ಸದಾ ಹಚ್ಚ ಹಸಿರಿನ ನಡುವೆ ನೆಮ್ಮದಿಯಾಗಿ ಇರುತ್ತಿದ್ದ
ಸಹ್ಯಾದ್ರಿ ಪರ್ವತದ ಜನರರು ಇಂದು ಭೂಮಿ ಕಂಪಿಸಿದ್ದರಿಂದ ಭಯಬೀತ ಗೊಂಡಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ , ಆಗುಂಬೆ ಸುತ್ತಮುತ್ತಲು ಗ್ರಾಮಗಳಾದ ಮೇಗರವಳ್ಳಿ, ಹನಸ, ಕರುಣಾಪುರ, ಗಾಡ್ರಗದ್ದೆ, ಶುಂಠಿ ಹಲ್ಲು, ಯಡೂರು, ಹೊಸನಗರ ಭಾಗದ ವರಾಹಿ ಯೋಜನಾ ಪ್ರದೇಶ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಮಧ್ಯರಾತ್ರಿ ಒಂದುವರೆ ಗಂಟೆ ಸಮಯದಲ್ಲಿ ಮನೆಯ ಪಾತ್ರೆ ಪಗಡಗಳೆಲ್ಲಾ ಅಲ್ಲಾಡಿದ ಅನುಭವವಾಗಿದ್ದು, ಭಾರಿ ಶಬ್ದ ಸಹಿತ, 30 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ. ಭಯಭೀತರಾಗಿ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

C News TV Kannada News Online in cnewstv