನ್ಯ, ಹಂದಿ ಜ್ವರ ಮತ್ತು ಮೆದುಳು ಜ್ವರದಂತಹ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಸಾರ್ವಜನಿಕರು ಹಂದಿ ಸಾಕಾಣಿಕೆ ಮಾಲೀಕರ ವಿರುದ್ಧ ಉಪಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ದೂರು ನೀಡಿದ್ದಾರೆ. ಹಂದಿ ಸಾಕಾಣಿಕೆ ಮಾಡಬಾರದೆಂದು ನಿರ್ದೇಶಿಸಿ ಪಾಲಿಕೆಯು ಈ ಹಿಂದೆ ಅನೇಕ ಬಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ...
Read More »ಶಿವಮೊಗ್ಗ
ನಾಳೆ (ಏ.05) ವಿದ್ಯುತ್ ವ್ಯತ್ಯಯ.
Cnewstv | 04.04.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನಾಳೆ (ಏ.05) ವಿದ್ಯುತ್ ವ್ಯತ್ಯಯ. ಶಿವಮೊಗ್ಗ : ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯ ಎನ್.ಟಿ.ರಸ್ತೆಯಲ್ಲಿ ನ್ಯಾಷನಲ್ ಹೈವೆ ಕಾಮಗಾರಿ ನಡೆಯುತ್ತಿರುವುದರಿಂದ 11 ಕೆವಿ. ವಿದ್ಯುತ್ ಮಾರ್ಗ ಸ್ಥಳಾಂತರಿಸುತ್ತಿದ್ದು, ಏ.05 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಪೇಪರ್ ಪ್ಯಾಕೇಜ್, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ಗಜಾನನ ಗ್ಯಾರೇಜ್, ಪೀಲೆ ...
Read More »ಇಟ್ಟಿಗೆ ನಿರ್ಮಿಸುವ ಶೆಡ್ ನಲ್ಲಿ ವ್ಯಕ್ತಿ ಆತ್ಮಹತ್ಯೆ
ಶಿವಮೊಗ್ಗ: ಇಟ್ಟಿಗೆ ತಯಾರು ಮಾಡಲು ನಿರ್ಮಿಸಿದ್ದ ಶೆಡ್ ನಲ್ಲಿಯೇ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗ ತಾಲೂಕಿನ ತೋಟದಕೊಪ್ಪ ಗ್ರಾಮದ ಶೆಡ್ ನಲ್ಲಿ ಘಟನೆ ನಡೆದಿದೆ. ಜಾನಕಿರಾಮ್( 34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶಿವಮೊಗ್ಗ ತಾಲೂಕಿನ ಉಂಬಳೇಬೈಲು ಗ್ರಾ.ಪಂ ವ್ಯಾಪ್ತಿಯ ಹುರಳಿಹಳ್ಳಿಯ ನಿವಾಸಿಯಾಗಿರುವ ಜಾನಕಿರಾಮ್, ತೋಟದಕೊಪ್ಪದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಟ್ಟಿಗೆ ನಿರ್ಮಿಸುವ ಶೆಡ್ ನಲ್ಲಿ ಸೀರೆ ಬಳಸಿ,ಆತ್ಮಹತ್ಯೆ ಮಾಡಿಕೊಂಡಿದ್ದು, ಹೆಚ್ಚು ಸಾಲ ಮಾಡಿಕೊಂಡಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಖಾಲಿ ಜಾಗಕ್ಕೆ ಬೇಲಿ- ಹಿಂದೂ ಸಂಘಟನೆಗಳ ಆಕ್ರೋಶ
ಶಿವಮೊಗ್ಗ : ಡಿಸಿ ಕಚೇರಿಯ ಎದುರಿನ ಖಾಲಿ ಜಾಗಕ್ಕೆ ಬೇಲಿ ಹಾಕಿ ವಾಹನಗಳ ಪಾರ್ಕಿಂಗ್ ಮತ್ತು ಸಾರ್ವಜನಿಕರ ಓಡಾಟ ನಿರ್ಬಂಧಿಸಿದ್ದನ್ನು ವಿರೋಧಿಸಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯವಾಗಿ ಖಾಲಿ ಜಾಗಕ್ಕೆ ಬೇಲಿ ಹಾಕಿರುವುದು ಹಿಂದೂ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಸಾರ್ವಜನಿಕರ ಆಸ್ತಿಯೇ ವಿನಃ ಬೇರೆಯಾರದ್ದೂ ಆಸ್ತಿಯಲ್ಲ. ಈ ಬೇಲಿಯನ್ನ ಪೊಲೀಸರು ಕೂಡಲೇ ತೆಗೆಸಬೇಕು, ಇಲ್ಲವಾದಲ್ಲಿ ನಾವೇ ಬೇಲಿ ತೆಗೆಯುವುದಾಗಿ ಹಿಂದೂ ಸಂಘಟನೆಗಳ ಪ್ರಮುಖರು- ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಡಿವೈಎಸ್ಪಿ ಸಂಜೀವ್ ಕುಮಾರ್ ಹಾಗೂ ಜಯನಗರ ಠಾಣೆ ...
