ಕಲಾವಿದರ ದತ್ತಾಂಶ ಸಂಗ್ರಹ ಅವಧಿ ವಿಸ್ತರಣೆ.
Cnewstv.in / 14.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಲಾವಿದರ ದತ್ತಾಂಶ ಸಂಗ್ರಹ ಅವಧಿ ವಿಸ್ತರಣೆ.
ಶಿವಮೊಗ್ಗ : ಯಕ್ಷಗಾನ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯಡಿ ಜಿಲ್ಲಾ ವ್ಯಾಪ್ತಿಯ ಸಾಹಿತಿಗಳು/ಕಲಾವಿದರುಗಳು ಸೇವಾಸಿಂಧು ಪೋರ್ಟಲ್ sevasindhu.karnataka.gov.in ಮೂಲಕ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳುವ ಅವಧಿಯನ್ನ ಮೇ 30 ರವರೆಗೆ ವಿಸ್ತರಿಸಲಾಗಿದೆ.
ಯಕ್ಷಗಾನ ಸಾಹಿತಿಗಳು/ಕಲಾವಿದರು ನೋಂದಣಿಗಾಗಿ ಸೇವಾಸಿಂಧು ಮೂಲಕ ನಿಗದಿತ ಅರ್ಜಿಯನ್ನು ಆನ್‍ಲೈನ್‍ನಲ್ಲೇ ಭರ್ತಿ ಮಾಡುವುದು. ಅರ್ಜಿ ಸಲ್ಲಿಸಲು ಕನಿಷ್ಟ ವಯೋಮಿತಿ 8 ವರ್ಷಗಳು. ಯಕ್ಷಗಾನ ಕಲಾಕ್ಷೇತ್ರದಲ್ಲಿ ಕನಿಷ್ಟ 5 ವರ್ಷಗಳ ಕಲಾ ಸೇವೆ ಸಲ್ಲಿಸಬೇಕು. ಸಾಹಿತಿಗಳು ಕನಿಷ್ಟ ಒಂದು ಪುಸ್ತಕ ಪ್ರಕಟಿಸಿರಬೇಕು. ಅರ್ಜಿದಾರರು ತಾವು ಇರುವ ಸ್ಥಳದಲ್ಲೇ ಮೊಬೈಲ್, ಟ್ಯಾ ಅಥವಾ ಲ್ಯಾಪ್‍ಟಾಪ್ ಮುಖಾಂತರ ನೋಂದಣಿ ಮಾಡಿಕೊಳ್ಳತಕ್ಕದ್ದು. ಗ್ರಾಮೀಣ ಪ್ರದೇಶದವರು ನಾಗರೀಕ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ಅರ್ಜಿ ತುಂಬುವ ಪ್ರಕ್ರಿಯೆಯು ಅತ್ಯಂತ ಸರಳವಾಗಿದ್ದು ಕೆಲವು ಅಂಶಗಳನ್ನು ಹೊರತುಪಡಿಸಿ ಉಳಿದ ಅಂಶಗಳು ಬಹು ಆಯ್ಕೆ ಮೂಲಕ ತುಂಬಬಹುದಾಗಿದೆ. ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರೂ ಸೇರಿದಂತೆ ಎಲ್ಲಾ ಯಕ್ಷಗಾನ ಕಲಾವಿದರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿ ತುಂಬುವಾಗ ಕೇಳಲಾದ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು. ಯಕ್ಷಗಾನ ಕಲಾವಿದರು ಇತ್ತೀಚೆಗೆ ಪ್ರದರ್ಶಿಸಿದ ಕಾರ್ಯಕ್ರಮದ/ಇದಕ್ಕಾಗಿಯೇ ಚಿತ್ರೀಕರಿಸಿದ ವಿಡಿಯೋ ಲಿಂಕನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಕಲಾವಿದರು ಆಧಾರ್‍ನಲ್ಲಿ ದಾಖಲಾಗಿರುವ ಮೊಬೈಲ್ ಸಂಖ್ಯೆಯನ್ನೇ ನೀಡತಕ್ಕದ್ದು. ಅರ್ಜಿ ಭರ್ತಿ ಮಾಡುವಾಗ ಆಧಾರ್ ನಂಬರ್ ಪರಿಶೀಲನೆ ಓಟಿಪಿಯು ತಾವು ನೀಡಿರುವ ಮೊಬೈಲ್ ದೂರವಾಣಿಗೆ ಬರುತ್ತದೆ. ಇದನ್ನು ಅಧಿಕೃತ ಮೊಬೈಲ್ ನಂಬರ್ ಎಂದೇ ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=9812
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಕಲಾವಿದರ ದತ್ತಾಂಶ ಸಂಗ್ರಹ ಅವಧಿ ವಿಸ್ತರಣೆ. 2022-05-15