ಸಾಂದರ್ಭಿಕ ಚಿತ್ರ
ಭದ್ರಾ ಜಲಾಶಯದಿಂದ ನೀರು ಬಿಡುಗಡೆ.. ನದಿಪಾತ್ರದ ಜನರಿಗೆ ಎಚ್ಚರಿಕೆ..
Cnewstv.in / 07.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಭದ್ರಾ ಜಲಾಶಯದಿಂದ ನೀರು ಬಿಡುಗಡೆ.. ನದಿಪಾತ್ರದ ಜನರಿಗೆ ಎಚ್ಚರಿಕೆ..
ಶಿವಮೊಗ್ಗ : 2021-22 ನೇ ಸಾಲಿನಲ್ಲಿ ಗದಗ ಬೆಟಗೇರಿ ಹಾಗೂ ಇನ್ನಿತರೆ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ಜಲಾಶಯದಿಂದ ಭದ್ರಾ ನದಿ ಮೂಲಕ ಮೇ 06 ರಂದು ರಾತ್ರಿ.1030 ರಿಂದ ಈ ಕೆಳಕಂಡಂತೆ ನೀರನ್ನು ಹರಿಸಲಾಗುವುದು.
ಮೇ 06 ರಂದು 3800 ಕ್ಯೂಸೆಕ್ಸ್, ಮೇ 07 ರಂದು 4340 ಕ್ಯೂಸೆಕ್ಸ್, ಮೇ 08 ರಂದು 4520 ಕ್ಯೂಸೆಕ್ಸ್, ಮೇ 09 ರಂದು 4520 ಕ್ಯೂಸೆಕ್ಸ್, ಮೇ 10 ರಂದು 4520 ಕ್ಯೂಸೆಕ್ಸ್ ಮತ್ತು ಮೇ 11 ರಂದು 4340 ಕ್ಯೂಸೆಕ್ಸ್ ಒಟ್ಟು 26040(2.25 ಟಿಎಂಸಿ) ಕ್ಯೂಸೆಕ್ಸ್ ನೀರು ಹರಿಸಲಾಗುವುದು.
ಆದ್ದರಿಂದ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲೀ ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೇಲೆ ತಿಳಿಸಿದ ಅವಧಿಯಲ್ಲಿ ರೈತಬಾಂಧವರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್‍ಸೆಟ್‍ಗಳಿಂದ ನೀರೆತ್ತುವುದನ್ನು ಸಹ ನಿಷೇಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=9711
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಭದ್ರಾ ಜಲಾಶಯದಿಂದ ನೀರು ಬಿಡುಗಡೆ.. ನದಿಪಾತ್ರದ ಜನರಿಗೆ ಎಚ್ಚರಿಕೆ.. 2022-05-07
Recent Comments