Read More »ಶಿವಮೊಗ್ಗದಲ್ಲಿ ಸಂಭ್ರಮದಿಂದ ರಂಜಾನ್ ಆಚರಣೆ: ವ್ಯಾಪಕ ಬಂದೋಬಸ್ತ್
ಶಿವಮೊಗ್ಗ : ಶಾಂತಿ ಮತ್ತು ಸೌಹಾರ್ದತೆ ಸಾರುವ ಪವಿತ್ರ ರಂಜಾನ್ ಹಬ್ಬವನ್ನ ಮುಸ್ಲಿಂ ಸಮೂದಾಯದವರು ಇಂದು ಶಿವಮೊಗ್ಗ ನಗರ ಸೇರಿದಂತೆ ರಾಜ್ಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಶಿವಮೊಗ್ಗ ಡಿಸಿ ಕಚೇರಿ ಸಮೀಪದ ಈದ್ಗಾ ಮೈದಾನ, ಗೋಪಾಳದ ದ್ರೌಪದಮ್ಮ ಸರ್ಕಲ್ ಬಳಿಯ ಮೈದಾನ ಸೇರಿದಂತೆ ಹಲವೆಡೆ ರಂಜಾನ್ ಹಿನ್ನೆಲೆ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ಮುಸ್ಲಿಂ ಬಾಂಧವರು ಹೊಸಬಟ್ಟೆ ಉಟ್ಟು ಮಕ್ಕಳು ಸಹಿತ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮುಸ್ಲಿಂ ಧರ್ಮ ಗುರುಗಳು ರಂಜಾನ್ ಹಬ್ಬದ ಮಹತ್ವದ ಬಗ್ಗೆ ...
Read More »ಚಂದ್ರಗುತ್ತಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ- 18 ಲಕ್ಷ ರೂ. ಸಂಗ್ರಹ
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಹಣ ಎಣಿಕೆ ಕಾರ್ಯ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು. ದೇವಸ್ಥಾನದ ಜಾತ್ರೆ ಹಾಗೂ ಹುಣ್ಣಿಮೆಯಲ್ಲಿ ಭಕ್ತರ ಮೂಲಕ ಸಂಗ್ರಹವಾದ ಕಾಣಿಕೆ ಹಣದ ಎಣಿಕೆಯನ್ನು ಸೊರಬ ತಾಲೂಕು ದಂಡಾಧಿಕಾರಿ ಮಂಜುಳಾ ಹೆಗಡಾಳ್ ನೇತೃತ್ವದಲ್ಲಿ ನಡೆಸಲಾಯಿತು. ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ 18,18,480 ರೂ. ಕಾಣಿಕೆ ಸಂಗ್ರವಾಗಿದೆ. ಇನ್ನು ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮೆರಾ ಸಹ ಆಳವಡಿಸಲಾಗಿತ್ತು. ಹುಂಡಿ ಎಣಿಕೆ ಕಾರ್ಯದಲ್ಲಿ ...
Read More »ಯತ್ನಾಳ್ ಉಚ್ಚಾಟನೆ – ತಡವಾದ್ರೂ ಸರಿಯಾದ ಕ್ರಮ ಎಂದ ಶಾಸಕ ಚೆನ್ನಿ
ಶಿವಮೊಗ್ಗ: ಬಿಜೆಪಿ ಎಂದಿಗೂ ಅಶಿಸ್ತನ್ನ ಸಹಿಸೋದಿಲ್ಲ. ಕ್ರಮ ತಡವಾಗಬಹುದು. ಆದರೆ, ಕ್ರಮದಲ್ಲಿ ವ್ಯತ್ಯಾಸ ಎಂದು ಆಗಲ್ಲ ಎಂದು ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಶಿಸ್ತಿನ ವರ್ತನೆಯನ್ನ ಯಾವುದೇ ಒಬ್ಬ ಸಾಮಾನ್ಯ ಕಾರ್ಯಕರ್ತ ಅಥವಾ ಎಷ್ಟೇ ದೊಡ್ಡ ನಾಯಕರಾದ್ರೂ ಮಾಡಬಾರದು ಅದು ನಿಯಮ. ಯತ್ನಾಳ್ ಆ ನಿಯಮ ಉಲ್ಲಂಘನೆ ಮಾಡಿದ್ದು, ಪರಿಣಾಮವಾಗಿ ಉಚ್ಚಾಟನೆ ಆಗಿದೆ ಎಂದರು. ಕಾರ್ಯಕರ್ತರು ಇದನ್ನು ಸಹಜ ಅಶಿಸ್ತಿನ ಪರಿಣಾಮ ಎಂದು ಪರಿಗಣಿಸಬೇಕು. ಸಹಜ ಪಕ್ರಿಯೆ ...
