ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪಕ್ಷದವರಿಗೆ ಖಡಕ್ ವಾರ್ನಿಂಗ್ *ನೀತಿ ಸಂಹಿತೆ ಅನ್ವಯ ಹೊಸದಾಗಿ ಯಾವುದೇ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಮಾಡುವಂತಿಲ್ಲ. *ಯಾವುದೇ ಯೋಜನೆಗಳ ಫಲಾನುಭವಿಗಳ ಆಯ್ಕೆ ಅಥವಾ ಸೌಲಭ್ಯಗಳ ವಿತರಣೆ ಮಾಡುವಂತಿಲ್ಲ. *ಎಲ್ಲಾ ರಾಜಕೀಯ ಜಾಹೀರಾತು ಫಲಕಗಳನ್ನು 24ಗಂಟೆಗಳ ಒಳಗಾಗಿ ತೆರವುಗೊಳಿಸಬೇಕು. * ನೀತಿ ಸಂಹಿತೆಯನ್ನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಹ ...
Read More »ಶಿವಮೊಗ್ಗ
ಮಂಗನ ಕಾಯಿಲೆ ಪೀಡಿತರನ್ನು ಭೇಟಿ ಮಾಡಿದ ಹರತಾಳು ಹಾಲಪ್ಪ.
ಮಲೆನಾಡು ಜನರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ತಾಲೂಕಿನ ಅರಲಗೋಡು ಗ್ರಾಪಂ ವ್ಯಾಪ್ತಿಯ 23 ಕ್ಕೂ ಹೆಚ್ಚು ರೋಗ ಪೀಡಿತರು ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂದು ಇವರನ್ನು ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಭೇಟಿ ಮಾಡಿದರು. ಹಾಗು ವೈದ್ಯರಿಂದ ಇವರ ಆರೋಗ್ಯ ಮಾಹಿತಿಯನ್ನು ಪಡೆದುಕೊಂಡರು..
Read More »ಎಸಿಬಿ ಬಲೆಗೆ ಬಿದ್ದ ಪಿಡಿಒ.
ವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮಪಂಚಾಯತ್ ಪಿಡಿಒ ಶಾರದಾ ಬಾಯಿ ಮ್ಯಾಗಿನ ಮನಿ ಅಂಬೇಡ್ಕರ್ ಅವಾಸ್ ಯೋಜನೆಯ ಮನೆ ನಿರ್ಮಾಣಕ್ಕೆ ಹಣದ ಅಮಿಷ ಒಡ್ಡಿದ್ದರು. ೨ ನೇ ಹಂತದ ಬಿಲ್ ಪಾಸ್ ಮಾಡಲು ೫ ಸಾವಿರ ಹಣಕ್ಕೆ ಬೇಡಿಕೆಯನ್ನು ಸೇವಾಲಾಲ್ ನಗರ ನಿವಾಸಿ ಚಂದ್ರ ನಾಯ್ಕ್ ಎಂಬುವವರಿಗೆ ನೀಡಿದ್ದರು. ಇಂದು ೨ ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿ ವೇಣುಗೋಪಾಲ ನೇತೃತ್ವದಲ್ಲಿ ದಾಳಿ ನಡೆಸಿದ್ದಾಗ ಸಿಕ್ಕಿಬಿದ್ದಿದ್ದಾರೆ.
Read More »ಜೆಡಿಎಸ್ ಕಾರ್ಯಕರ್ತರ ನಡವಳಿಕೆಗೆ ಧಿಕ್ಕಾರ – ಬಿಜೆಪಿ
ಹಾಸನದ ಶಾಸಕ ಪ್ರೀತಂಗೌಡರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿರುವ ಕೃತ್ಯ ಸರಿಯಲ್ಲ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಗೂಂಡಾ ಪ್ರವೃತ್ತಿಯನ್ನು ನಡೆಸುತ್ತಿದ್ದಾರೆ, ಇದನ್ನು ಖಂಡಿಸಿ ಇಂದು ಬಿಜೆಪಿ ಕಾರ್ಯಕರ್ತರು ಶಿವಪ್ಪ ನಾಯಕ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ. ದತ್ತಾತ್ರಿ, ಡಿ ಎಸ್ ಅರುಣ್, ಹಿರಣ್ಣಯ್ಯ ಮಾಹನಗರಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Read More »ನ್ಯಾಯಾಧೀಶರ ಕಾರನ್ನೇ ಲಾಕ್ ಮಾಡಿದ ಶಿವಮೊಗ್ಗ ಸಂಚಾರ ಪೊಲೀಸರು
ನೋಪಾರ್ಕಿಂಗ್ ನಲ್ಲಿ ನಿಂತಿದ್ದ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಕಾರಿನ ಟೈರ್ ಗೆ ಸಂಚಾರ ಪೊಲೀಸರು ಲಾಕ್ ಮಾಡಿದ್ದಾರೆ. ಶಿವಮೊಗ್ಗದ ಗೋಪಿ ವೃತ್ತದ ಸಾಗರ್ ಹ್ಯಾಂಡಿಕ್ರಾಪ್ಟ್ ಎದುರಿನ ನೋ ಪಾರ್ಕಿಂಗ್ ಜಾಗದಲ್ಲಿ ನ್ಯಾಯಾಧೀಶರ ಕಾರನ್ನು ನಿಲ್ಲಿಸಲಾಗಿತ್ತು. ಜನಸಂದಣಿ ಇರುವ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ನ್ಯಾಯಾಧೀಶರ ಕಾರನ್ನು ಲಾಕ್ ಮಾಡುವ ಮೂಲಕ ಸಂಚಾರ ಪೊಲೀಸರು ತಮ್ಮ ಕರ್ತವ್ಯ ಮೆರೆದಿದ್ದಾರೆ. ಸಂಚಾರ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
Read More »ಆಡಿಯೋ ಹಗರಣ ಕುರಿತು ತನಿಖೆ ನಡೆಸಬೇಕು- ಯುವ ಕಾಂಗ್ರೆಸ್
ಯಡಿಯೂಪ್ಪ ಅವರ ಆಡಿಯೋ ಟೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯಿಂದ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಯಿತು. ವಿಧಾನಸಭಾಧ್ಯಕ್ಷರನ್ನೇ ಬುಕ್ ಮಾಡಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ಶಾಸಕರಿಗೆ ಹತ್ತು ಕೋಟಿ ರೂಪಾಯಿ ಆಮಿಷ ಒಡ್ಡುತ್ತಿರುವ ಆಡಿಯೋ ಮತ್ತು ನ್ಯಾಯಾಧೀಶರನ್ನೇ ಬುಕ್ ಮಾಡಿದ್ದೇವೆ ಎನ್ನುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಬಿಜೆಪಿ ಹೊರಟಿದೆ. ಕಳೆದ ಆರು ತಿಂಗಳಿನಿಂದ ರಾಜ್ಯ ಸರ್ಕಾರವನ್ನು ಬೀಳಿಸಲು ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ವಾಮಮಾರ್ಗದಲ್ಲಿ ...
