Breaking News

ಶಿವಮೊಗ್ಗ

ಬೆಳ್ಳೂರು ಗ್ರಾ.ಪಂ ಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ.

Cnewstv.in / 17.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬೆಳ್ಳೂರು ಗ್ರಾ.ಪಂ ಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ. ಶಿವಮೊಗ್ಗ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಎಂಬ ಹೊಸ ಪರಕಲ್ಪನೆಯೊಂದಿಗೆ ಪ್ರತಿ 3ನೇ ಶನಿವಾರದಂದು ಗ್ರಾಮ ಭೇಟಿ ನೀಡಿ ವಾಸ್ತವ್ಯ ಹೂಡುವ ಬಗೆಗಿನ ಸರ್ಕಾರದ ನಿರ್ದೇಶನದಂತೆ ಮೇ 21 ರಂದು ಬೆಳಿಗ್ಗೆ 11 ಗಂಟೆಗೆ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಬೆಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ಜಿಲ್ಲಾಧಿಕಾರಿಗಳು ಕಂದಾಯ ಮತ್ತು ಇತರೆ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಸಾರ್ವಜನಿಕರನ್ನು ಭೇಟಿ ಮಾಡಿ, ...

Read More »

ಮುಂಗಾರು ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ ಕೈಗೊಳ್ಳಿ: ಡಾ.ಸೆಲ್ವಮಣಿ.

Cnewstv.in / 16.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮುಂಗಾರು ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ ಕೈಗೊಳ್ಳಿ: ಡಾ.ಸೆಲ್ವಮಣಿ. ಶಿವಮೊಗ್ಗ : ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಸಂಭವಿಸಬಹುದಾದ ಅಪಾಯಗಳನ್ನು ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಮುಂಗಾರು ಎದುರಿಸಲು ಕೈಗೊಳ್ಳುವ ಕ್ರಮಗಳ ಕುರಿತು ಕಾರ್ಯ ಯೋಜನೆಯನ್ನು ವಾರದ ಒಳಗಾಗಿ ಸಲ್ಲಿಸುವಂತೆ ಅವರು ...

Read More »

ಕಾರು ಡಿಕ್ಕಿಯಾಗಿ 7 ಎಮ್ಮೆಗಳ ಸಾವು..

Cnewstv.in / 16.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕಾರು ಡಿಕ್ಕಿಯಾಗಿ 7 ಎಮ್ಮೆಗಳ ಸಾವು.. ಶಿವಮೊಗ್ಗ : ಕಾರೊಂದು ಡಿಕ್ಕಿಯಾಗಿ 7 ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನೆನ್ನೆ ರಾತ್ರಿ ಬ್ರೀಜಾ ಕಾರೊಂದು ಶಿವಮೊಗ್ಗದಿಂದ ಆಯನೂರಿನ ಕಡೆಗೆ ಹೋಗುತ್ತಿದ್ದಾಗ ಗಾಡಿಕೊಪ್ಪದ ತುಂಗಾ ಚಾನಲ್ ಹತ್ತಿರ ಎಮ್ಮೆಗಳಿಗೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಸ್ಥಳದಲ್ಲೇ 7 ಎಮ್ಮೆಗಳು ಮೃತಪಟ್ಟಿದ್ದು, ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ. ಎಮ್ಮೆಗಳ ಗುಂಪು ರಸ್ತೆ ಮಧ್ಯದಲ್ಲಿ ಇರುವುದನ್ನು ಗಮನಿಸದೆ ಈ ಅಪಘಾತ ಸಂಭವಿಸಿದೆ. ಸಂಚಾರಿ ...

Read More »

ಕಲಾವಿದರ ದತ್ತಾಂಶ ಸಂಗ್ರಹ ಅವಧಿ ವಿಸ್ತರಣೆ.

