ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬೀದಿಬದಿ ವ್ಯಾಪಾರಿಗಳಿಗೆ ಏಕಾಏಕಿ ಒಕ್ಕಲೇಬಿಸಬೇಡಿ.
Cnewstv.in / 25.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬೀದಿಬದಿ ವ್ಯಾಪಾರಿಗಳಿಗೆ ಏಕಾಏಕಿ ಒಕ್ಕಲೇಬಿಸಬೇಡಿ.
ಶಿವಮೊಗ್ಗ : ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಒಕ್ಕಲೇಬಿಸಬೇಡಿ ಎಂದು ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಗುಹಾಹಟಿಯ ಸಿಕ್ಸ್ ಮೈಲ್ ನ 150 ವ್ಯಾಪಾರಿಗಳನ್ನು ಮೈ11 ರಂದು ಹೊರಹಾಕಿ, ಬುಲ್ಲೋಜರ್ ಗಳನ್ನು ತಂದು
ಗಾಡಿಗಳನ್ನು ನೆಲಸಮ ಮಾಡಿರುವ ದೃಶ್ಯ ಮಾಧ್ಯಮದಲ್ಲಿ ಕಂಡಿರುತ್ತೇವೆ. ಇದನ್ನು ಶಿವಮೊಗ್ಗ ಜಿಲ್ಲಾ ಬೀದಿ ಬದಿ
ವ್ಯಾಪಾರಸ್ಥರ ಒಕ್ಕೂಟವು ಖಂಡಿಸುತ್ತದೆ. ಕಾಶ್ಮೀರ, ಉತ್ತರಾಖಂಡ, ಮತ್ತು ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಇದೇ ರೀತಿಯ ಸುದ್ದಿಗಳು ಬರುತ್ತಿದೆ.
ಕರ್ನಾಟಕ ರಾಜ್ಯದಲ್ಲಿ, ಬಹಳಷ್ಟು ಜನರು ವಿದ್ಯಾವಂತರು, ಪದವಿಯ ಪಡೆದು ನಿರೋದ್ಯೋಗಿಗಳಾಗಿದ್ದು, ಉದ್ಯೋಗ
ವಿಲ್ಲದೆ, ಬೀದಿಬದಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿರುವರು, ಹಾಗೆ ಓದು ಬರಹ ಬರೆದವರು ವ್ಯಾಪಾರ ಮಾಡುತ್ತಿರುವರು, ಅವರಿಗೆ NGOಗಳ ಮೂಲಕ ವ್ಯಾಪಾರ ಮಾಡುವ ಸ್ಥಳಗಳಿಗೆ ಹೋಗಿ, GPS ನೊಂದಿಗೆ ಸಮೀಕ್ಷೆ ಮಾಡಿ, ಆಫ್ ಮೂಲಕ ಎಲ್ಲಾ ಸ್ಥಳೀಯ ದಾಖಲುಗಳನ್ನು ಪರೀಶಿಲನೆ ಮಾಡಿ ಬಾರ್ ಕೋಡ್ ನೊಂದಿಗೆ, ಡಿಜಿಟಲ್ ಕಾರ್ಡ್ಟಿ ಟಿವಿಸಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ವಿತರಣೆ ಮಾಡಬೇಕು.
ಪ್ರತಿ ತಿಂಗಳು ಬೀದಿಬದಿ ವ್ಯಾಪಾರಿಗಳ ಕುಂದು ಕೊರತೆಗಳ ಬಗ್ಗೆ ಟಿವಿಸಿ ಸದಸ್ಯರ ಸಮಿತಿಯ ಸಭೆ ಯಾಗಬೇಕು, ಅ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಪ್ಪದೇ ಭಾಗವಹಿಸಲು ಆದೇಶವಾಗಬೇಕು, ಸಮಿತಿಯ ಸಭೆಗೆ ಹಾಜರಾದ ಸದಸ್ಯರಿಗೆ ಗೌರವಧನ ನೀಡ ಬೇಕು ಎಂದು ವಿನಂತಿಸಿದರು.
ಇದನ್ನು ಒದಿ : https://cnewstv.in/?p=9930
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬೀದಿಬದಿ ವ್ಯಾಪಾರಿಗಳಿಗೆ ಏಕಾಏಕಿ ಒಕ್ಕಲೇಬಿಸಬೇಡಿ. 2022-05-25
Recent Comments