ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪನವರ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಬೃಹತ್ ರಾಲಿಯನ್ನು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಹಮ್ಮಿಕೊಂಡಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ತನ್ನ ಶಕ್ತಿ ಪ್ರದರ್ಶನ ತೋರಿಸಿತ್ತು. ಮಧು ಬಂಗಾರಪ್ಪನವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಯ ಕ್ವಿಕ್ ಲುಕ್.
Read More »ರಾಜ್ಯ
KPSC ಹುದ್ದೆಗಳಿಗೆ ಅರ್ಜಿ ಆಹ್ವಾನ..
ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ‘ಸಿ’ ಹುದ್ದೆಗಳಿಗೆ ನೇಮಕಾತಿ ನಡೆಸಲು ಪ್ರಕಟಣೆ ಹೊರಡಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಸಂಬಂಧಪಟ್ಟ ಹುದ್ದೆಗೆ ಬೇಕಾದ ಅರ್ಜಿಯನ್ನು ತುಂಬಿ ಏಪ್ರಿಲ್ 22ರೊಳಗೆ ಸಲ್ಲಿಸಬಹುದು.. ಹೆಚ್ಚಿನ ಮಾಹಿತಿಗಾಗಿ, ( http://www.kpsc.kar.nic.in/ )
Read More »ಓಲಾ ಕ್ಯಾಬ್ ಗಳ ಪರವಾನಗಿ 6 ತಿಂಗಳ ಕಾಲ ಅಮಾನತ್ತು.
ಅಪ್ಲಿಕೇಶನ್ ಆಧಾರಿತ ಓಲಾ ಕ್ಯಾಬ್ಸ್ ಅಗ್ರಿಗೇಟರ್ ಪರವಾನಗಿಯನ್ನು 6 ತಿಂಗಳ ಕಾಲ ಅಮಾನತ್ತುಗೊಳಿಸಿದೆ.ಕರ್ನಾಟಕದಲ್ಲಿ ಆರು ತಿಂಗಳು ಓಲಾ ಕ್ಯಾಬ್ಗಳನ್ನು ಅಮಾನತುಗೊಳಿಸುವ ಕ್ರಮವನ್ನು ಮಾರ್ಚ್ 18 ರಂದು ನೀಡಲಾಯಿತು. ಕ್ಯಾಬ್ ಅಗ್ರಿಗ್ರೇಟರ್ಗೆ ಪರವಾನಗಿ ಪರಿಸ್ಥಿತಿಗಳ ಉಲ್ಲಂಘನೆ ಮತ್ತು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಬೈಕು ಟ್ಯಾಕ್ಸಿಗಳು ಚಾಲನೆಯಲ್ಲಿತ್ತು ಹಾಗು ಇಲಾಖೆಯ ನೋಟಿಸ್ಗಳಿಗೆ ಪ್ರತಿಕ್ರಿಯಿಸಿರಲಿಲ್ಲ ಹೀಗಾಗಿ ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್ಪೋರ್ಟಷನ್ ಟೆಕ್ನಾಲಜಿ ಅಗ್ರಿಗೇಟಸ್ ರೂಲ್ಸ್ 2016 ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಓಲಾ ಕಾರುಗಳು ಆಟೋಗಳು ಬೈಕುಗಳು ಸೇರಿದಂತೆ ಯಾವುದೇ ವಾಹನಗಳು ಅದರ ...
Read More »ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಹೃದಯಾಘಾತದಿಂದ ನಿಧನ
ಶಿವಮೊಗ್ಗ: ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಅವರಿಗೆ ಶುಕ್ರವಾರ ಹೃದಯಾಘಾತ ಉಂಟಾಯಿತು. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಧಾರವಾಡದ ಕಟ್ಟಡದ ದುರಂತ ಸ್ಥಳದಲ್ಲೇ ಮಾರ್ಚ್ 20 ರಿಂದ ಬೀಡು ಬಿಟ್ಟಿದ್ದ ಸಿ.ಎಸ್ ಶಿವಳ್ಳಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಗುರುವಾರ ಮಧ್ಯರಾತ್ರಿಯ ವರೆಗೆ ಅವರು ಅಲ್ಲಿಯೇ ಇದ್ದರು. ಇಂದೂ ಕೂಡ ಅಲ್ಲಿಯೇ ಇದ್ದರು. ಈ ವೇಳೆ ...
Read More »ಕಣ್ಮರೆಯಾಗಿದ್ದ ರಮ್ಯಾ ಮತ್ತೆ ಪ್ರತ್ಯಕ್ಷ.
ಚಿತ್ರನಟಿ, ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥರಾದ ಮಾಜಿ ಸಂಸದೆ ರಮ್ಯಾ ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ, ರಾಜ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನ ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಂದು ರಾಹುಲ್ ಗಾಂಧಿ ಅವರು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ , ನವೋದ್ಯಮಿಗಳಿಗಾಗಿ ಅಯೋಜನೆ ಮಾಡಿದಂತಹ ಸಂವಾದ ಕಾರ್ಯಕ್ರಮದಲ್ಲಿ ರಮ್ಯಾ ಭಾಗಿಯಾಗಿದ್ದರು..
