ಶಿವಮೊಗ್ಗ: ಬಸ್ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮುರುಘಾಮಠ ಕ್ರಾಸ್ ಬಳಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ ಸಾಗರದಿಂದ ಶಿವಮೊಗ್ಗ ಕಡೆಗೆ ಹಾಗೂ ಎರ್ಟಿಗಾ ಕಾರು ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಈ ವೇಳೆ ಮುರುಘಾಮಠ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಬಸ್ಸು ಹಾಗೂ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪ್ರಾಥಮಿಕ ಮಾಹಿತಿಯನುಸಾರ ಕಾರಿನಲ್ಲಿದ್ದವರು ದೊಡ್ಡಬಳ್ಳಾಪುರದವರು ಎನ್ನಲಾಗಿದ್ದು, ಮೃತರ ವಿವರ ...
Read More »Tag Archives: police
ತುಂಗಾ ಚಾನಲ್ ನಲ್ಲಿ ಈಜಲು ಹೋಗಿದ್ದ ಬಾಲಕ ಸಾವು
ಶಿವಮೊಗ್ಗ: ಕಲ್ಲೂರು ಮಂಡ್ಲಿ ಸಮೀಪದ ಬಂಡೆ ಕಲ್ಲೂರು ತುಂಗಾ ಚಾನಲ್ ನಲ್ಲಿ ಈಜಲು ಹೋದ ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಹಳೇ ಮಂಡ್ಲೀ ನಿವಾಸಿ ಮೋಹಿತ್(15) ಮೃತ ಬಾಲಕ. ಬುಧವಾರ ಸ್ನೇಹಿತರೊಂದಿಗೆ ಈಜಲು ಹೋದಾಗ ಚಾನಲ್ ನಲ್ಲಿ ಮೋಹಿತ್ ನಾಪತ್ತೆಯಾಗಿದ್ದ. ಬಳಿಕ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿತ್ತು. ಬುಧವಾರ ಸಂಜೆಯಿಂದ ರಾತ್ರಿವರೆಗೂ ಶೋಧ ಕಾರ್ಯ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಗುರುವಾರ ಸಂಜೆ ಕಾರ್ಯಾಚರಣೆ ಮುಂದುವರೆಸಿದಾಗ ಶವ ಪತ್ತೆಯಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಟಿಟಿ – ಜೀಪ್ ನಡುವೆ ಢಿಕ್ಕಿ- ದೇವರ ದರ್ಶನಕ್ಕೆ ಬಂದವರಿಗೆ ಆಘಾತ
ಶಿವಮೊಗ್ಗ: ಕೊಡಚಾದ್ರಿಗೆ ತೆರಳುತ್ತಿದ್ದ ಜೀಪ್ ಹಾಗೂ ಕೊಲ್ಲೂರಿಗೆ ತೆರಳುತ್ತಿದ್ದ ಟಿಟಿ ನಡುವೆ ಢಿಕ್ಕಿಯಾಗಿ ಹಲವರು ಗಾಯಗೊಂಡ ಘಟನೆ ನಿಟ್ಟೂರಿನಲ್ಲಿ ನಡೆದಿದೆ. ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಮರಕುಟಿಗ ಬಳಿ ಇಂದು ಬೆಳಿಗ್ಗೆ ಘಟನೆ ನಡೆದಿದ್ದು, 8 ಜನರು ಗಾಯಗೊಂಡಿದ್ದಾರೆ. ದೇವರ ದರ್ಶನಕ್ಕೆ ಬಂದವರಿಗೆ ಅಪಘಾತ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಮುಗಿಸಿ, ಕೊಡಚಾದ್ರಿ ಪ್ರವಾಸಕ್ಕೆ 8 ಜನರು ಜೀಪ್ ನಲ್ಲಿ ತೆರಳುತ್ತಿದ್ದರು. ಇನ್ನೋಂಡೆದೆ ಶಿವಮೊಗ್ಗದಿಂದ ಟಿಟಿಯಲ್ಲಿ ಕೊಲ್ಲೂರು ಹಾಗೂ ಸಿಗಂದೂರು ದೇವಿಯ ದರ್ಶನಕ್ಕೆ ಹೊರಟ್ಟಿದ್ದರು. ಈ ನಡುವೆ ಮರಕುಟಿಗ ಬಳಿ ಅಪಘಾತ ನಡೆದಿದ್ದು, ಜೀಪ್ ...
Read More »ಬಸ್ ಹಾಗೂ ಬೈಕ್ ಢಿಕ್ಕಿ: ಇಬ್ಬರು ಯುವಕರು ಸಾವು
ಶಿವಮೊಗ್ಗ: ಬಸ್ ಹಾಗೂ ಬೈಕ್ ಢಿಕ್ಕಿಯಾಗಿ ಇಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಬಸ್ ಹಾಗೂ ಬೈಕ್ ನಡುವೆ ಢಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವನನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಮೃತದೇಹಗಳನ್ನು ಮೆಗ್ಗಾನ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಮೃತರ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪೂರ್ವ ...
