Breaking News

KGF 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಯುವಕನ‌ ಮೇಲೆ ಗುಂಡಿನ ದಾಳಿ.

Cnewstv.in / 20.04.2022 /  ಹಾವೇರಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

KGF 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಯುವಕನ‌ ಮೇಲೆ ಗುಂಡಿನ ದಾಳಿ.

ಹಾವೇರಿ : ಕೆಜಿಎಫ್ 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಪ್ರೇಕ್ಷಕರ ಮಧ್ಯದಲ್ಲಿ ಯುವಕನ ಮೇಲೆ ಗುಂಡು ಹಾರಿಸಿದ ಘಟನೆ ಹಾವೇರಿಯ ಶಿಗ್ಗಾಂನಲ್ಲಿ ನಡೆದಿದೆ.

ಹಾವೇರಿ : ಕೋಪದ ಕೈಯಲ್ಲಿ ಬುದ್ಧಿ ಕೊಟ್ಟರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇದ್ದಾಗಿದೆ. ಕೆಜಿಎಫ್ 2 ಚಿತ್ರ ವೀಕ್ಷಿಸುತ್ತಿದ್ದಾಗ ಪ್ರೇಕ್ಷಕನು ಎದುರುಗಡೆ ಸೀಟಿನ ಮೇಲೆ ಕಾಲು ಹಾಕಿದ್ದಕ್ಕೆ ಕೋಪಗೊಂಡು ಗುಂಡು ಹಾರಿಸಿದ್ದಾನೆ.

ರಾಜಶ್ರೀ ಚಿತ್ರಮಂದಿರದಲ್ಲಿ ವಸಂತ್ ಕುಮಾರ್ ಹಾಗೂ ಆತನ ಸ್ನೇಹಿತರು ಕೆಜಿಎಫ್2 ಚಿತ್ರವನ್ನು ವೀಕ್ಷಿಸಲು ಬಂದಿದ್ದರು. ಈ ವೇಳೆ ವಸಂತ್ ಕುಮಾರ್ ಎದುರುಗಡೆ ಸೀಟಿನ ಮೇಲೆ ಕಾಲು ಹಾಕಿದ್ದಕ್ಕೆ ಆರೋಪಿ ಹಾಗೂ ವಸಂತ ನಡುವೆ ಮಾತಿನ ಚಕಮಕಿಯಾಗಿದ್ದು ನಂತರ ಅದು ವಿಪರೀತಕ್ಕೆ ಹೋಗಿ ಆರೋಪಿ ವಸಂತ್ ಕುಮಾರ್ ನ ಮೇಲೆ ಅರೋಪಿ ಗುಂಡು ಹಾರಿಸಿದ್ದಾರೆ.

ಗುಂಡೇಟು ಬಿದ್ದ ವಸಂತಕುಮಾರ್ ನನ್ನ ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡುಹಾರಿಸಿದ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಒದಿ‌ : https://cnewstv.in/?p=9498

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*