ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಸುನಿತಾ ಅಣ್ಣಪ್ಪ ಮತ್ತು ರೇಖಾ ರಂಗನಾಥ ಅವರು ನಾಮಪತ್ರ ಸಲ್ಲಿಸಿದ್ದರು. ಸುನಿತಾ ಎಸ್ ಅವರ ಪರವಾಗಿ 25 ಹಾಗೂ ರೇಖಾ ಪರವಾಗಿ 11 ಮಂದಿ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಶಿವಮೊಗ್ಗ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಬಿಜೆಪಿ ಹೊಂದಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಶಂಕರ್ ಮತ್ತು ಆರ್.ಸಿ.ನಾಯ್ಕ್ ನಾಮಪತ್ರ ಸಲ್ಲಿಸಿದ್ದರು. ಶಂಕರ್ 25 ಹಾಗೂ ಆರ್.ಸಿ.ನಾಯ್ಕ್ 11 ಮತ ಪಡೆದರು.. *ಉಪಮೇಯರ್ ಪರ ಮತ ಚಲಾಯಿಸದ ಓರ್ವ ಬಿಜೆಪಿ ಸದಸ್ಯ* ಚುನಾವಣೆಯಲ್ಲಿ ಸ್ಥಾಯಿ ...
Read More »ಶಿವಮೊಗ್ಗ
ಮಾರ್ಚ್ 13ರಂದು ‘ಶಿವಮೊಗ್ಗ ಚಲೋ’ ಪ್ರತಿಭಟನೆ: 25000 ಜನ ಭಾಗಿ.
ಶಿವಮೊಗ್ಗ : ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮೇಲೆ ಸುಳ್ಳು ಕೇಸು ಹಾಕಿಸಿ, ದೌರ್ಜನ್ಯ ನಡೆಸುತ್ತಿದೆ. ಇದನ್ನು ಖಂಡಿಸಿ ಇದೇ 13ರಂದು ‘ಶಿವಮೊಗ್ಗ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದರಾದ ಧ್ರವನಾರಾಯನ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಮಾರ್ಚ್ 13ರಂದು ಶಿವಮೊಗ್ಗದ ಬಸ್ ನಿಲ್ದಾಣದಿಂದ ಸೈನ್ಸ್ ಮೈದಾನವರೆಗೆ ಮೆರವಣಿಗೆ ನಡೆಸಿ, ನಂತರ ಸೈನ್ಸ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದ್ದರು. ಪ್ರತಿಭಟನೆ ಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮಲ್ಲಿಕಾಜುನ್ ಖಕೆ ಸೇರಿದಂತೆ ಪ್ರಮುಖ ...
Read More »ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2021 – 22ನೇ ಸಾಲಿನ ಬಜೆಟ್‌ನಲ್ಲಿ – ಶಿವಮೊಗ್ಗಕ್ಕೆ ಏನೆಲ್ಲ ಘೋಷಣೆಯಾಗಿದೆ?
ಶಿವಮೊಗ್ಗದಲ್ಲಿರುವ ಆಯುರ್ವೇದ ಕಾಲೇಜನ್ನು ಆಯುಷ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ನೂರು ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಸಂಸ್ಥೆ ಮಾದರಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕ್ರಮವಾಗಿ 384 ಕೋಟಿ ರೂ. ಮತ್ತು 220 ಕೋಟಿ ರೂ.ಗಳ ನೀಡಲಾಗಿದೆ. ಶೀಘ್ರವಾಗಿ ಕಾರ್ಯಾಚರಣೆ ಮಾಡಲಾಗುತ್ತದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡುಗು ಜಿಲ್ಲೆಗಳಲ್ಲಿ ಅಡಕೆ ಬೆಳೆಗಾರರನ್ನು ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ 25 ಕೋಟಿ ರೂ. ಮಲೆನಾಡು ಮತ್ತು ...