Read More »ಗಂಡನಿಂದ ಭೀಕರವಾಗಿ ಹೆಂಡತಿ ಕೊಲೆ: ಆರೋಪಿ ಅಂದರ್
ಶಿವಮೊಗ್ಗ: ಪತಿಯಿಂದಲೇ ಪತ್ನಿ ಭೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನಗರದ ವಾದಿ-ಎ-ಹುದಾದ 5 ಕ್ರಾಸ್ ನಲ್ಲಿ ಘಟನೆ ನಡೆದಿದ್ದು, ರುಕ್ಸಾನ(38) ಎಂಬ ಮಹಿಳೆ ಕೊಲೆಯಾಗಿದ್ದಾರೆ. ಎಸಿ ಮೆಕ್ಯಾನಿಕ್ ಯೂಸಫ್ ಹಾಗೂ ಆತನ ಪತ್ನಿ ರುಕ್ಸಾನ ನಡುವೆ ಗಲಾಟೆಯಾಗಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ. ಕೌಟುಂಬಿಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಕೊಲೆ ಆರೋಪಿ ಯೂಸಫ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ತುಂಗಾ ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆ
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಅರಳಿ ಸುರಳಿಯ ಯುನಿಯನ್ ಬ್ಯಾಂಕ್ ನ ಮ್ಯಾನೇಜರ್ ಎನ್.ಶ್ರೀವಾಸ್ತವ (38) ಮೃತಪಟ್ಟಿದಾರೆ. ತೀರ್ಥಹಳ್ಳಿ ಪಟ್ಟಣದ ತುಂಗಾನದಿ ತೀರದ ರಾಮಕೊಂಡದ ಬಳಿ ಶ್ರೀವಾಸ್ತವ ಅವರ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಬ್ಯಾಂಕ್ ಮ್ಯಾನೇಜರ್ ಶ್ರೀವಾಸ್ತವ ಅವರು, ಪಟ್ಟಣದ ತುಂಗಾ ನದಿಯಲ್ಲಿ ಸೋಮವಾರದಿಂದ ಕಣ್ಮರೆಯಾಗಿದ್ದರು. ನದಿಯ ದಡದಲ್ಲಿ ಶ್ರೀವಾಸ್ತವ ಅವರ ಮೊಬೈಲ್, ಬಟ್ಟೆ ಹಾಗೂ ಚಪ್ಪಲಿ ಇದ್ದ ಕಾರಣ ನದಿಯಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ಕೂಡ ನಡೆಸಲಾಗಿತ್ತು. ಇಂದು ಬೆಳಿಗ್ಗೆ ...
Read More »ತಾಳಗುಪ್ಪದಲ್ಲಿ ಸೈಕಲ್ ಸವಾರ ಸ್ಥಳದಲ್ಲೇ ಸಾವು.
ಶಿವಮೊಗ್ಗ: ಸೈಕಲ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಸೈಕಲ್ ಸವಾರ ಅಣ್ಣಪ್ಪ ತಿರುಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ- 206 ರಲ್ಲಿ ತಾಳಗುಪ್ಪದ ಬಳಿ ನಡೆದ ಘಟನೆ ನಡೆದಿದ್ದು, ತಾಳಗುಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ಸಹ ದಾಖಲಾಗಿದೆ.
Read More »ಶಿವಮೊಗ್ಗದಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಗೆ ಕೋವಿಡ್ ವ್ಯಾಕ್ಸಿನ್.
ಶಿವಮೊಗ್ಗ: ಕರೋನಾ ವಿರುದ್ಧ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆ ಜಿಲ್ಲೆಯಲ್ಲಿ ಇಂದಿನಿಂದ ಆರಂಭವಾಗಿದೆ. ಶಿವಮೊಗ್ಗದ ತುಂಗಾನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಗೆ ಕೋವಿಡ್ ವ್ಯಾಕ್ಸಿನ್ ಲೈವ್ ರನ್ ನಡೆಸಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಶಿವಮೊಗ್ಗ, ಮೈಸೂರು, ಕೊಪ್ಪಳ ಹಾಗೂ ಧಾರವಾಡ ಜಿಲ್ಲೆಯಲ್ಲಿ ವ್ಯಾಕ್ಸಿನ್ ಲೈವ್ ರನ್ ನಡೆಸಲಾಗಿದ್ದು, ತಲಾ 50 ಸಿಬ್ಬಂದಿಯನ್ನು ಇದಕ್ಕಾಗಿ ಆಯ್ಕೆ ಸಹ ಮಾಡಲಾಗಿತ್ತು. ಶಿವಮೊಗ್ಗದ ತುಂಗಾನಗರ ಪ್ರಾಥಮಿಕ ಆರೋಗ್ಯ ...
Read More »ಹುಣಸೋಡು ಕ್ವಾರಿಯಲ್ಲಿ ಜೀವಂತ ಜಿಲೆಟಿನ್ ಕಡ್ಡಿಗಳು ಪತ್ತೆ
ಶಿವಮೊಗ್ಗ: ತಾಲೂಕಿನ ಅಬ್ಬಲಗೆರೆ ಸಮೀಪದ ಹುಣಸೋಡು ಕ್ವಾರಿಯಲ್ಲಿ ಜೀವಂತ ಜಿಲೆಟಿನ್ ಕಡ್ಡಿ ಪತ್ತೆಯಾಗಿವೆ. ಕ್ವಾರಿಯಲ್ಲಿ ಸ್ಫೋಟದ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತಂಡಕ್ಕೆ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಶೋಧವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಪೂರ್ವ ವಲಯ ಐಜಿಪಿ ಎಸ್.ರವಿ, ಹುಣಸೋಡು ಕ್ವಾರಿಯಲ್ಲಿ ನಡೆದ ಘಟನೆ ಸಂಬಂಧ ಸ್ಫೋಟಕ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ತನಿಖೆಗಾಗಿ 6 ತಂಡಗಳನ್ನು ಸಹ ಮಾಡಿದ್ದೇವೆ. ಸ್ಫೋಟಗೊಂಡ ಸ್ಥಳದ 10 ಕ್ಕೂ ಹೆಚ್ಚು ಕಡೆ ಜೀವಂತ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದು, ಎಲ್ಲವನ್ನು ...
Read More »
C News TV Kannada News Online in cnewstv