ಶಿವಮೊಗ್ಗ: ಗೌರಿ ಹಬ್ಬ ಬಂತು ಎಂದರೆ ಸಾಕು ಪ್ರತಿವರ್ಷ ಮಲೆನಾಡಿನಲ್ಲಿ ಸಂಭ್ರಮ ಇಮ್ಮಡಿಗೊಳ್ಳುತ್ತಿತ್ತು. ಆದರೆ ಈ ಬಾರಿ ಕರೋನಾ ಕರಿನೆರಳು ಗೌರಿ ಹಬ್ಬದ ಮೇಲೆಯೂ ಬಿದ್ದಿದೆ. ಮಲೆನಾಡಿನಲ್ಲಿ ಅತಿ ವಿಜೃಂಭಣೆಯಿಂದ ನಡೆಯುತ್ತಿದ್ದ ಗೌರಿ ಹಬ್ಬ ಈ ವರ್ಷ ಸರಳವಾಗಿ ನಡೆದಿದೆ. ಪ್ರತಿ ವರ್ಷ ಗೌರಿ ಹಬ್ಬದಂದು ದೇವಾಲಯದಲ್ಲಿ ಪ್ರತಿಷ್ಟಾಪಿಸುವ ಗೌರಿಯನ್ನು ನೋಡಿಕೊಂಡು ವಿಶೇಷ ಪೂಜೆ ಸಲ್ಲಿಸಲು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಮುಗಿಬೀಳುತ್ತಿದ್ದರು. ಆದರೆ ಈ ಬಾರಿ ಕರೋನಾ ಹಿನ್ನೆಲೆಯಲ್ಲಿ ದೇವಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಇನ್ನು ಮನೆಯಲ್ಲೇ ಗೌರಿಯನ್ನು ಪ್ರತಿಷ್ಠಾಪಿಸಿ ಮಲೆನಾಡಿಗರು ಸರಳವಾಗಿ ಗೌರಿ ಹಬ್ಬ ಆಚರಿಸಿದರು.
C News TV Kannada News Online in cnewstv