Cnewstv.in / 14.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕಲಾವಿದರ ದತ್ತಾಂಶ ಸಂಗ್ರಹ ಅವಧಿ ವಿಸ್ತರಣೆ. ಶಿವಮೊಗ್ಗ : ಯಕ್ಷಗಾನ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯಡಿ ಜಿಲ್ಲಾ ವ್ಯಾಪ್ತಿಯ ಸಾಹಿತಿಗಳು/ಕಲಾವಿದರುಗಳು ಸೇವಾಸಿಂಧು ಪೋರ್ಟಲ್ sevasindhu.karnataka.gov.in ಮೂಲಕ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳುವ ಅವಧಿಯನ್ನ ಮೇ 30 ರವರೆಗೆ ವಿಸ್ತರಿಸಲಾಗಿದೆ. ಯಕ್ಷಗಾನ ಸಾಹಿತಿಗಳು/ಕಲಾವಿದರು ನೋಂದಣಿಗಾಗಿ ಸೇವಾಸಿಂಧು ಮೂಲಕ ನಿಗದಿತ ಅರ್ಜಿಯನ್ನು ಆನ್‍ಲೈನ್‍ನಲ್ಲೇ ಭರ್ತಿ ಮಾಡುವುದು. ಅರ್ಜಿ ಸಲ್ಲಿಸಲು ಕನಿಷ್ಟ ವಯೋಮಿತಿ 8 ವರ್ಷಗಳು. ಯಕ್ಷಗಾನ ಕಲಾಕ್ಷೇತ್ರದಲ್ಲಿ ಕನಿಷ್ಟ 5 ವರ್ಷಗಳ ಕಲಾ ...

Read More »

ಹುಲಿ-ಸಿಂಹಧಾಮದ ಹುಲಿಯ ಸಹಜ ಸಾವು.

Cnewstv.in / 13.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹುಲಿ-ಸಿಂಹಧಾಮದ ಹುಲಿಯ ಸಹಜ ಸಾವು. ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ರಾಮ ಎಂಬ 17 ವರ್ಷದ ಗಂಡು ಹುಲಿ ವಯೋಸಹಜ ಕಾರಣದಿಂದ ಮೃತಪಟ್ಟಿದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕಾನೂನು ರೀತ್ಯಾ ಮರಣೋತ್ತರ ಪರೀಕ್ಷೆಯನ್ನು ಜರುಗಿಸಿ, ದಹನ ಕ್ರಿಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನು ಒದಿ : https://cnewstv.in/?p=9808 ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Read More »

ಮೀನುಮರಿ ಪಾಲನೆದಾರರಿಂದ ಅರ್ಜಿ ಆಹ್ವಾನ.

Cnewstv.in / 12.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮೀನುಮರಿ ಪಾಲನೆದಾರರಿಂದ ಅರ್ಜಿ ಆಹ್ವಾನ. ಶಿವಮೊಗ್ಗ : 2022-23ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ರಾಜ್ಯದ ಇಲಾಖಾ ಕೆರೆಗಳು, ಗ್ರಾಮ ಪಂಚಾಯಿತಿ ಕೆರೆಗಳು, ಜಲಾಶಯಗಳಿಗೆ ಮತ್ತು ನದಿ ಭಾಗಗಳಿಗೆ 70-80 ಎಂ ಎಂ ಗಾತ್ರದ ಬಲಿತ ಬಿತ್ತನೆ ಮೀನುಮರಿಗಳನ್ನು ಸರ್ಕಾರ ನಿಗಧಿಪಡಿಸಿರುವ ದರಗಳಲ್ಲಿ ರಾಜ್ಯದ ನೊಂದಾಯಿತ ಖಾಸಗಿ ಮೀನು ಕೃಷಿಕರಿಂದ ಖರೀದಿ ಮಾಡಿ ದಾಸ್ತಾನು ಮಾಡಲು ಉದ್ದೇಶಿಸಿದ್ದು, ನೊಂದಾಯಿತ ಆಸಕ್ತ ಮೀನುಮರಿ ಪಾಲನೆದಾರರಿಂದ ಅರ್ಜಿ ಆಹ್ವಾನಿಸಿದೆ. ನೊಂದಾಯಿತ ...

Read More »

ಪ.ಜಾತಿ, ಪ.ಪಂಗಡದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅನುದಾನ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಾಯ್ದೆ ಪ್ರಕಾರ ಕ್ರಮ : ಡಾ.ಸೆಲ್ವಮಣಿ.

Cnewstv.in / 12.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಪ.ಜಾತಿ, ಪ.ಪಂಗಡದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅನುದಾನ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಾಯ್ದೆ ಪ್ರಕಾರ ಕ್ರಮ : ಡಾ.ಸೆಲ್ವಮಣಿ. ಶಿವಮೊಗ್ಗ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅನುದಾನ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‍ಸಿಪಿ/ಟಿಎಸ್‍ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಯಕ್ರಮ ಅನುಷ್ಟಾನದ ಪರಿಶೀಲನೆ ನಡೆಸಿದರು. ಕೆಲವು ...

Read More »

BSNL : ಎಫ್‍ಟಿಟಿಹೆಚ್ ಕೇಸ್ ನಿರ್ವಹಣೆಗೆ ಅರ್ಜಿ ಆಹ್ವಾನ.

