ಶಿವಮೊಗ್ಗದಲ್ಲಿ ಫಾರ್ಮ ಹಬ್ ಸ್ಥಾಪಿಸುವತ್ತ ಶಿವಮೊಗ್ಗದ ಶಾಸಕ ಶ್ರೀ ಕೆ.ಎಸ್.ಈಶ್ವರಪ್ಪನವವರ ಪ್ರಯತ್ನ
ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕ ಘಟಕಗಳು ಸ್ಥಾಪನೆಯಾಗಬೇಕು.ಈ ಭಾಗದ ವಿದ್ಯಾವಂತ ಯುವಕ-ಯುವತಿಯರಿಗೆ ಇಲ್ಲಿಯೇ ಉದ್ಯೋಗ ದೊರೆಯುವಂತಾಗಬೇಕು. ಇಂತಹುದೊಂದು ಜನಪರ ಬೇಡಿಕೆಯ ತೀವ್ರತೆಯನ್ನು ಮನಗಂಡ ಶಿವಮೊಗ್ಗ ನಗರದ ಜನಪ್ರಿಯ ಶಾಸಕರಾದ ಸಮ್ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪನವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಶಿವಮೊಗ್ಗ ನಗರದ ಸಮೀಪ ಔಷಧ ಉತ್ಪಾದನಾ ಕಾರ್ಖಾನೆಗಳ ಸಮುಚ್ಛಯ (Pharma Hub) ಸ್ಥಾಪಿಸಬೇಕೆಂಬ ಸ್ಥಳೀಯ ಶಿವಮೊಗ್ಗ ನಗರ ಔಷಧ ವ್ಯಾಪಾರಿಗಳ ಸಂಘದ ಮನವಿಯನ್ನು ಸ್ವೀಕರಿಸಿದ ಸನ್ಮಾನ್ಯ ಶಾಸಕರು ಈ ಬೇಡಿಕೆಯ ಮಹತ್ವವನ್ನು ಅರಿತು ಕೇಂದ್ರ ಸರ್ಕಾರದ ರಾಸಾಯನಿಕ ಹಾಗು ರಸಗೊಬ್ಬರ ಸಚಿವರಾದ ಶ್ರೀ ಸದಾನಂದ ಗೌಡರಿಗೆ ಈ ಕುರಿತು ಮನವಿಯನ್ನು ಸಲ್ಲಿಸಿ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಈ ಕಾರ್ಖಾನೆಗಳ ಸಮುಚ್ಛಯದ ಅನಿವಾರ್ಯತೆಯ ಕುರಿತು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಔಷಧಿ ಉತ್ಪಾದನ ಕಾರ್ಖಾನೆಗಳ ಸಂಘಟನೆಯ ಪದಾದಿಕಾರಿಗಳು ಈ ಸಂದರ್ಭದಲ್ಲಿ ಮಾನ್ಯ ಶಿವಮೊಗ್ಗ ನಗರದ ಶಾಸಕರ ಜೊತೆ ಇದ್ದರು. ಸಕಾರಾತ್ಮಕವಾಗಿ ಮನವಿ ಸ್ವೀಕರಿಸಿದ ಕೇಂದ್ರ ಸಚಿವರು ಈ ಕುರಿತು ಭರವಸೆಯನ್ನು ನೀಡಿದರು
ಸುಮಾರು 200 ಎಕರೆ ಭೂಪ್ರದೇಶ ಈ ಸಮುಚ್ಛಯದ ನಿರ್ಮಾಣಕ್ಕೆ ಬೇಕಾಗಲಿದ್ದು. ಇದರ ಮೂಲಕ ಈ ಭಾಗದ ಅನೇಕರಿಗೆ ವಿಫುಲ ಉದ್ಯೋಗಾವಕಾಶ ದೊರೆಯಲಿದ್ದು.ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಲಿದೆ ಈ ಒಂದು ಉದ್ದೇಶಕ್ಕೆ ಬೇಕಾಗುವ ಭೂ ಪ್ರದೇಶವನ್ನು ಗುರುತಿಸುವ ಸಲುವಾಗಿ ಬರುವ 27ರ ಗುರುವಾರದಂದು ಸನ್ಮಾನ್ಯ ಶಾಸಕರು ಕರ್ನಾಟಕ ರಾಜ್ಯ ಕೈಗಾರಿಕ ಸಚಿವರಾದ ಶ್ರೀ ಕೆ.ಜೆ ಜಾರ್ಜ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ.
Recent Comments