ಶಿವಮೊಗ್ಗ: ಕಾಶೀಪುರ ಬಡಾವಣೆಯ ಮನೆಯೊಂದರ ನೀರಿನ ತೊಟ್ಟಿಯಲ್ಲಿ ಬರೋಬ್ಬರಿ 63 ನೀರು ಹಾವಿನ( ವಾಟರ್ ಸ್ನೇಕ್) ಮರಿಗಳು ಪತ್ತೆಯಾಗಿವೆ.
ಉರಗ ತಜ್ಞ ಶಿವಮೊಗ್ಗದ ಸ್ನೇಕ್ ಕಿರಣ್ ಎರಡು ದಿನಗಳ ಕಾಲ ಕಾರ್ಯಚರಣೆ ನಡೆಸಿ, ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ.
ಕಾಶೀಪುರ ಬಡಾವಣೆಯ ಪಶುವೈದ್ಯಕೀಯ ಕಾಲೇಜು ರಸ್ತೆಯ ಎಸ್.ಈಶ್ವರಯ್ಯ ಎಂಬುವರ ಮನೆಯ ನೀರಿನ ತೊಟ್ಟಿಯಲ್ಲಿ ಹಾವಿನ ಕೆಲವು ಮರಿಗಳು ಪತ್ತೆಯಾಗಿವೆ. ಇದನ್ನ ಗಮನಿಸಿದ ಮನೆಯವರು ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದರು. ಬಳಿಕ ಆಗಮಿಸಿರುವ ಕಿರಣ್ ಮತ್ತೊಮ್ಮೆ ನೀರಿನ ಸಂಪ್ ಗಮನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಾವಿನ ಮರಿಗಳು ಇರುವುದು ತಿಳಿದುಬಂದಿದೆ. ಬಳಿಕ ಎರಡು ದಿನಗಳ ಕಾಲ ಸಂರಕ್ಷಣೆ ಕೆಲಸ ಮಾಡಿರುವ ಕಿರಣ್ 63 ಹಾವಿನ ಮರಿಗಳನ್ನು ಹಿಡಿದು, ರಕ್ಷಿಸಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ನೇಕ್ ಕಿರಣ್, ಏಕಕಾಲಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದ ಹಾವಿನ ಮರಿ ರಕ್ಷಿಸಿದ್ದು, ಇದೇ ಮೊದಲು ಎಂದು ಹೇಳಿದ್ದಾರೆ.
