ಶಿವಮೊಗ್ಗ : ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದಾಗಿ ಜಲಾಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಭದ್ರಾ ಜಲಾಶಯ ಈಗಾಗಲೇ ಭರ್ತಿಯಾಗಿರುವುದರಿಂದಾಗಿ ಹರಿದು ಬರುತ್ತಿರುವ ನೀರನ್ನು ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಭದ್ರಾವತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಪ್ರಸ್ತುತ ಭದ್ರಾ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, 50 ಸಾವಿರ ಕ್ಯೂಸೆಕ್ ನೀರನ್ನೂ ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಭದ್ರಾವತಿಯಲ್ಲಿರುವ ಭದ್ರಾ ಸೇತುವೆ ನೀರಿನಲ್ಲಿ ಮುಳುಗಿದ್ದು, ಈ ಸೇತುವೆಯ ಮೇಲೆ ವಾಹನ ಹಾಗೂ ಜನ ...
Read More »ಶಿವಮೊಗ್ಗ
ಈ ಬಾರಿ ಅತ್ಯಂತ ಸರಳವಾಗಿ ದಸರ ಆಚರಣೆ: ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಕರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ದಸರಾ ಹಬ್ಬವನ್ನು ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಕರೋನಾ ಎಲ್ಲೆಡೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ನಾವು ಈಗಾಗಲೇ ಹಲವಾರು ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ಜನರನ್ನು ಸೇರಿರಿ ಕರೋನಾ ಹರಡಲು ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಬಾರದು. ಈ ಹಿನ್ನೆಲೆಯಲ್ಲಿ ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ತೀರ್ಮಾನಿಸಿರುವಂತೆ ಅತ್ಯಂತ ಸರಳವಾಗಿ ದಸರಾ ಆಚರಿಸಲಾಗುವುದು ಎಂದು ಹೇಳಿದರು. ಮುಜರಾಯಿ ದೇವಾಲಯಗಳಿಗೆ ಮಾತ್ರ ಅವಕಾಶ: ಚಂದ್ರಶೇಖರ ಆಜಾದ್ ...
Read More »ಮರಕ್ಕೆ ಕಾರ್ ಡಿಕ್ಕಿ ಸ್ಥಳದಲ್ಲೇ ಓರ್ವನ ಸಾವು.
ಶಿವಮೊಗ್ಗ : ಶಿವಮೊಗ್ಗ ದಿಂದ N R ಪುರಕ್ಕೆ ತೆರಳುತ್ತಿದ್ದ ಸೆಲೆರಿಯೋ ಕಾರು ಕಾಚಿನಕಟ್ಟೆಯ ಬಳಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರಲ್ಲಿ ಒಬ್ಬ ಸಾವನ್ನಪ್ಪಿದ್ದಾರೆ. ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರನ್ನ ಕಟ್ ಮಾಡುವ ಮೂಲಕ ಕಾರಿನಲ್ಲಿದ್ದ ಜನರನ್ನು ಹೊರಗೆ ತೆಗೆಯಲಾಯಿತು. ಇವರನ್ನೆಲ್ಲ ಎನ್ಆರ್ ಪುರ ನಿವಾಸಿಗಳು ಎಂದು ಹೇಳಲಾಗಿದೆ. ಆದರೆ ಯಾವುದೇ ನಿಖರವಾದ ಮಾಹಿತಿಗಳು ದೊರೆತಿಲ್ಲ. ತುಂಗಾ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಲಂಚ ಸ್ವೀಕರಿಸುವಾಗ ಗ್ರಾಮ ಪಂಚಾಯತ್ ಕಾರ್ಯದರ್ಶಿ ಎಸಿಬಿ ಬಲೆಗೆ.
ಶಿಕಾರಿಪುರ : ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಮದ ಪಂಚಾಯತ್ ನ ಕಾರ್ಯದರ್ಶಿ ಶಿವಪ್ಪ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದಿದ್ದಾರೆ. ಇಂದು ಮಾಧ್ಯಹ್ನ ಗ್ರಾಮ ಪಂಚಾಯತಿ ಕಛೇರಿಯಲ್ಲಿ NREG ಕೆಲಸದ 2,10,000 ಹಣವನ್ನು ಬಿಡುಗಡೆ ಮಾಡುವ ವಿಚಾರವಾಗಿ ಮಂಜುನಾಥ ಎಂಬುವರ ಬಳಿ 8,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣವನ್ನು ಸ್ವೀಕರಿಸುತ್ತಿರುವಾಗ ನೇರವಾಗಿ ಎಸಿಬಿ ಡಿವೈಎಸ್ ಪಿ ಲೋಕೇಶ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Read More »ಆತ್ಮಹತ್ಯೆಗೆ ಮುಂದಾಗಿದ್ದವನ ಮನವೊಲಿಸಿ ರಕ್ಷಿಸಿದ ಪಿಎಸ್ಐ ತಿರುಮಲೇಶ್.
