ಕಾರು ಡಿಕ್ಕಿಯಾಗಿ 7 ಎಮ್ಮೆಗಳ ಸಾವು..
Cnewstv.in / 16.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಾರು ಡಿಕ್ಕಿಯಾಗಿ 7 ಎಮ್ಮೆಗಳ ಸಾವು..
ಶಿವಮೊಗ್ಗ : ಕಾರೊಂದು ಡಿಕ್ಕಿಯಾಗಿ 7 ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನೆನ್ನೆ ರಾತ್ರಿ ಬ್ರೀಜಾ ಕಾರೊಂದು ಶಿವಮೊಗ್ಗದಿಂದ ಆಯನೂರಿನ ಕಡೆಗೆ ಹೋಗುತ್ತಿದ್ದಾಗ ಗಾಡಿಕೊಪ್ಪದ ತುಂಗಾ ಚಾನಲ್ ಹತ್ತಿರ ಎಮ್ಮೆಗಳಿಗೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಸ್ಥಳದಲ್ಲೇ 7 ಎಮ್ಮೆಗಳು ಮೃತಪಟ್ಟಿದ್ದು, ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ.
ಎಮ್ಮೆಗಳ ಗುಂಪು ರಸ್ತೆ ಮಧ್ಯದಲ್ಲಿ ಇರುವುದನ್ನು ಗಮನಿಸದೆ ಈ ಅಪಘಾತ ಸಂಭವಿಸಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಒದಿ : https://cnewstv.in/?p=9826
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
2022-05-16