ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಪಕ್ಷದವರಿಗೆ ಖಡಕ್ ವಾರ್ನಿಂಗ್
*ನೀತಿ ಸಂಹಿತೆ ಅನ್ವಯ ಹೊಸದಾಗಿ ಯಾವುದೇ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಮಾಡುವಂತಿಲ್ಲ.
*ಯಾವುದೇ ಯೋಜನೆಗಳ ಫಲಾನುಭವಿಗಳ ಆಯ್ಕೆ ಅಥವಾ ಸೌಲಭ್ಯಗಳ ವಿತರಣೆ ಮಾಡುವಂತಿಲ್ಲ.
*ಎಲ್ಲಾ ರಾಜಕೀಯ ಜಾಹೀರಾತು ಫಲಕಗಳನ್ನು 24ಗಂಟೆಗಳ ಒಳಗಾಗಿ ತೆರವುಗೊಳಿಸಬೇಕು.
* ನೀತಿ ಸಂಹಿತೆಯನ್ನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಹ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಮತದಾರರು: ಜಿಲ್ಲೆಯಲ್ಲಿ ಈ ವರ್ಷದ ಜನವರಿ 1ಕ್ಕೆ ಅನ್ವಯಿಸಿ ಒಟ್ಟು 16,47,527 ಮತದಾರರು ಇದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ 10ದಿನಗಳ ಒಳಗಾಗಿ ಹೊಸದಾಗಿ ಮತದಾರರು ತಮ್ಮ ಹೆಸರು ನೋಂದಣಿಗೆ ಅವಕಾಶವಿದೆ. ಜಿಲ್ಲೆಯಲ್ಲಿ 2593 ಬ್ಯಾಲೆಟ್ ಯುನಿಟ್‍ಗಳು ಹಾಗೂ 2059 ಕಂಟ್ರೋಲ್ ಯುನಿಟ್ ಹಾಗೂ 2369 ವಿವಿಪ್ಯಾಟ್ ಲಭ್ಯವಿದೆ ಎಂದು ಹೇಳಿದರು.
Recent Comments