Read More »ಶಿವಮೊಗ್ಗದ ತುಂಗಾ ಜಲಾಶಯದಲ್ಲಿ ದೊರತ ಬೃಹತಾಕಾರದ ಮೀನು
ಶಿವಮೊಗ್ಗ : ಇಂದು ಬೆಳಿಗ್ಗೆ ಶಿವಮೊಗ್ಗ ಗಾಜನೂರು ಡ್ಯಾಮಿನಲ್ಲಿ ಮೀನುಗಾರರು ಮೀನಿಗಾಗಿ ಎಂದಿನಂತೆ ಬಲೆ ಬೀಸಿದ್ದರು ಆದರೆ ಇಂದು ಮೀನುಗಾರರಿಗೆ ಒಂದು ಅಚ್ಚರಿ ಕಾದಿತ್ತು. ತಾವು ಹಾಕಿದ ಬಲೆಗೆ ಬರೋಬರಿ 53 ಕೆಜಿ ತೂಕದ ಸುರಗಿ ಮೀನು ಬಿದ್ದಿತ್ತು. ಸಾಮಾನ್ಯವಾಗಿ ಸುರಗಿ ಅಥವಾ ಕುಡಿ ಮೀನಿಗೆ ಕೆಜಿಗೆ 300 ರೂಪಾಯಿ ಆದರೆ ಈ ಬೃಹತ್ ಗಾತ್ರದ ಅ ಮೀನು ಕೆಜಿಗೆ 400 ರೂಪಾಯಿ ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಈ ಮೀನಿನಲ್ಲಿ ಹೆಚ್ಚಿನ ಔಷಧಿಯ ಮೌಲ್ಯವಿದೆ ಎಂದು ಹೇಳಲಾಗುತ್ತಿದೆ ಒಟ್ಟಿನಲ್ಲಿ ಮಾರುಕಟ್ಟೆಗೆ ಬಂದಂತಹ ...
Read More »ಭದ್ರಾವತಿ ಶಾಸಕ ಸಂಗಮೇಶ್ವರ್ ಪುತ್ರನ ಬಂಧನ
ಶಿವಮೊಗ್ಗ : ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ಭದ್ರಾವತಿ ಶಾಸಕ ಸಂಗಮೇಶ್ವರ್ ಅವರ ಪುತ್ರ ಬಸವೇಶ್‍ನನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಬಿಜೆಪಿ ಮುಖಂಡರು ದೂರು ದಾಖಲಿಸಿದ್ದರು. ಆನಂತರ ಬಸವೇಶ್ ಭದ್ರಾವತಿಯಲ್ಲಿ ಕಾಣಿಸಿರಲಿಲ್ಲ. ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಪೊಲೀಸರು ಬಸವೇಶ್‍ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಫೆಬ್ರವರಿ 28ರಂದು ನಡೆದ ಕಬಡ್ಡಿ ಪಂದ್ಯಾವಳಿಯ ಫೈನಲ್ ಮ್ಯಾಚ್‍ನ ಬಳಿಕ ಗಲಾಟೆಯಾಗಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ...
Read More »ಭಾರೀ ಜನಮನ್ನಣೆ ಪಡೆದಿದ್ದ ಈಸೂರು ಧಂಗೆ ಹೋರಿ ಇನ್ನಿಲ್ಲ.
ಶಿವಮೊಗ್ಗ : ಭಾರೀ ಜನಮನ್ನಣೆ ಪಡೆದಿದ್ದ ಈಸೂರು ಧಂಗೆ ಹೋರಿ ವಯೋ ಸಹಜ ಸಾವನಪ್ಪಿದೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ರೈತ ಕೊಪ್ಪದರ ಮಂಜಣ್ಣ ಎಂಬುವರು ಸಾಕಿದ್ದ ಹೋರಿ ಈಸೂರು ಧಂಗೆ. ಶಿವಮೊಗ್ಗ, ಹಾವೇರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಲ್ಲಿ ಭಾರೀ ಹೆಸರು ಗಳಿಸಿದ್ದು, ಅದನ್ನು ನೋಡಲೆಂದೇ ಹೋರಿಹಬ್ಬಕ್ಕೆ ಅಭಿಮಾನಿಗಳು ಹೋಗುತ್ತಿದ್ದರು. ಈಸೂರು ಧಂಗೆ ಹೋರಿ ಸ್ಫರ್ಧೆಗೆ ಭಾಗವಹಿಸಿದರೇ ಬಹುಮಾನ ಫಿಕ್ಸ್ ಎನ್ನುವ ಮಟ್ಟಿಗೆ ಖ್ಯಾತಿ ಹೊಂದಿತ್ತು. 7 ಬೈಕ್, 15 ಫ್ರಿಜ್, 15 ಟಿವಿ, ಎತ್ತಿನಗಾಡಿ, ಬಂಗಾರ ಬಳೆ, 10ಕ್ಕೂ ...
Read More »ಜಾರಕಿಹೊಳಿ ಫೋಟೋಗೆ ಚಪ್ಪಲಿ ಏಟು.
ಶಿವಮೊಗ್ಗ : ಕೆಲಸ ಮಾಡಿಕೊಡುವ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರಬಹುದು ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಚೇರಿಯಿಂದ ಮಹಾವೀರ ವೃತ್ತದ ವರೆಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ರಮೇಶ್ ಜಾರಕಿಹೊಳಿ ಫೋಟೋಗೆ ಚಪ್ಪಲಿ ಏಟು ಕೊಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್, ವಿಧಾನಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್ ಪಿ ...
