ಶಿವಮೊಗ್ಗ ನಗರದ ಹಲವು ವಾರ್ಡ್‍ಗಳ ವ್ಯಾಪ್ತಿಯಲ್ಲಿ ತೆರೆದ ಮ್ಯಾನ್‍ಹೋಲ್‍ಗಳು ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಮ್ಯಾನ್‍ಹೋಲ್‍ಗಳನ್ನು 10ದಿನಗಳ ಒಳಗಾಗಿ ಮುಚ್ಚದಿದ್ದರೆ ಸಂಬಂಧಪಟ್ಟ ವ್ಯಾಪ್ತಿಯ ಇಂಜಿನಿಯರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಎಚ್ಚರಿಕೆ ನೀಡಿದ್ದಾರೆ. ವಾರ್ಡ್‍ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ತೆರೆದ ಮ್ಯಾನ್‍ಹೋಲ್‍ಗಳು ಕಂಡು ಬಂದಿದ್ದು, ಅವುಗಳನ್ನು ತಕ್ಷಣ ಮುಚ್ಚುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಎಚ್ಚರಿಕೆ ನೀಡಲಾಗಿದೆ. ತೆರೆದ ಮ್ಯಾನ್‍ಹೋಲ್‍ಗಳಿಂದಾಗಿ ಯಾವುದೇ ಅವಘಡಗಳು ಸಂಭವಿಸುವ ಮೊದಲೇ ಮುಚ್ಚಬೇಕು. ತೆರೆದ ಮ್ಯಾನ್‍ಹೋಲ್‍ನಿಂದ ಅವಘಡಗಳು ...
Read More »Tag Archives: ಶಿವಮೊಗ್ಗ
6 ದಿನ ಶಿವಮೊಗ್ಗದಲ್ಲಿ ನಡೆಯಲಿದೆ ವಾಯುದಳದ ನೇಮಕಾತಿ ರ್ಯಾಲಿ..
ಶಿವಮೊಗ್ಗದಲ್ಲಿ ಜುಲೈ 17ರಿಂದ 22ರವರೆಗೆ ನಡೆಯಲಿರುವ ವಾಯುಸೇನೆಯ ನೇಮಕಾತಿ ರ್ಯಾಲಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರತಿ ದಿನ 2ಸಾವಿರ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಜುಲೈ 17 ಮತ್ತು 18ರಂದು ಇಂಡಿಯನ್ ಏರ್‍ಫೋರ್ಸ್ ಪೋಲಿಸ್ ಮತ್ತು ಅಟೋಮೊಬೈಲ್ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ದಿನಗಳಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಯ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಜುಲೈ ...
Read More »ಶಿವಮೊಗ್ಗದಲ್ಲಿ ಫಾರ್ಮ ಹಬ್ ಸ್ಥಾಪಿಸುವತ್ತ ಶಿವಮೊಗ್ಗದ ಶಾಸಕ ಶ್ರೀ ಕೆ.ಎಸ್.ಈಶ್ವರಪ್ಪನವವರ ಪ್ರಯತ್ನ
ಶಿವಮೊಗ್ಗದಲ್ಲಿ ಫಾರ್ಮ ಹಬ್ ಸ್ಥಾಪಿಸುವತ್ತ ಶಿವಮೊಗ್ಗದ ಶಾಸಕ ಶ್ರೀ ಕೆ.ಎಸ್.ಈಶ್ವರಪ್ಪನವವರ ಪ್ರಯತ್ನ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕ ಘಟಕಗಳು ಸ್ಥಾಪನೆಯಾಗಬೇಕು.ಈ ಭಾಗದ ವಿದ್ಯಾವಂತ ಯುವಕ-ಯುವತಿಯರಿಗೆ ಇಲ್ಲಿಯೇ ಉದ್ಯೋಗ ದೊರೆಯುವಂತಾಗಬೇಕು. ಇಂತಹುದೊಂದು ಜನಪರ ಬೇಡಿಕೆಯ ತೀವ್ರತೆಯನ್ನು ಮನಗಂಡ ಶಿವಮೊಗ್ಗ ನಗರದ ಜನಪ್ರಿಯ ಶಾಸಕರಾದ ಸಮ್ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪನವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಶಿವಮೊಗ್ಗ ನಗರದ ಸಮೀಪ ಔಷಧ ಉತ್ಪಾದನಾ ಕಾರ್ಖಾನೆಗಳ ಸಮುಚ್ಛಯ (Pharma Hub) ಸ್ಥಾಪಿಸಬೇಕೆಂಬ ಸ್ಥಳೀಯ ಶಿವಮೊಗ್ಗ ನಗರ ಔಷಧ ವ್ಯಾಪಾರಿಗಳ ಸಂಘದ ಮನವಿಯನ್ನು ಸ್ವೀಕರಿಸಿದ ಸನ್ಮಾನ್ಯ ಶಾಸಕರು ಈ ಬೇಡಿಕೆಯ ಮಹತ್ವವನ್ನು ...
Read More »ಸಾಗರದ ಉಳ್ಳೂರು ಕ್ರಾಸ್ ಬಳಿ ಸ್ಲೀಪರ್ ಬಸ್ ಪಲ್ಟಿ ಮೂರು ಸಾವು ಹಲವರಿಗೆ ಗಾಯ..
ಶಿವಮೊಗ್ಗದ ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಬಸ್ಸ್, ಸಾಗರ ತಾಲೂಕಿನ ಉಳ್ಳೂರು ಸಮೀಪ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ..ಕೀರ್ತನಾ(12), ಸುಜಾತ(40), ಮಹಮದ್ ಯಾಸಿನ್(16) ಎಂಬ ಮೂವರು ಪ್ರಯಾಣಿಕರ ಸಾವನ್ನಪ್ಪಿದ್ದಾರೆ. ಪಲ್ಟಿಯಾಗಿರುವ ಬಸ್ ನ ಅಡಿಯಲ್ಲಿ ಹಲವು ಪ್ರಯಾಣಿಕರು ಸಿಲುಕಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ..
Read More »
Recent Comments