Breaking News

ಲಂಚ ಸ್ವೀಕರಿಸುವಾಗ ಗ್ರಾಮ‌ ಪಂಚಾಯತ್ ಕಾರ್ಯದರ್ಶಿ ಎಸಿಬಿ‌ ಬಲೆಗೆ.

 

ಶಿಕಾರಿಪುರ : ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಮದ ಪಂಚಾಯತ್ ನ ಕಾರ್ಯದರ್ಶಿ ಶಿವಪ್ಪ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದಿದ್ದಾರೆ. ಇಂದು ಮಾಧ್ಯಹ್ನ ಗ್ರಾಮ ಪಂಚಾಯತಿ ಕಛೇರಿಯಲ್ಲಿ NREG ಕೆಲಸದ 2,10,000 ಹಣವನ್ನು ಬಿಡುಗಡೆ ಮಾಡುವ ವಿಚಾರವಾಗಿ ಮಂಜುನಾಥ ಎಂಬುವರ ಬಳಿ 8,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣವನ್ನು ಸ್ವೀಕರಿಸುತ್ತಿರುವಾಗ ನೇರವಾಗಿ ಎಸಿಬಿ ಡಿವೈಎಸ್ ಪಿ ಲೋಕೇಶ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

*