Read More »ಅಗ್ನಿ ಆಕಸ್ಮಿಕಕ್ಕೆ ಐದು ಮನೆಗಳು ಭಸ್ಮ -ಬೀದಿಗೆ ಬಿದ್ದ ಬಡ ಕೂಲಿ ಕಾರ್ಮಿಕರು
ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಮತ್ತೋಡು ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಗುಡಿಸಲುಗಳು ಹಾಗೂ ಒಂದು ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಶನಿವಾರ ಸಂಜೆ ಮತ್ತೋಡು ಗ್ರಾಮದ ಎಲ್ಲರೂ ಕೂಲಿ ಕೆಲಸ ಮಾಡಿ ಬಂದು ಮನೆಯ ಕೆಲಸವನ್ನೆಲ್ಲೂ ಮುಗಿಸಿ ತಮ್ಮೂರಿನಲ್ಲಿ ಟಿವಿ ಇರುವವರಮನೆಗೆ ಟಿವಿ ನೋಡಲು ಹೋಗಿದ್ದರು. ಆದರೆ ಅವರು ಟಿವಿ ನೋಡಿ ತಮ್ಮ ಮನೆಗೆ ಬರುವಷ್ಟರಲ್ಲಿ ಮನೆಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ನಂದಿಸಲು ಹೋದ ಕೆಲ ಮಹಿಳೆಯರು ಸುಟ್ಟಗಾಯಕ್ಕೂ ತುತ್ತಾಗಿದ್ದಾರೆ. ಕೊನೆಗೂ ಐದು ಗುಡಿಸಲುಗಳು ಹಾಗೂ ಒಂದು ಅಂಗಡಿ ...
Read More »ಮಾತೆ ಮಹಾದೇವಿ ಲಿಂಗೈಕ್ಯ.
ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಹಾಗೂ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಒಂದು ವಾರದಿಂದ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸೋಂಕಿನಿಂದ ಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಲಿಂಗೈಕ್ಯರಾಗಿದ್ದಾರೆ. ಅವರ ಎರಡು ಕಿಡ್ನಿಗಳ ಕಾರ್ಯ ಸ್ಥಗಿತಗೊಂಡಿರುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ..
Read More »ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನಿಂದ ಜಾರಿ – ಕೆ ಎ ದಯಾನಂದ
ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪಕ್ಷದವರಿಗೆ ಖಡಕ್ ವಾರ್ನಿಂಗ್ *ನೀತಿ ಸಂಹಿತೆ ಅನ್ವಯ ಹೊಸದಾಗಿ ಯಾವುದೇ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಮಾಡುವಂತಿಲ್ಲ. *ಯಾವುದೇ ಯೋಜನೆಗಳ ಫಲಾನುಭವಿಗಳ ಆಯ್ಕೆ ಅಥವಾ ಸೌಲಭ್ಯಗಳ ವಿತರಣೆ ಮಾಡುವಂತಿಲ್ಲ. *ಎಲ್ಲಾ ರಾಜಕೀಯ ಜಾಹೀರಾತು ಫಲಕಗಳನ್ನು 24ಗಂಟೆಗಳ ಒಳಗಾಗಿ ತೆರವುಗೊಳಿಸಬೇಕು. * ನೀತಿ ಸಂಹಿತೆಯನ್ನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಹ ...
Read More »ಶಿವಮೊಗ್ಗ ಜಿಲ್ಲೆಯ ಸುಂದರ ತಾಣಗಳ ದೃಶ್ಯಗಳು..
ವiಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ. ಇದು ತನ್ನ ಪ್ರಕೃತಿ ಸೌಂದರ್ಯದಿಂದ ಇಡೀ ದೇಶವನ್ನೇ ತನ್ನತ್ತ ಸೇಳೆಯುತ್ತಿದೆ, ಇಂತಹ ಜಿಲ್ಲೆಯ ಸುಂದರ ಪ್ರವಾಸಿ ತಾಣಗಳನ್ನು ಶಶಿಕುಮಾರರವರ just shimoga ತಂಡದವÀರು ತಮ್ಮ ಕ್ಯಾವiರಾ ಮೂಲಕ ಸೆರೆ ಹಿಡಿದಿದ್ದಾರೆ.
Read More »ಬಜೆಟ್ ನಿಂದ ರೈತರು ಫುಲ್ ಖುಷ್.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ನಲ್ಲಿ ರೈತರಿಗಾಗಿ ಯೋಜನೆಯನ್ನು ಜಾರಿಗೆ ತರಲು ಸಮ್ಮತಿಸಲಾಗಿದೆ. * “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ” ಈ ಯೋಜನೆಯಡಿ 2 ಹೇಟ್ಟರ್ ಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಕೇಂದ್ರ ಸರ್ಕಾರ ನೇರವಾಗಿ 6000 ರೂಪಾಯಿಗಳನ್ನು ಮೂರು ಹಂತಗಳಲ್ಲಿ ಜಮಾ ಮಾಡಲಿದೆ. * ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 12 ಕೋಟಿ ಸಣ್ಣ ರೈತರಿಗೆ ಅನುಕೂಲಕರವಾಗಲಿದೆ. * ರೈತರಿಗೆ ಕನಿಷ್ಠ ಬೆಂಬಲ ಬೆಲೆ ...
Read More »
Recent Comments