ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಬರ್ಕಣ ಫಾಲ್ಸ್ ಬಳಿ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಇಂದು ನಕ್ಸಲ್ ಶೋಭಾಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2012ರಲ್ಲಿ ನಡೆದ ಫೈರಿಂಗ್ ನ ನಕ್ಸಲ್ ತಂಡಲ್ಲಿ ಶೋಭಾ ಸಹ ಇದ್ದಳು ಎನ್ನಲಾಗಿದ್ದು, ಈಕೆಯ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಕಳೆದ 11 ವರ್ಷಗಳಿಂದ ಸಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಶೋಭಾ ವಿರುದ್ಧ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 6 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೂಲತಹ ಹೊಸನಗರ ತಾಲೂಕು ಮೇಲುಸಂಕದವಳಾದ ಶೋಭಾ 2012ರಿಂದಲೂ ತಲೆಮರೆಸಿಕೊಂಡಿದ್ದಳು. ಕಳೆದ ಮಾರ್ಚ್ ತಿಂಗಳಲ್ಲಿ ತಮಿಳುನಾಡು ಪೊಲೀಸರು ಶೋಭಾಳನ್ನು ಬಂಧಿಸಿ ಕೊಯಂಬತ್ತೂರು ಜೈಲಿಗೆ ಕಳುಹಿಸಿದ್ದರು. ಇಂದು ತೀರ್ಥಹಳ್ಳಿ ನ್ಯಾಯಾಲಯದಲ್ಲಿ ವಿಚಾರಣೆಯಿದ್ದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಪೊಲೀಸರು ಶೋಭಾಳನ್ನು ಹಾಜರುಪಡಿಸಿದರು.
C News TV Kannada News Online in cnewstv