Breaking News

ಮಲೆನಾಡಲ್ಲೇ ಮಳೆ ಕ್ಷೀಣ

 

ಶಿವಮೊಗ್ಗ ಎಂದಾಕ್ಷಣ ಎಲ್ಲರಿಗೂ ಮಲೆನಾಡಿನ ಹೆಬ್ಬಾಗಿಲು ಎಂದು ತಿಳಿದುಕೊಳ್ಳುತ್ತಾರೆ. ಇಲ್ಲಿ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುತ್ತದೆ. ಮಳೆಗಾಲದಲ್ಲಂತೂ ಕುಂಭದ್ರೋಣ ಮಳೆ ಸುರಿಯುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಜೊತೆಗೆ ಕಾಲಕಾಲಕ್ಕೆ ಆಗಬೇಕಾದ ಮಳೆಯೂ ವಾಡಿಕೆಯಷ್ಟು ಆಗುತ್ತಿಲ್ಲ. ಬಾರಿಯ ಮುಂಗಾರು ಪೂರ್ವ ಮಳೆಯನ್ನೇ ಪರಿಗಣನೆಗೆ ತೆಗೆದುಕೊಂಡರೆ ಬರೋಬ್ಬರಿ ಶೇಕಡಾ 77 ರಷ್ಟು ಮಳೆ ಕೊರತೆ ಶಿವಮೊಗ್ಗ ಜಿಲ್ಲೆಯಲಾಗಿದೆ.

 

ಮುಂಗಾರು ಪೂರ್ವದಲ್ಲಿ ವಾಡಿಕೆಯಷ್ಟು ಮಳೆಯಾಗದೇ ಇರುವುದರಿಂದಾಗಿ ರೈತರು ತಲೆ ಮೇಲೆ ಕೈಹೊತ್ತು ಕೂರಬೇಕಾಗ ದುಸ್ಥಿತಿ ಬಂದೊದಗಿದೆ. ವಾಡಿಕೆಯಷ್ಟು ಮಳೆಯಾಗಿದ್ದರೆ ಇಷ್ಟು ಹೊತ್ತಿಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಬಿರುಸಿನಿಂದ ನಡೆಯಲಾರಂಭಿಸಿರುತ್ತಿತ್ತು. ಆದರೆ ಮಳೆಯೇ ಬಾರದಿದ್ದರಿಂದ ರೈತರು ಹೊಲದತ್ತ ಮುಖವನ್ನೇ ಹಾಕದೆ ಆಕಾಶ ನೋಡುತ್ತಾ ಕುಳಿತಿದ್ದಾರೆ.

ಮಳೆ ಕೊರತೆಯಿಂದ ಒಂದು ಕಡೆ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಇನ್ನೊಂದು ಕಡೆ ಜೂನ್ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆಯನ್ನು ಉಳಿಸಿಕೊಳ್ಳುವುದು ಅನ್ನದಾತನಿಗೆ ಸವಾಲಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *

*