ಶಿವಮೊಗ್ಗ: ಇಂದು ಸಂಜೆ ವೇಳೆ ಅರ್ಧ ಗಂಟೆ ಸುರಿದ ಮಳೆ ಶಿವಮೊಗ್ಗ ನಗರದಲ್ಲಿ ಅವಾಂತರವನ್ನೇ ಸೃಷ್ಟಿಸಿದೆ. ಕಳೆದ ಮೂರು ದಿನಗಳಿಂದ ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗುತ್ತಿದೆ. ಆದರೆ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಆರಂಭವಾದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಎಲ್ಲ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿತ್ತು. ಶಿವಮೊಗ್ಗ ಪಾರ್ಕ್ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರಿನ ರಸ್ತೆ ಮೇಲೆ ಬರೋಬ್ಬರಿ ಎರಡು ಅಡಿಗೂ ಹೆಚ್ಚು ನೀರು ನಿಂತಿತ್ತು. ಅರ್ಧ ಗಂಟೆ ಸುರಿದ ಧಾರಾಕಾರ ಮಳೆ ...
Read More »Tag Archives: Rain
ಮಲೆನಾಡಲ್ಲೇ ಮಳೆ ಕ್ಷೀಣ
ಶಿವಮೊಗ್ಗ ಎಂದಾಕ್ಷಣ ಎಲ್ಲರಿಗೂ ಮಲೆನಾಡಿನ ಹೆಬ್ಬಾಗಿಲು ಎಂದು ತಿಳಿದುಕೊಳ್ಳುತ್ತಾರೆ. ಇಲ್ಲಿ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುತ್ತದೆ. ಮಳೆಗಾಲದಲ್ಲಂತೂ ಕುಂಭದ್ರೋಣ ಮಳೆ ಸುರಿಯುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಜೊತೆಗೆ ಕಾಲಕಾಲಕ್ಕೆ ಆಗಬೇಕಾದ ಮಳೆಯೂ ವಾಡಿಕೆಯಷ್ಟು ಆಗುತ್ತಿಲ್ಲ. ಬಾರಿಯ ಮುಂಗಾರು ಪೂರ್ವ ಮಳೆಯನ್ನೇ ಪರಿಗಣನೆಗೆ ತೆಗೆದುಕೊಂಡರೆ ಬರೋಬ್ಬರಿ ಶೇಕಡಾ 77 ರಷ್ಟು ಮಳೆ ಕೊರತೆ ಶಿವಮೊಗ್ಗ ಜಿಲ್ಲೆಯಲಾಗಿದೆ. ಮುಂಗಾರು ಪೂರ್ವದಲ್ಲಿ ವಾಡಿಕೆಯಷ್ಟು ಮಳೆಯಾಗದೇ ಇರುವುದರಿಂದಾಗಿ ರೈತರು ತಲೆ ಮೇಲೆ ಕೈಹೊತ್ತು ಕೂರಬೇಕಾಗ ದುಸ್ಥಿತಿ ಬಂದೊದಗಿದೆ. ...
Read More »ವರುಣನ ಆಗಮನದಿಂದ ಶಿವಮೊಗ್ಗ ಕೂಲ್ ಕೂಲ್.
ಬಿಸಿಲಿನಿಂದ ಹೈರಾಣಾಗಿದ್ದ ಮಲೆನಾಡಿನ ಜನತೆಗೆ ಇಂದು ಸಂಜೆ ವರುಣ ತಂಪೆರೆದಿದ್ದಾನೆ..ನಗರದಲ್ಲಿ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಜನ ಖುಷಿಯಾಗಿದ್ದಾರೆ.. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಆಗಿದೆ..ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳನ್ನು ಸಹ ಮಳೆಯಾಗಿದೆ..
Read More »
C News TV Kannada News Online in cnewstv