ಶಿವಮೊಗ್ಗ : ಕಟ್ಟಡದ ನಿರ್ಮಾಣದ ಬಿಲ್ ಸೆಟ್ಲ್ ಮಾಡದೆ 9 ತಿಂಗಳವರೆಗೆ ಸತಾಯಿಸುತ್ತಿದ್ದ ಗುತ್ತಿಗೆದಾರನಿಂದ ಬೇಸತ್ತ ಉಪಗುತ್ತಿಗೆದಾರನೋರ್ವನು ಆತ್ಮಹತ್ಯೆಗೆ ಮುಂದಾಗಿದ್ದಾ ಘಟನೆ ಗಾಡಿಕೊಪ್ಪದಲ್ಲಿ ನಡೆದ್ದಿದೆ. ಗಾಡಿಕೊಪ್ಪದ ಅಪಾರ್ಟ್ ಮೆಂಟ್ ವೊಂದರ ನಿರ್ಮಾಣದ ಗುತ್ತಿಗೆ ಹಿಡಿದ ಗಣೇಶ್ ಎಂಬಾತ ಗೌತಮ್ ಎಂಬ ಉಪ ಗುತ್ತಿಗೆದಾರನಿಗೆ 21 ಲಕ್ಷ ರೂ ಹಣ ನೀಡದೆ ಕಳೆದ ಒಂಬತ್ತು ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದನು. ಈ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ವಿಚಾರ ತಿಳಿದ ಸ್ಥಳೀಯರು ತುಂಗಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪಿಎಸ್ಐ ...
Read More »ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕರೋನಾ ಸೋಂಕು
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕರೋನಾ ಬಿಸಿ ತಟ್ಟಿದೆ. ನಿನ್ನೆ ಕರೋನಾ ತಪಾಸಣೆಗೆ ಈಶ್ವರಪ್ಪ ಒಳಗಾಗಿದ್ದರು. ಈ ತಪಾಸಣೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರಿಗೆ ಕರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಈಶ್ವರಪ್ಪ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಶ್ವರಪ್ಪ ಅವರ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೊಬ್ಬರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಈಶ್ವರಪ್ಪ ಹಾಗೂ ಅವರ ಕುಟುಂಬದವರು ಕರೋನಾ ಟೆಸ್ಟ್ ಗೆ ಒಳಗಾಗಿದ್ದರು. ಈಶ್ವರಪ್ಪ ಅವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಕರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಈಶ್ವರಪ್ಪ ...
Read More »ಜೋಗ್ ಫಾಲ್ಸ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಣೆ. Exclusive video.
ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಜೋಗ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರು ಇಂದಿರಾನಗರದ ಚೇತನ್ ಕುಮಾರ್ ಎಂಬಾತ ಅಪಾಯದ ಸ್ಥಳವಾಗಿರುವ ರಾಣಿ ಫಾಲ್ಸ್ ಮೇಲೆ ಹೋಗಿ ಕುಳಿತಿದ್ದ. ವಿಷಯ ತಿಳಿದ ಪೊಲೀಸರು ಮೂರು ಗಂಟೆಗಳ ಕಾಲ ಚೇತನ್ ಕುಮಾರ್ ಮೇಲೆ ನಿಗಾ ಇರಿಸಿ ಸಾಗರದಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಜೋಗಕ್ಕೆ ಬಂದ ಬಳಿಕ ಚೇತನ್ ಕುಮಾರ್ ನನ್ನು ರಕ್ಷಿಸಿ ಕರೆದುಕೊಂಡು ಬಂದಿದ್ದಾರೆ. ಈ ಸಂಬಂಧವಾಗಿ ಜೋಗ ಪೊಲೀಸ್ ಠಾಣೆಯಲ್ಲಿ ...
Read More »ಕೋವಿಡ್ 19 : ಖಾಸಗಿ ಆಸ್ಪತ್ರೆಗಳಲ್ಲಿಶೇ.50ರಷ್ಟು ಬೆಡ್‍ಗಳನ್ನು ಸರ್ಕಾರಿ ಕೋಟಾದಡಿ ಒದಗಿಸಲು ಸೂಚನೆ.