Read More »ಬಿಎಸ್ ವೈ ಜನ್ಮ ದಿನದ ಅಂಗವಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮ ದಿನದ ಅಂಗವಾಗಿ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಅಭಿಮಾನಿಗಳು ಇಂದು ವಿಶೇಷ ಪೂಜೆ ಸಲ್ಲಿಸಿದರು. ಇಂದು ಬೆಳಗ್ಗೆ ರವೀಂದ್ರ ನಗರ ಗಣಪತಿ ದೇವಾಲಯಕ್ಕೆ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ನೇತೃತ್ವದಲ್ಲಿ ಆಗಮಿಸಿದ ಯಡಿಯೂರಪ್ಪ ಅವರ ಅಭಿಮಾನಿಗಳು ಯಡಿಯೂರಪ್ಪ ಅವರಿಗೆ ಒಳಿತಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಅವರಿಗೆ ಆರೋಗ್ಯ ಆಯಸ್ಸು ಕರುಣಿಸು ಹಾಗೂ ಇನ್ನಷ್ಟ ಅಭಿವೃದ್ಧಿ ಕಾರ್ಯ ನಡೆಸುವ ಶಕ್ತಿಯನ್ನು ಬಲಮುರಿ ಗಣಪತಿ ಕರುಣಿಸಲಿ ಎಂದು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
Read More »ಲಾರಿ ಮುಷ್ಕರ ಹಿಂಪಡೆಯಲು ಸಚಿವ ಈಶ್ವರಪ್ಪ ಮನವಿ.
ಶಿವಮೊಗ್ಗ : ತೈಲಬೆಲೆ ಹಾಗೂ ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ನಡೆಸುತ್ತಿರುವ ಲಾರಿ ಮುಷ್ಕರವನ್ನು ಹಿಂಪಡೆಯಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಅದರೆ, ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡೋದು ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರ ಬೆಲೆಯನ್ನು ಎಷ್ಟು ಕಡಿಮೆ ಮಾಡ್ಬೇಕೋ ಅಷ್ಟು ಕಡಿಮೆ ಮಾಡುತ್ತೇ. ಮುಷ್ಕರ ಮಾಡೋದ್ರಿಂದ ನಿಮಗೆ ಮಾತ್ರವಲ್ಲದೆ, ರೈತರು, ಕೈಗಾರಿಕೆಗಳು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತೇ. ಮುಷ್ಕರವೇ ...
Read More »ಲಾರಿ ಮುಷ್ಕರಕ್ಕೆ ಶಿವಮೊಗ್ಗದಲ್ಲೂ ವ್ಯಾಪಕ ಬೆಂಬಲ : ರಸ್ತೆಗಿಳಿಯದ 2000ಕ್ಕೂ ಅಧಿಕ ಲಾರಿಗಳು
ಶಿವಮೊಗ್ಗ: ತೈಲ ಬೆಲೆ ಹೆಚ್ಚಳ ಹಾಗೂ ಟೋಲ್ ಶುಲ್ಕ ಹೆಚ್ಚಳ ಖಂಡಿಸಿ ರಾಜ್ಯ ಲಾರಿ ಮಾಲೀಕರು ಮತ್ತು ಎಜೆಂಟರುಗಳು ಕರೆ ನೀಡಿರುವ ಲಾರಿ ಮುಷ್ಕರಕ್ಕೆ ಶಿವಮೊಗ್ಗದಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಗಿವೆ. ಮುಷ್ಕರ ಬೆಂಬಲಿಸಿ ಯಾವುದೇ ಲಾರಿಗಳು ಇಂದು ರಸ್ತೆಗೆ ಇಳಿದಿಲ್ಲ. ಸರಕು-ಸಾಗಣೆ ಸ್ಥಗಿತಗೊಳಿಸಿ ಲಾರಿ ಮಾಲೀಕರು ಒಂದು ದಿನದ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಮುಷ್ಕರದಿಂದಾಗಿ ಶಿವಮೊಗ್ಗ ನಗರದ ಸುಮಾರು 2 ಸಾವಿರಕ್ಕೂ ಅಧಿಕ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ. ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿ ಇರುವ ಗೂಡ್ಸ್ ಶೆಡ್ ನಲ್ಲೇ ಸುಮಾರು 200ಕ್ಕೂ ಹೆಚ್ಚು ಲಾರಿಗಳು ...
Read More »
C News TV Kannada News Online in cnewstv