Read More »ಮಂಗನ ಕಾಯಿಲೆಗೆ ಮತ್ತೊಂದು ಬಲಿ.
ಮಂಗನ ಕಾಯಿಲೆ ಯಿಂದ ತತ್ತರಿಸಿದ ಸಾಗರದ ಅರಳಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯ ವಾಟಮಕ್ಕಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಕೃಷ್ಣಪ್ಪ, ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
Read More »ಮಂಗನ ಕಾಯಿಲೆ ನಿಯಂತ್ರಣಕ್ಕೆ ಹೊಸ ಜೆಲ್ ಆವಿಷ್ಕಾರ…
ಮಲೆನಾಡಿನ ಜನರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆಗೆ DMP ಆಯಿಲ್ ಬದಲಾಗಿ, ಆಯುರ್ವೇದಿಕ್ ಜೆಲ್ ನ ಶಿವಮೊಗ್ಗದ ನಿವೇದನ್ ನಿಂಪೆ ಆವಿಷ್ಕರಿಸಿದ್ದಾರೆ..
Read More »ಮಲೆನಾಡಿನಲ್ಲಿ ಕಂಪಿಸಿದ ಭೂಮಿ.
ಸದಾ ಹಚ್ಚ ಹಸಿರಿನ ನಡುವೆ ನೆಮ್ಮದಿಯಾಗಿ ಇರುತ್ತಿದ್ದ ಸಹ್ಯಾದ್ರಿ ಪರ್ವತದ ಜನರರು ಇಂದು ಭೂಮಿ ಕಂಪಿಸಿದ್ದರಿಂದ ಭಯಬೀತ ಗೊಂಡಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ , ಆಗುಂಬೆ ಸುತ್ತಮುತ್ತಲು ಗ್ರಾಮಗಳಾದ ಮೇಗರವಳ್ಳಿ, ಹನಸ, ಕರುಣಾಪುರ, ಗಾಡ್ರಗದ್ದೆ, ಶುಂಠಿ ಹಲ್ಲು, ಯಡೂರು, ಹೊಸನಗರ ಭಾಗದ ವರಾಹಿ ಯೋಜನಾ ಪ್ರದೇಶ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮಧ್ಯರಾತ್ರಿ ಒಂದುವರೆ ಗಂಟೆ ಸಮಯದಲ್ಲಿ ಮನೆಯ ಪಾತ್ರೆ ಪಗಡಗಳೆಲ್ಲಾ ಅಲ್ಲಾಡಿದ ಅನುಭವವಾಗಿದ್ದು, ಭಾರಿ ಶಬ್ದ ಸಹಿತ, 30 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ. ಭಯಭೀತರಾಗಿ ಜನರು ಮನೆಯಿಂದ ...
Read More »ಸೈನಿಕರಿಗೊಂದು ಸಲಾಂ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಯುವಕರ ಪಡೆಯೊಂದು ತನ್ನ ದೇಶಾಭಿಮಾನವನ್ನು ದಿಲ್ ಹೈ ಇಂಡಿಯಾ ಎಂಬ ಗೀತೆಯ ಮೂಲಕ ಪ್ರಸ್ತುತಪಡಿಸಿದೆ. ಶಿಕಾರಿಪುರ ತಾಲೂಕಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಗಳನ್ನ ನೀಡುವುದರ ಮೂಲಕ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಗೀತೆಯು ಪ್ರೇಮ್ ಸಾಯಿ ಅವರ ಕಂಠದಲ್ಲಿ ಮೂಡಿಬಂದಿದೆ. ಎಲ್ಲಾ ದೇಶ ಅಭಿಮಾನಿಗಳಿಗಾಗಿ ಈ ಹಾಡನ್ನ ಅರ್ಪಿಸುವುದಾಗಿ ತಂಡದವರು ಸಂತಸದಿಂದ ತಿಳಿಸಿದ್ದಾರೆ.
Read More »
C News TV Kannada News Online in cnewstv