Cnewstv.in / 12.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. BSNL : ಎಫ್‍ಟಿಟಿಹೆಚ್ ಕೇಸ್ ನಿರ್ವಹಣೆಗೆ ಅರ್ಜಿ ಆಹ್ವಾನ. ಶಿವಮೊಗ್ಗ : ಶಿವಮೊಗ್ಗದಲ್ಲಿನ ಬಿಎಸ್‍ಎನ್‍ಎಲ್ ಸಂಪರ್ಕಗಳ ಎಫ್‍ಟಿಟಿಹೆಚ್ ಕೇಸ್ -5 ನಿರ್ವಹಿಸಲು ಆಸಕ್ತಿವುಳ್ಳ ಒಎಫ್‍ಸಿ ನಿರ್ವಹಣೆ/ಎಫ್‍ಟಿಟಿಹೆಚ್ ವ್ಯವಹಾರ ಅನುಭವವುಳ್ಳ ಮಾರಾಟಗಾರರು ಅರ್ಜಿ ಸಲ್ಲಿಸಬಹುದು. EOI ಬಿಡ್ ದಾಖಲೆಗಳು ಬಿಎಸ್‍ಎನ್‍ಎಲ್ ವೆಬ್‍ಸೈಟ್ www.karnataka.bsnl.co.in(tenders) ಇಲ್ಲಿ ಮೇ 11 ರಿಂದ ಲಭ್ಯವಿದ್ದು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-251900, 9449856525 ನ್ನು ಸಂಪರ್ಕಿಸಬಹುದೆಂದು ಬಿಎಸ್‍ಎನ್‍ಎಲ್ ಕಚೇರಿ ಪ್ರಕಟಣೆ ತಿಳಿಸಿದೆ. ಇದನ್ನು ಒದಿ ...

Read More »

ಭದ್ರ ನಾಲೆಯಲ್ಲಿ ಈಜಲು ಹೋಗಿದ್ದ ಮಕ್ಕಳು ನಾಪತ್ತೆ..

Cnewstv.in / 12.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಭದ್ರ ನಾಲೆಯಲ್ಲಿ ಈಜಲು ಹೋಗಿದ್ದ ಮಕ್ಕಳು ನಾಪತ್ತೆ.. ಶಿವಮೊಗ್ಗ : ಭದ್ರಾ ನಾಲೆ ಈಜಲು ಹೋಗಿದ್ದ ನಾಲ್ವರು ಮಕ್ಕಳ ಪೈಕಿ ಇಬ್ಬರು ಮಕ್ಕಳು ನಾಪತ್ತೆಯಾದ ಘಟನೆ ನಡೆದಿದೆ. ನೀರಿನಲ್ಲಿ ನಾಪತ್ತೆಯಾದ ಮಕ್ಕಳೆಲ್ಲ ಹರ್ಷ (10) ಹಾಗೂ ಚಂದನ (14) ಎಂದು ಗುರುತಿಸಲಾಗಿತ್ತು. ಇವರು ಬೇಸಿಗೆ ರಜೆ ಗೆಂದು ಹೊಳೆಹೊನ್ನೂರು ಸಮೀಪದ ಸಿದ್ದಾಪುರ ಗ್ರಾಮದ ದೊಡ್ಡಪ್ಪನ ಮನೆಗೆ ಬಂದಿದ್ದರು. ನೆನ್ನೆ ಮಧ್ಯಾಹ್ನ ಭದ್ರಾ ಬಲದಂಡೆ ನಾಲೆಯಲ್ಲಿ ಈಜಲು ಹೋದಾಗ ಈ ...

Read More »

ಹರ್ಷ ಹತ್ಯೆ ಪ್ರಕರಣ : ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಹೆಚ್ಚಿಗೆ. ‌

Cnewstv.in / 12.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹರ್ಷ ಹತ್ಯೆ ಪ್ರಕರಣ : ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಹೆಚ್ಚಿಗೆ. ‌ ಬೆಂಗಳೂರು : ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಹೆಚ್ಚಿಸಲಾಗಿದೆ. ಎನ್ಐಎ ತಂಡ ಸಲ್ಲಿಸಿದ ಮನವಿಯಗೆ ನ್ಯಾಯಾಲಯವು ಅನುಮತಿಯನ್ನು ನೀಡಿದ್ದು, ಈ ಪ್ರಕರಣದಲ್ಲಿ ಬಂಧಿತರಾದ ಹತ್ತು ಮಂದಿ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ಹೆಚ್ಚಿಸಲಾಗಿದೆ. ಎನ್ಐಎ ಪರ ವಕೀಲರು ಸಲ್ಲಿಸಿದ ಮನವಿ ನ ...

Read More »