ಶಿವಮೊಗ್ಗ : ಖಾಸಗಿ ಆಸ್ಪತ್ರೆಗಳಲ್ಲಿ ಕರೋನಾ ರೋಗಿಗಳನ್ನು ದಾಖಲಿಸಿ ಯಾವುದೇ ಕುಂದುಕೊರತೆಯಾಗದಂತೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು. ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಮಾತನಾಡಿದರು. ಪ್ರಸ್ತುತ ಸುಬ್ಬಯ್ಯ ಮೆಡಿಕಲ್ ಕಾಲೇಜು, ನಾರಾಯಣ ಹೃದಯಾಲಯ, ಮ್ಯಾಕ್ಸ್ ಮತ್ತು ನಂಜಪ್ಪ ಆಸ್ಪತ್ರೆಗಳಲ್ಲಿ ಕರೋನಾ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸುಮಾರು 600ಬೆಡ್‍ಗಳಿವೆ. ಇವುಗಳ ಪೈಕಿ ಶೇ.50ರಷ್ಟು ಬೆಡ್‍ಗಳನ್ನು ಸರ್ಕಾರಿ ಕೋಟಾದಡಿ ಒದಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ...
Read More »ತೀರ್ಥಹಳ್ಳಿ ನ್ಯಾಯಾಲಯಕ್ಕೆ ನಕ್ಸಲ್ ಶೋಭಾಳನ್ನು ಹಾಜರುಪಡಿಸಿದ ಪೊಲೀಸರು
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಬರ್ಕಣ ಫಾಲ್ಸ್ ಬಳಿ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಇಂದು ನಕ್ಸಲ್ ಶೋಭಾಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2012ರಲ್ಲಿ ನಡೆದ ಫೈರಿಂಗ್ ನ ನಕ್ಸಲ್ ತಂಡಲ್ಲಿ ಶೋಭಾ ಸಹ ಇದ್ದಳು ಎನ್ನಲಾಗಿದ್ದು, ಈಕೆಯ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಕಳೆದ 11 ವರ್ಷಗಳಿಂದ ಸಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಶೋಭಾ ವಿರುದ್ಧ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 6 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೂಲತಹ ಹೊಸನಗರ ತಾಲೂಕು ಮೇಲುಸಂಕದವಳಾದ ಶೋಭಾ 2012ರಿಂದಲೂ ತಲೆಮರೆಸಿಕೊಂಡಿದ್ದಳು. ...
Read More »ಸರಳವಾಗಿ ನಡೆದ ಗೌರಿ ಹಬ್ಬದ ಆಚರಣೆ
ಶಿವಮೊಗ್ಗ: ಗೌರಿ ಹಬ್ಬ ಬಂತು ಎಂದರೆ ಸಾಕು ಪ್ರತಿವರ್ಷ ಮಲೆನಾಡಿನಲ್ಲಿ ಸಂಭ್ರಮ ಇಮ್ಮಡಿಗೊಳ್ಳುತ್ತಿತ್ತು. ಆದರೆ ಈ ಬಾರಿ ಕರೋನಾ ಕರಿನೆರಳು ಗೌರಿ ಹಬ್ಬದ ಮೇಲೆಯೂ ಬಿದ್ದಿದೆ. ಮಲೆನಾಡಿನಲ್ಲಿ ಅತಿ ವಿಜೃಂಭಣೆಯಿಂದ ನಡೆಯುತ್ತಿದ್ದ ಗೌರಿ ಹಬ್ಬ ಈ ವರ್ಷ ಸರಳವಾಗಿ ನಡೆದಿದೆ. ಪ್ರತಿ ವರ್ಷ ಗೌರಿ ಹಬ್ಬದಂದು ದೇವಾಲಯದಲ್ಲಿ ಪ್ರತಿಷ್ಟಾಪಿಸುವ ಗೌರಿಯನ್ನು ನೋಡಿಕೊಂಡು ವಿಶೇಷ ಪೂಜೆ ಸಲ್ಲಿಸಲು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಮುಗಿಬೀಳುತ್ತಿದ್ದರು. ಆದರೆ ಈ ಬಾರಿ ಕರೋನಾ ಹಿನ್ನೆಲೆಯಲ್ಲಿ ದೇವಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಇನ್ನು ಮನೆಯಲ್ಲೇ ಗೌರಿಯನ್ನು ಪ್ರತಿಷ್ಠಾಪಿಸಿ ಮಲೆನಾಡಿಗರು ಸರಳವಾಗಿ ಗೌರಿ ...
Read More »
C News TV Kannada News Online in cnewstv