Read More »ರೌಡಿಶೀಟರ್ ಕಡೇಕಲ್ ಅಬೀದ್ ಕಾಲಿಗೆ ಪೊಲೀಸರ ಗುಂಡೇಟು- ಅರೆಸ್ಟ್
ಶಿವಮೊಗ್ಗ : ಶಿವಮೊಗ್ಗದ ಭದ್ರಾವತಿಯಲ್ಲಿ ಪೊಲೀಸರ ಗುಂಡಿನ ಸದ್ದು ಮತ್ತೊಮ್ಮೆ ಮೊಳಗಿದ್ದು, ರೌಡಿಶೀಟರ್ ಕಾಲಿಗೆ ಗುಂಡೇಟು ನೀಡಿ ಬಂಧಿಸಲಾಗಿದೆ. ಶಿವಮೊಗ್ಗದ ಕಡೇಕಲ್ ಅಬೀದ್ (32) ಬಂಧಿತ ಆರೋಪಿ. ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದ ರೌಡಿ ಶೀಟರ್ ಕಡೇಕಲ್ ಅಬೀದ್ ಕಾಲಿಗೆ ಭದ್ರಾವತಿಯಲ್ಲಿ ಗುಂಡು ಹಾರಿಸಲಾಗಿದೆ. ಕೊಲೆ ಯತ್ನ ಪ್ರಕರಣದಲ್ಲಿ ರೌಡಿ ಶೀಟರ್ ಕಡೇಕಲ್ ಅಬೀದ್ ತಲೆ ಮರೆಸಿಕೊಂಡಿದ್ದ. ಕಳೆದ ಒಂದು ತಿಂಗಳಿನಿಂದ ಈತನಿಗಾಗಿ ಪೊಲೀಸರು ಶೋಧಿಸುತ್ತಿದ್ದರು. ಇಂದು ಖಚಿತ ಮಾಹಿತಿ ಹಿನ್ನೆಲೆ ಪೇಪರ್ ಟೌನ್ ಇನ್ಸ್‌ಪೆಕ್ಟರ್ ...
Read More »ನೀರಿನ ಸಂಪ್ ನಲ್ಲಿ 63 ನೀರು ಹಾವಿನ ಮರಿಗಳು ಪತ್ತೆ
ಶಿವಮೊಗ್ಗ: ಕಾಶೀಪುರ ಬಡಾವಣೆಯ ಮನೆಯೊಂದರ ನೀರಿನ ತೊಟ್ಟಿಯಲ್ಲಿ ಬರೋಬ್ಬರಿ 63 ನೀರು ಹಾವಿನ( ವಾಟರ್ ಸ್ನೇಕ್) ಮರಿಗಳು ಪತ್ತೆಯಾಗಿವೆ. ಉರಗ ತಜ್ಞ ಶಿವಮೊಗ್ಗದ ಸ್ನೇಕ್ ಕಿರಣ್ ಎರಡು ದಿನಗಳ ಕಾಲ ಕಾರ್ಯಚರಣೆ ನಡೆಸಿ, ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ. ಕಾಶೀಪುರ ಬಡಾವಣೆಯ ಪಶುವೈದ್ಯಕೀಯ ಕಾಲೇಜು ರಸ್ತೆಯ ಎಸ್.ಈಶ್ವರಯ್ಯ ಎಂಬುವರ ಮನೆಯ ನೀರಿನ ತೊಟ್ಟಿಯಲ್ಲಿ ಹಾವಿನ ಕೆಲವು ಮರಿಗಳು ಪತ್ತೆಯಾಗಿವೆ. ಇದನ್ನ ಗಮನಿಸಿದ ಮನೆಯವರು ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದರು. ಬಳಿಕ ಆಗಮಿಸಿರುವ ಕಿರಣ್ ಮತ್ತೊಮ್ಮೆ ನೀರಿನ ಸಂಪ್ ಗಮನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಾವಿನ ಮರಿಗಳು ...
Read More »ಶಿವಮೊಗ್ಗ ಡಿಎಆರ್ ಡಿವೈಎಸ್ಪಿ ಕೃಷ್ಣಮೂರ್ತಿ ಲೋಕಾ ಬಲೆಗೆ
ಶಿವಮೊಗ್ಗ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಡಿವೈಎಸ್ಪಿ ಕೃಷ್ಣಮೂರ್ತಿ ಇಂದು ಲೋಕಾ ಬಲೆಗೆ ಬಿದ್ದಿದ್ದಾರೆ. ಡಿಎಆರ್ ಸಿಬ್ಬಂದಿಯೋಬ್ಬರು ನೀಡಿದ ದೂರಿನ ಮೇರೆಗೆ 5 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಡಿಎಆರ್ ನಲ್ಲಿ ಸಿಬ್ಬಂದಿಗೆ ಕರ್ತವ್ಯ ನಿಯೋಜನೆ ಸಂಬಂಧ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಎಆರ್ ನ ಎಹೆಚ್ಸಿಯೊಬ್ಬರು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಅದರಂತೆ ಇಂದು ಡಿಎಆರ್ ಡಿವೈಎಸ್ಪಿ ಕೃಷ್ಣಮೂರ್ತಿ ತಮ್ಮ ಮನೆಯಲ್ಲಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ...
Read More »
C News TV Kannada News Online in cnewstv