ಯತ್ನಾಳ್ ಉಚ್ಚಾಟನೆ – ತಡವಾದ್ರೂ ಸರಿಯಾದ ಕ್ರಮ ಎಂದ ಶಾಸಕ ಚೆನ್ನಿ

ಶಿವಮೊಗ್ಗ: ಬಿಜೆಪಿ ಎಂದಿಗೂ ಅಶಿಸ್ತನ್ನ ಸಹಿಸೋದಿಲ್ಲ. ಕ್ರಮ ತಡವಾಗಬಹುದು. ಆದರೆ, ಕ್ರಮದಲ್ಲಿ ವ್ಯತ್ಯಾಸ ಎಂದು ಆಗಲ್ಲ ಎಂದು ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಶಿಸ್ತಿನ ವರ್ತನೆಯನ್ನ ಯಾವುದೇ ಒಬ್ಬ ಸಾಮಾನ್ಯ ಕಾರ್ಯಕರ್ತ ಅಥವಾ ಎಷ್ಟೇ ದೊಡ್ಡ ನಾಯಕರಾದ್ರೂ ಮಾಡಬಾರದು ಅದು ನಿಯಮ. ಯತ್ನಾಳ್ ಆ ನಿಯಮ ಉಲ್ಲಂಘನೆ ಮಾಡಿದ್ದು, ಪರಿಣಾಮವಾಗಿ ಉಚ್ಚಾಟನೆ ಆಗಿದೆ ಎಂದರು.
ಕಾರ್ಯಕರ್ತರು ಇದನ್ನು ಸಹಜ ಅಶಿಸ್ತಿನ ಪರಿಣಾಮ ಎಂದು ಪರಿಗಣಿಸಬೇಕು. ಸಹಜ ಪಕ್ರಿಯೆ ನಡೆದಿದೆ. ಇದೇನು ವಿಶೇಷ ಎಂದಿನಿಸುವುದಿಲ್ಲ. ಪಕ್ಷದಲ್ಲಿ ಹಿರಿಯರಿರಲಿ, ಕಿರಿಯರಿರಲಿ ಶಿಸ್ತು ಎಲ್ಲರಿಗೂ ಒಂದೇನೇ,. ಪಕ್ಷದ ವಿರುದ್ದ ಕಸಿವಿಸಿ ಮಾಡಿದಾಗ ಕಾರ್ಯಕರ್ತರ ಮನಸ್ಸಿನ ಮೇಲೆ ಪರಿಣಾಮ ಬಿರುತ್ತೆ. ದೊಡ್ಡ ನಾಯಕರೇ ಪಕ್ಷಕ್ಕೆ ಹಾನಿಯಾಗುವಂತೆ ಮಾಡಿದಾಗ ಪಕ್ಷ ಸಹಜವಾಗಿ ಪ್ರತಿಕ್ರಿಯೆ ಮಾಡಿದೆ ಎಂದು ಕ್ರಮವನ್ನ ಸಮರ್ಥಿಸಿಕೊಂಡಿದ್ದಾರೆ.
ಯಾರೇ ಅಶಿಸ್ತಿನಿಂದ ವರ್ತಿಸಿದರು ಪಕ್ಷದಿಂದ ಉಚ್ಚಾಟನೆ ಮಾಡೋದು ಸಹಜ. ಪಾರ್ಟಿಯಲ್ಲಿ ಶಿಸ್ತು ಮುಖ್ಯ. ಜಿರೋ ಯಿಂದ ಕಟ್ಟಿದ ಪಕ್ಷ ಇದು.ಯಾವುದೇ ಸಂದರ್ಭ ಇದ್ದರೂ ನಾಲ್ಕು ಗೋಡೆ ಮಧ್ಯೆ ಮಾತಾಡಬೇಕು. ಈ ರೀತಿಯ ಸಂದರ್ಭದಲ್ಲಿ ಪಕ್ಷದ ಶಿಸ್ತು ಏನು ಎಂಬುವುದು ಯಾರು ಅರಿತಿರಲ್ವೋ ಅವರು ಪ್ರತಿಭಟಿಸುತ್ತಾರೆ. ಯಾವುದೇ ಕಾರ್ಯಕರ್ತರು ಎದೆಯೊಡೆದುಕೊಳ್ಳದೆ ಪಕ್ಷ ಸಂಘಟಿಸೋಣ. ಕಾರ್ಯಕರ್ತರ ಆಧಾರಿತ ಪಕ್ಷ ನಮ್ಮದು ನಾಯಕರ ಆಧಾರಿತ ಪಕ್ಷ ಅಲ್ಲ. ತಡವಾದರೂ ಅಡವಾಗಿಯೇ ಆಗಿದೆ ನೋ ಪ್ರಾಬ್ಲಂ. ವ್ಯಕ್ತಿಗತವಾಗಿ ನಾವು ಎಂದು ಯೋಚನೆ ಮಾಡಲ್ಲ. ಸಿದ್ದಾಂತಕ್ಕೆ ಕೆಲಸ ಮಾಡುತ್ತೇವೆ. ಯಾರನ್ನು ಕಳೆದುಕೊಳ್ಳಬೇಕು ಅಂತ ಯಾರು ಅಂದುಕೊಳ್ಳಲ್ಲ ಪಕ್ಷಕ್ಕೆ ಶಿಸ್ತು ಮುಖ್ಯ ಎಂದು ಚನ್ನಬಸಪ್ಪ ಹೇಳಿದ್ದಾರೆ.

Leave a Reply

Your email address will not be published. Required fields are marked *

*